For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಮದುವೆಗೆ ಬರುವ ಅತಿಥಿಗಳಿಗೆ ಷರತ್ತು ಹಾಕಿದ ಜೋಡಿ.!

  |

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್ವೀರ್ ಸಿಂಗ್ ಮದುವೆ ನವೆಂಬರ್ 14 ಹಾಗೂ 15 ರಂದು ಇಟಲಿಯ ಲೇಕ್ ಕೋಮೋದಲ್ಲಿ ನಡೆಯಲಿದೆ. ಕಳೆದ ಒಂದು ವಾರದಿಂದ ಮದುವೆ ಶಾಸ್ತ್ರ, ಸಂಪ್ರದಾಯಗಳಲ್ಲಿ ದೀಪಿಕಾ-ರಣ್ವೀರ್ ಭಾಗಿಯಾಗಿದ್ದು, ಈಗಾಗಲೇ ನವಜೋಡಿ ಇಟಲಿಗೆ ತಲುಪಿದ್ದಾರೆ.

  ನವೆಂಬರ್ 21 ರಂದು ದೀಪಿಕಾ ಪಡುಕೋಣೆ ತವರು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ. ನವೆಂಬರ್ 28 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ನೆರವೇರಲಿದೆ.

  ಇಟಲಿ ತಲುಪಿದ ದೀಪಿಕಾ-ರಣ್ವೀರ್: ಮದುವೆಗೆ ಭರ್ಜರಿ ಸಿದ್ಧತೆ

  ಈ ಮಧ್ಯೆ ದೀಪಿಕಾ ಮತ್ತು ರಣ್ವೀರ್ ಸಂಬಂಧಿಕರಿಗೆ ಮತ್ತು ಮದುವೆಗೆ ಬರುವ ಅತಿಥಿಗಳಿಗೆ ಒಂದು ಷರತ್ತು ವಿಧಿಸಿದ್ದಾರೆ. 'ನವದಂಪತಿಗಳಿಗೆ ಮದುವೆಯ ಉಡುಗೊರೆ ನೀಡುವುದಾದರೇ ಅದನ್ನ ದಿ ಲಿವ್ ಲವ್ ಲಾಫ್ ಫೌಂಡೇಶನ್ ಗೆ ಕೊಡಿ. ಚೆಕ್ ಮೂಲಕವೂ ನೀಡಬಹುದು'' ಎಂದು ಸೂಚನೆ ನೀಡಿದ್ದಾರೆ.

  ಫೋಟೋ ನೋಡಿ: ದೀಪಿಕಾ ಪಡುಕೋಣೆ ಮನೆಯಲ್ಲಿ ಮದುವೆ ಸಂಭ್ರಮ ಶುರು

  ಅಂದ್ಹಾಗೆ, 'ದಿ ಲಿವ್ ಲವ್ ಲಾಫ್ ಫೌಂಡೇಶನ್' ಸ್ವತಃ ದೀಪಿಕಾ ಪಡುಕೋಣೆ ನಡೆಸುತ್ತಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಜಾಗೃತಿ ಮೂಡಿಸುವ ಕೆಲಸವನ್ನು ಈ ಫೌಂಡೇಶನ್ ಮಾಡ್ತಿದೆ.

  English summary
  Ranveer Singh and Deepika Padukone have asked their wedding guests not to give them gifts but instead to donate it to Deepika's The Live Love Laugh Foundation. The couple is getting married in Lake Como, Italy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X