ಮುಂದಿನ ತಿಂಗಳು ನಡೆಯಲಿದೆ ದೀಪಿಕಾ-ರಣ್ವೀರ್ ವಿವಾಹ ಮಹೋತ್ಸವ

ಬೆಂಗಳೂರು ಬೆಡಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ. ಇಬ್ಬರು ಇದೇ ವರ್ಷ ಮದುವೆ ಆಗ್ತಾರೆ ಎಂಬ ಗಾಸಿಪ್ ಇಂದು ನಿನ್ನೆಯದ್ದಲ್ಲ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆ ಆದ್ಮೇಲೆ, ಎಲ್ಲರ ಬಾಯಲ್ಲೂ ದೀಪಿಕಾ-ರಣ್ವೀರ್ ಮದುವೆ ಗುಸುಗುಸು ಕೇಳಿಬಂದಿತ್ತು. ಆದ್ರೆ, ತಮ್ಮಿಬ್ಬರ ಪ್ರೀತಿ ಬಗ್ಗೆ ದೀಪಿಕಾ ಆಗಲಿ ರಣ್ವೀರ್ ಸಿಂಗ್ ಆಗಲಿ ತುಟಿ ಎರಡು ಮಾಡಿರಲಿಲ್ಲ. ಹಾಗೇ, ಮದುವೆ ಬಗ್ಗೆಯೂ ತುಟಿಕ್ ಪಿಟಿಕ್ ಎಂದಿರಲಿಲ್ಲ.

Deepika Padukone Ranveer Singh to get married on November 14th and 15th

ಆದ್ರೀಗ, ತಮ್ಮ ವಿವಾಹ ಮಹೋತ್ಸವದ ದಿನಾಂಕವನ್ನ ನಟಿ ದೀಪಿಕಾ ಪಡುಕೋಣೆ ಜಗಜ್ಜಾಹೀರು ಮಾಡಿದ್ದಾರೆ. ಮುಂದಿನ ತಿಂಗಳು.. ಅಂದ್ರೆ ನವೆಂಬರ್ 14 ಹಾಗೂ 15 ರಂದು ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆ ನಡೆಯಲಿದೆ. ಹಾಗಂತ ಸ್ವತಃ ನಟಿ ದೀಪಿಕಾ ಟ್ವೀಟ್ ಮಾಡಿದ್ದಾರೆ.

ಮದುವೆ ದಿನಾಂಕವನ್ನ ದೀಪಿಕಾ ಬಹಿರಂಗ ಪಡಿಸಿದ್ದಾರೆ ಹೊರತು ವಿವಾಹ ನಡೆಯುವ ಜಾಗದ ಬಗ್ಗೆ ವಿವರ ನೀಡಿಲ್ಲ. ವರದಿಗಳ ಪ್ರಕಾರ, ಇಟಲಿಯಲ್ಲಿ ದೀಪಿಕಾ-ರಣ್ವೀರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಬಾಲಿವುಡ್ ನ ಇಬ್ಬರು ಟಾಪ್ ತಾರೆಯರ ಮದುವೆ ಇದಾಗಿರುವ ಕಾರಣ, ಇಡೀ ಬಾಲಿವುಡ್ಡೇ ವಿವಾಹಕ್ಕೆ ಸಾಕ್ಷಿಯಗುವುದು ಮಾತ್ರ ಪಕ್ಕಾ.

More from Filmibeat

English summary
Deepika Padukone Ranveer Singh to get married on November 14th and 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X