ಇಟಲಿ ತಲುಪಿದ ದೀಪಿಕಾ-ರಣ್ವೀರ್: ಮದುವೆಗೆ ಭರ್ಜರಿ ಸಿದ್ಧತೆ
ಬಾಲಿವುಡ್ ನಟ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ವಿವಾಹ ಮಹೋತ್ಸವಕ್ಕೆ ಇನ್ನೆರಡು ದಿನ ಬಾಕಿ ಇದೆ. ಈಗಾಗಲೇ ವಧು-ವರ ಮತ್ತು ಕುಟುಂಬಸ್ಥರು ಇಟಲಿ ತಲುಪಿದ್ದಾಗಿದೆ.
ಇಟಲಿಯ ಲೇಕ್ ಕೋಮೋದಲ್ಲಿ ದೀಪಿಕಾ-ರಣ್ವೀರ್ ನವೆಂಬರ್ 14 ಹಾಗೂ 15 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸಿಂಧಿ ಮತ್ತು ಕೊಂಕಣಿ ಸಂಪ್ರದಾಯದಂತೆ ಮದುವೆ ನಡೆಯಲಿದೆ.
ನವೆಂಬರ್ 21 ರಂದು ದೀಪಿಕಾ ಪಡುಕೋಣೆ ತವರು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ. ನವೆಂಬರ್ 28 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ನೆರವೇರಲಿದೆ.

ಇಟಲಿಯ ಲೇಕ್ ಕೋಮೋದಲ್ಲಿ ನಡೆಯಲಿರುವ ದೀಪಿಕಾ-ರಣ್ವೀರ್ ವಿವಾಹಕ್ಕೆ ಭಾರತೀಯ ಚಿತ್ರರಂಗದ ದಿಗ್ಗಜರು ಸಾಕ್ಷಿ ಆಗಲಿರುವ ಕಾರಣ, ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ವರದಿಗಳ ಪ್ರಕಾರ, ನಾಳೆ (ನವೆಂಬರ್ 13) ಮೆಹಂದಿ ಮತ್ತು ಸಂಗೀತ ಸಮಾರಂಭ ನಡೆಯಲಿದ್ದು, ನವೆಂಬರ್ 14 ರಂದು ಕೊಂಕಣಿ ಸಂಪ್ರದಾಯದಂತೆ ವಿವಾಹ ಜರುಗಲಿದೆ. ನವೆಂಬರ್ 15 ರಂದು ಸಿಂಧಿ ಸಂಪ್ರದಾಯದಂತೆ ಆನಂದ್ ಕರಜ್ ನೆರವೇರಲಿದೆ.
More from Filmibeat
English summary
Deepika Padukone-Ranveer Singh reaches Italy: Wedding preparations begun.


Click it and Unblock the Notifications











