ಕೊಂಕಣಿ ಸಂಪ್ರದಾಯದಂತೆ ದಾಂಪತ್ಯಕ್ಕೆ ಅಡಿ ಇಟ್ಟ ದೀಪಿಕಾ-ರಣ್ವೀರ್
ಬಾಲಿವುಡ್ ನ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ರಣ್ವೀರ್ ಸಿಂಗ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಬೆಂಗಳೂರು ಬೆಡಗಿ ಸ್ಟಾರ್ ನಟಿ ದೀಪಿಕಾ ಪಡುಕೋಣೆಯವರನ್ನ ಇಂದು ರಣ್ವೀರ್ ಸಿಂಗ್ ಇಟಲಿಯಲ್ಲಿ ವರಿಸಿದರು.
ಇಟಲಿಯ ಕಾಲಮಾನ ಮುಂಜಾನೆ ಏಳು ಗಂಟೆಗೆ ಇದ್ದ ಶುಭ ಮುಹೂರ್ತದಲ್ಲಿ ದೀಪಿಕಾ-ರಣ್ವೀರ್ ಜೋಡಿ ವಿವಾಹ ಬಂಧನಕ್ಕೆ ಒಳಗಾದರು.
ಕೊಂಕಣಿ ಸಂಪ್ರದಾಯದಂತೆ ಇಂದಿನ ಮದುವೆ ನಡೆದಿದ್ದು, ನಾಳೆ ಸಿಖ್ ಸಂಪ್ರದಾಯದಂತೆ ಮತ್ತೊಮ್ಮೆ ಜೋಡಿ ವೈವಾಹಿಕ ಬದುಕಿಗೆ ಅಡಿ ಇಡಲಿದೆ. ಮುಂದೆ ಓದಿರಿ...

ಆಪ್ತೇಷ್ಟರಿಗೆ ಮಾತ್ರ ಆಹ್ವಾನ
ಇಟಲಿಯ ಲೇಕ್ ಕೋಮೋದಲ್ಲಿ ನಡೆದ ದೀಪಿಕಾ ರಣ್ವೀರ್ ವಿವಾಹ ಮಹೋತ್ಸವಕ್ಕೆ ಕೇವಲ ಕುಟುಂಬಸ್ಥರು ಮತ್ತು ಚಿತ್ರರಂಗದ ಪ್ರಮುಖರು ಸಾಕ್ಷಿಯಾದರು.

ಫೋಟೋ ಲೀಕ್ ಆಗಿಲ್ಲ
ಅದ್ದೂರಿ ಮದುವೆ ಸಮಾರಂಭದ ಯಾವುದೇ ಫೋಟೋಗಳೂ ಮಾಧ್ಯಮಗಳ ಕೈ ಸೇರದಂತೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗದಂತೆ ದೀಪಿಕಾ ರಣ್ವೀರ್ ಜೋಡಿ ಎಚ್ಚರಿಕೆ ವಹಿಸಿದೆ.

ನಿನ್ನೆ ಕೊಂಕಣಿ ಸಂಪ್ರದಾಯದಂತೆ ನಿಶ್ಚಿತಾರ್ಥ
ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿನ್ನೆ ಕೊಂಕಣಿ ಸಂಪ್ರದಾಯದಂತೆ ದೀಪಿಕಾ ರಣ್ವೀರ್ ನಿಶ್ಚಿತಾರ್ಥ ನಡೆದಿತ್ತು. ಜೊತೆಗೆ ಪಂಜಾಬಿ ಶೈಲಿಯ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿದ್ದವು.

ರಿಸೆಪ್ಷನ್ ಯಾವಾಗ?
ದೀಪಿಕಾ-ರಣ್ವೀರ್ ಸಿಂಗ್ ಸ್ಟಾರ್ ಜೋಡಿಯ ರಿಸೆಪ್ಷನ್ ನವೆಂಬರ್ 21 ರಂದು ಬೆಂಗಳೂರಿನಲ್ಲಿ ಹಾಗೂ ನವೆಂಬರ್ 28ರಂದು ಮುಂಬೈನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯಲಿದೆ.


Click it and Unblock the Notifications











