ಸಿಂಧಿ ಸಂಪ್ರದಾಯದಂತೆ ಇಂದು ಮದುವೆ ಆದ ದೀಪಿಕಾ-ರಣ್ವೀರ್
ಕೊಂಕಣಿ ಬ್ರಾಹ್ಮಣ ಸಂಪ್ರದಾಯದಂತೆ ನಿನ್ನೆಯಷ್ಟೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದು ಸಿಂಧಿ ಸಂಪ್ರದಾಯದಂತೆ ಇಬ್ಬರೂ ವೈವಾಹಿಕ ಬದುಕಿಗೆ ಅಡಿ ಇಟ್ಟಿದ್ದಾರೆ.
ದೀಪಿಕಾ ಮೂಲತಃ ಕೊಂಕಣಿ. ಇನ್ನೂ ರಣ್ವೀರ್ ಸಿಂಗ್ 'ಸಿಖ್' ಸಮುದಾಯಕ್ಕೆ ಸೇರಿದವರು. ಹೀಗಾಗಿ, ಎರಡೂ ಸಂಪ್ರದಾಯಗಳಂತೆ ವಿವಾಹ ಮಹೋತ್ಸವ ಶಾಸ್ತ್ರೋಕ್ತವಾಗಿ ನಡೆದಿದೆ.
ಥೇಟ್ ಪಂಜಾಬಿ ಸ್ಟೈಲ್ ನಲ್ಲಿ ವರ ರಣ್ವೀರ್ ಸಿಂಗ್ ಕಡೆಯವರು ಮದುವೆ ಮಂಟಪಕ್ಕೆ ಆಗಮಿಸಿದ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಟಲಿಯ ಲೇಕ್ ಕೋಮೋ ನಿನ್ನೆ ಬಿಳಿ ಹೂಗಳಿಂದ ಸಿಂಗಾರಗೊಂಡಿತ್ತು. ಇಂದು ಕೆಂಪು ಹೂವುಗಳಿಂದ ಮದುವೆ ಮಂಟಪ ಸಿದ್ಧಗೊಂಡಿದೆ.

ಕುಟುಂಬಸ್ಥರು ಮತ್ತು ಆಪ್ತರು ಸೇರಿದಂತೆ ಕೇವಲ ನಲವತ್ತು ಮಂದಿ ಮಾತ್ರ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆಗೆ ಸಾಕ್ಷಿ ಆದರು. ಲೇಕ್ ಕೋಮೋ ಒಳಗೆ ಪ್ರವಾಸಿಗರಿಗಾಗಲಿ ಮಾಧ್ಯಮಗಳಿಗಾಗಲಿ ಪ್ರವೇಶ ಇರಲಿಲ್ಲ. ಹೀಗಾಗಿ ಮದುವೆ ಶಾಸ್ತ್ರದ ಫೋಟೋಗಳು ಬಹಿರಂಗಗೊಂಡಿಲ್ಲ.
ನವೆಂಬರ್ 21 ರಂದು ಬೆಂಗಳೂರಿನಲ್ಲಿ ಮತ್ತು ನವೆಂಬರ್ 28 ರಂದು ಮುಂಬೈನ ಪ್ರತಿಷ್ಟಿತ ಹೋಟೆಲ್ ನಲ್ಲಿ ದೀಪಿಕಾ-ರಣ್ವೀರ್ ಆರತಕ್ಷತೆ ನಡೆಯಲಿದೆ.


Click it and Unblock the Notifications











