For Quick Alerts
  ALLOW NOTIFICATIONS  
  For Daily Alerts

  ಯಾಕೆ ಕ್ರಿಕೆಟರ್ಸ್ ಬಳಿ ಮೀಟೂ ಬಗ್ಗೆ ಕೇಳಲ್ಲಾ? ದೀಪಿಕಾ ಅಚ್ಚರಿ ಹೇಳಿಕೆ

  |

  ಮೀಟೂ ಆರೋಪ, ಮೀಟೂ ವಿವಾದ, ಮೀಟೂ ಪ್ರಕರಣಗಳು ಅತಿ ಹೆಚ್ಚು ಸದ್ದು ಮಾಡಿದ್ದು ಬಾಲಿವುಡ್ ಇಂಡಸ್ಟ್ರಿಯಲ್ಲಿ. ಹಿರಿಯ ನಟ ನಾನಾ ಪಾಟೇಕರ್ ಸೇರಿದಂತೆ ಹಲವು ನಿರ್ದೇಶಕ ಹಾಗೂ ನಿರ್ಮಾಪಕರ ಮೇಲೆ ಮೀಟೂ ಆರೋಪಗಳು ಕೇಳಿ ಬಂದಿದ್ದವು.

  ಕೆಲವರ ಮೇಲೆ ಪೊಲೀಸ್ ಕೇಸ್ ದಾಖಲಾಯ್ತು. ಇನ್ನು ಕೆಲವು ಸಾಕ್ಷ್ಯಗಳಿಲ್ಲದೆ ಮೂಲೆ ಸೇರಿತು. ಈಗಲೂ ಬಾಲಿವುಡ್ ನಟಿಯರು ಮೀಟೂ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇದೀಗ, ಬಿಟೌನ್ ಇಂಡಸ್ಟ್ರಿಯನ್ನ ನಂಬರ್ 1 ನಟಿ ದೀಪಿಕಾ ಪಡುಕೋಣೆ ಮೀಟೂ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ.

  ಆ ನಿರ್ದೇಶಕನ ನೀಚ ಕೃತ್ಯ ಅರಿಯಲು ಈ ನಟಿಗೆ 8 ವರ್ಷ ಬೇಕಾಯಿತಂತೆ.!ಆ ನಿರ್ದೇಶಕನ ನೀಚ ಕೃತ್ಯ ಅರಿಯಲು ಈ ನಟಿಗೆ 8 ವರ್ಷ ಬೇಕಾಯಿತಂತೆ.!

  ಕ್ರಿಕೆಟಿಗರನ್ನ ಯಾಕೆ ಮೀಟೂ ಬಗ್ಗೆ ಪ್ರಶ್ನೆ ಮಾಡಲ್ಲ ಎಂದು ಕೇಳುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ? ಅಷ್ಟಕ್ಕೂ, ಮೀಟೂ ವಿಷಯದಲ್ಲಿ ಕ್ರಿಕೆಟರ್ಸ್ ಬಗ್ಗೆ ಯಾಕೆ ದೀಪಿಕಾ ಪ್ರಸ್ತಾಪಿಸಿದರು? ಮುಂದೆ ಓದಿ....

  ಮೀಟೂ ಆರೋಪಿ ಜೊತೆ ದೀಪಿಕಾ ಸಿನಿಮಾ

  ಮೀಟೂ ಆರೋಪಿ ಜೊತೆ ದೀಪಿಕಾ ಸಿನಿಮಾ

  ಮೀಟೂ ಆರೋಪ ಎದುರಿಸಿದ ನಿರ್ಮಾಪಕ ಲವ್ ರಂಜನ್ ಅವರ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇದಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಲವ್ ರಂಜನ್ ಅವರು ಮೀಟೂ ಆರೋಪ ಮುಕ್ತರಾಗುವವರೆಗೂ ಅವರ ಜೊತೆ ಸಿನಿಮಾ ಮಾಡಬಾರದು ಎಂದು ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡುವ ವೇಳೆ ದೀಪಿಕಾ ಪ್ರತಿಕ್ರಿಯಿಸಿದ್ದಾರೆ.

  'ಒಂದು ರಾತ್ರಿ ಕಾಂಪ್ರಮೈಸ್ ಆಗು' ಎಂದ ನಿರ್ಮಾಪಕನಿಗೆ ಚಳಿ ಬಿಡಿಸಿದ್ದ ನಟಿ ಶ್ರುತಿ ಮರಾಠೆ'ಒಂದು ರಾತ್ರಿ ಕಾಂಪ್ರಮೈಸ್ ಆಗು' ಎಂದ ನಿರ್ಮಾಪಕನಿಗೆ ಚಳಿ ಬಿಡಿಸಿದ್ದ ನಟಿ ಶ್ರುತಿ ಮರಾಠೆ

  ಯಾಕೆ ಕ್ರಿಕೆಟಿಗರನ್ನ ಮೀಟೂ ಬಗ್ಗೆ ಕೇಳಲ್ಲ

  ಯಾಕೆ ಕ್ರಿಕೆಟಿಗರನ್ನ ಮೀಟೂ ಬಗ್ಗೆ ಕೇಳಲ್ಲ

  ''ಮೀಟೂ ವಿಷಯ ಅಂದ್ರೆ ಬರಿ ಸಿನಿಮಾ ಕಲಾವಿದರಿಗೆ ಮಾತ್ರ ಪ್ರಶ್ನಿಸುತ್ತೀರಾ? ಯಾಕೆ ಕ್ರಿಕೆಟ್ ಆಟಗಾರರ ಬಳಿ ಮೀಟೂ ಕುರಿತು ಕೇಳುವುದಿಲ್ಲ? ಆದರೆ, ಪ್ರತಿಯೊಬ್ಬ ಕಲಾವಿದರ ಬಳಿಯೂ ಮೀಟೂ ಕುರಿತು ಕೇಳಲಾಗುತ್ತೆ. ಮೀಟೂ ಎನ್ನುವುದು ಕೇವಲ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರ ಇಲ್ಲ'' ಎಂದು ದೀಪಿಕಾ ಕೇಳಿದ್ದಾರೆ.

  ಸಂಗೀತಾ ಭಟ್ ಚಿತ್ರರಂಗ ಬಿಡಲು 'ಮೀಟೂ' ಕಾರಣವಲ್ಲ.! ಮತ್ತೇನು.?ಸಂಗೀತಾ ಭಟ್ ಚಿತ್ರರಂಗ ಬಿಡಲು 'ಮೀಟೂ' ಕಾರಣವಲ್ಲ.! ಮತ್ತೇನು.?

  ಜವಾಬ್ದಾರಿ ನಮಗೆ ಮಾತ್ರನಾ?

  ಜವಾಬ್ದಾರಿ ನಮಗೆ ಮಾತ್ರನಾ?

  ''ನೀವು ಯಾವ ವಿಷಯದ ಕುರಿತು ಬೇಕಾದರೂ ನನ್ನನ್ನು ಕೇಳಿ. ನಾವು ನಮ್ಮ ಅಭಿಪ್ರಾಯ ಹೇಳಲು ಸಿದ್ಧರಿದ್ದೇವೆ. ಆದರೆ, ಪ್ರತಿಯೊಂದು ವಿಷಯಕ್ಕೂ ಸಿನಿಮಾ ಇಂಡಸ್ಟ್ರಿ ಮಾತ್ರ ಯಾಕೆ?'' ಎಂದು ಪ್ರಶ್ನಿಸಿ ಸುದ್ದಿಯಾಗಿದ್ದಾರೆ.

  ಫೋಟೋಶೂಟ್ ನಂತರ ನಟಿಯನ್ನ ಮಂಚಕ್ಕೆ ಕರೆದ ಫೋಟೋಗ್ರಾಫರ್.!ಫೋಟೋಶೂಟ್ ನಂತರ ನಟಿಯನ್ನ ಮಂಚಕ್ಕೆ ಕರೆದ ಫೋಟೋಗ್ರಾಫರ್.!

  ಕ್ರಿಕೆಟರ್ ಬಗ್ಗೆ ದೀಪಿಕಾ ಪ್ರಸ್ತಾಪಿಸಿದ್ದೇಕೆ?

  ಕ್ರಿಕೆಟರ್ ಬಗ್ಗೆ ದೀಪಿಕಾ ಪ್ರಸ್ತಾಪಿಸಿದ್ದೇಕೆ?

  ಸಿನಿಮಾ ಸ್ಟಾರ್ ಗಳಂತೆ ಕ್ರಿಕೆಟ್ ಸ್ಟಾರ್ ಗಳು ಬಹಳ ದೊಡ್ಡ ಅಭಿಮಾನಿಗಳನ್ನ ಹೊಂದಿದ್ದಾರೆ. ಆದರೆ, ಮೀಟೂ ಬಗ್ಗೆ ಎಲ್ಲಿಯೂ ಕ್ರಿಕೆಟಿಗರು ಮಾತನಾಡಿಲ್ಲ. ಎಲ್ಲ ವಲಯದಲ್ಲೂ ಮೀಟೂ ಇದೆ. ಸೋ, ಕ್ರಿಕೆಟ್ ರಂಗದಲ್ಲೂ ಇದೆ ಎಂಬ ಅರ್ಥದಲ್ಲಿ ದೀಪಿಕಾ ಹೇಳಿರುವ ಸಾಧ್ಯತೆ ಇದೆ. ಕ್ರಿಕೆಟಿಗರ ಜೊತೆಯಲ್ಲಿ ದೀಪಿಕಾ ಸ್ನೇಹ ಹೊಂದಿದ್ದರು. ಎಂಎಸ್ ಧೋನಿ, ಯುವರಾಜ್ ಸಿಂಗ್, ಆರ್.ಸಿ.ಬಿ ತಂಡದ ಜೊತೆ ಬಾಂಧವ್ಯ ಹೊಂದಿದ್ದರು.

  English summary
  ''Why Metoo Subject it only for film stars and not cricketers?'' Bollywood Actress Deepika Padukone Questioned.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X