twitter
    For Quick Alerts
    ALLOW NOTIFICATIONS  
    For Daily Alerts

    ಸಿಂಧಿ ಸಂಪ್ರದಾಯದಂತೆ ಇಂದು ಮದುವೆ ಆದ ದೀಪಿಕಾ-ರಣ್ವೀರ್

    |

    ಕೊಂಕಣಿ ಬ್ರಾಹ್ಮಣ ಸಂಪ್ರದಾಯದಂತೆ ನಿನ್ನೆಯಷ್ಟೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದು ಸಿಂಧಿ ಸಂಪ್ರದಾಯದಂತೆ ಇಬ್ಬರೂ ವೈವಾಹಿಕ ಬದುಕಿಗೆ ಅಡಿ ಇಟ್ಟಿದ್ದಾರೆ.

    ದೀಪಿಕಾ ಮೂಲತಃ ಕೊಂಕಣಿ. ಇನ್ನೂ ರಣ್ವೀರ್ ಸಿಂಗ್ 'ಸಿಖ್' ಸಮುದಾಯಕ್ಕೆ ಸೇರಿದವರು. ಹೀಗಾಗಿ, ಎರಡೂ ಸಂಪ್ರದಾಯಗಳಂತೆ ವಿವಾಹ ಮಹೋತ್ಸವ ಶಾಸ್ತ್ರೋಕ್ತವಾಗಿ ನಡೆದಿದೆ.

    ಕೊಂಕಣಿ ಸಂಪ್ರದಾಯದಂತೆ ದಾಂಪತ್ಯಕ್ಕೆ ಅಡಿ ಇಟ್ಟ ದೀಪಿಕಾ-ರಣ್ವೀರ್ ಕೊಂಕಣಿ ಸಂಪ್ರದಾಯದಂತೆ ದಾಂಪತ್ಯಕ್ಕೆ ಅಡಿ ಇಟ್ಟ ದೀಪಿಕಾ-ರಣ್ವೀರ್

    ಥೇಟ್ ಪಂಜಾಬಿ ಸ್ಟೈಲ್ ನಲ್ಲಿ ವರ ರಣ್ವೀರ್ ಸಿಂಗ್ ಕಡೆಯವರು ಮದುವೆ ಮಂಟಪಕ್ಕೆ ಆಗಮಿಸಿದ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಇಟಲಿಯ ಲೇಕ್ ಕೋಮೋ ನಿನ್ನೆ ಬಿಳಿ ಹೂಗಳಿಂದ ಸಿಂಗಾರಗೊಂಡಿತ್ತು. ಇಂದು ಕೆಂಪು ಹೂವುಗಳಿಂದ ಮದುವೆ ಮಂಟಪ ಸಿದ್ಧಗೊಂಡಿದೆ.

    Deepika Padukone-Ranveer Singh got married according to Sindhi Tradition

    ದೀಪ್ವೀರ್ ಮದುವೆ: ಪ್ಲೇನ್ ಮೂಲಕ ಗ್ರ್ಯಾಂಡ್ ಎಂಟ್ರಿಕೊಟ್ಟ ವರ ರಣ್ವೀರ್ ದೀಪ್ವೀರ್ ಮದುವೆ: ಪ್ಲೇನ್ ಮೂಲಕ ಗ್ರ್ಯಾಂಡ್ ಎಂಟ್ರಿಕೊಟ್ಟ ವರ ರಣ್ವೀರ್

    ಕುಟುಂಬಸ್ಥರು ಮತ್ತು ಆಪ್ತರು ಸೇರಿದಂತೆ ಕೇವಲ ನಲವತ್ತು ಮಂದಿ ಮಾತ್ರ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆಗೆ ಸಾಕ್ಷಿ ಆದರು. ಲೇಕ್ ಕೋಮೋ ಒಳಗೆ ಪ್ರವಾಸಿಗರಿಗಾಗಲಿ ಮಾಧ್ಯಮಗಳಿಗಾಗಲಿ ಪ್ರವೇಶ ಇರಲಿಲ್ಲ. ಹೀಗಾಗಿ ಮದುವೆ ಶಾಸ್ತ್ರದ ಫೋಟೋಗಳು ಬಹಿರಂಗಗೊಂಡಿಲ್ಲ.

    ಮೆಹಂದಿ ಸಮಾರಂಭದಲ್ಲಿ ಭಾವುಕರಾದ ದೀಪಿಕಾ: ಬಿಗಿದಪ್ಪಿದ ರಣ್ವೀರ್ ಮೆಹಂದಿ ಸಮಾರಂಭದಲ್ಲಿ ಭಾವುಕರಾದ ದೀಪಿಕಾ: ಬಿಗಿದಪ್ಪಿದ ರಣ್ವೀರ್

    ನವೆಂಬರ್ 21 ರಂದು ಬೆಂಗಳೂರಿನಲ್ಲಿ ಮತ್ತು ನವೆಂಬರ್ 28 ರಂದು ಮುಂಬೈನ ಪ್ರತಿಷ್ಟಿತ ಹೋಟೆಲ್ ನಲ್ಲಿ ದೀಪಿಕಾ-ರಣ್ವೀರ್ ಆರತಕ್ಷತೆ ನಡೆಯಲಿದೆ.

    English summary
    Deepika Padukone-Ranveer Singh got married according to Sindhi Tradition.
    Thursday, November 15, 2018, 19:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X