For Quick Alerts
  ALLOW NOTIFICATIONS  
  For Daily Alerts

  'ಚಪಾಕ್' ನಂತರ ಬಯೋಪಿಕ್ ಆಫರ್: ರಿಜೆಕ್ಟ್ ಮಾಡಿದ ದೀಪಿಕಾ

  |

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಿನಿಮಾಗಳ ವಿಚಾರದಲ್ಲಿ ಬಹಳ ಕಟ್ಟುನಿಟ್ಟು. ಸ್ಕ್ರಿಪ್ಟ್ ಇಷ್ಟ ಆದರೆ ಆ ಕಥೆಯ ಸುತ್ತ ಎಂತಹದ್ದೇ ವಿವಾದ ಇದ್ದರೂ ಸಿನಿಮಾ ಮಾಡುವಷ್ಟು ನೇರ ವ್ಯಕ್ತಿತ್ವ.

  ಹಾಗ್ನೋಡಿದ್ರೆ, ಹಲವು ನಟಿಯರು ರಿಜೆಕ್ಟ್ ಮಾಡಿದ್ದ ಚಿತ್ರಗಳನ್ನ ದೀಪಿಕಾ ಕೈಗೆತ್ತಿಕೊಂಡು ನಟಿಸಿ, ಯಶಸ್ಸು ಕಂಡಿದ್ದಾರೆ. ವಿಶೇಷವಾಗಿ ದೀಪಿಕಾಗೆ ಬಯೋಪಿಕ್ ಚಿತ್ರಗಳು ಅಂದ್ರೆ ಸ್ವಲ್ಪ ಆಸಕ್ತಿ ಹೆಚ್ಚು. ಹಾಗಾಗಿ, ಬಯೋಪಿಕ್ ಚಿತ್ರಗಳ ಆಫರ್ ದೀಪಿಕಾ ಬಳಿ ಹುಡುಕಿಕೊಂಡು ಬರುತ್ತೆ.

  ದೀಪಿಕಾ ಜೆ.ಎನ್.ಯು ಭೇಟಿ ಕುರಿತು ಮೊದಲ ಸಲ ಮಾತನಾಡಿದ ಕಂಗನಾ ಹೇಳಿದ್ದೇನು?ದೀಪಿಕಾ ಜೆ.ಎನ್.ಯು ಭೇಟಿ ಕುರಿತು ಮೊದಲ ಸಲ ಮಾತನಾಡಿದ ಕಂಗನಾ ಹೇಳಿದ್ದೇನು?

  ಅಂದ್ಹಾಗೆ, ಚಪಾಕ್ ಸಿನಿಮಾ ಬಳಿಕ ದೀಪಿಕಾ ಇನ್ನೊಂದು ಬಯೋಪಿಕ್ ಚಿತ್ರ ಮಾಡಬೇಕಿತ್ತು. ಆದರೆ ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ ಎಂಬ ವಿಷಯ ಹೊರಬಿದ್ದಿದೆ. ಅಷ್ಟಕ್ಕೂ, ಆ ಬಯೋಪಿಕ್ ಯಾವುದು? ಮುಂದೆ ಓದಿ...

  ಬಿನೋದಿನಿ ದಾಸಿ ಬಯೋಪಿಕ್ ರಿಜೆಕ್ಟ್!

  ಬಿನೋದಿನಿ ದಾಸಿ ಬಯೋಪಿಕ್ ರಿಜೆಕ್ಟ್!

  ಬಂಗಾಳಿ ಮೂಲದ ನಟಿ, ಗಾಯಕಿ ಬಿನೋದಿನಿ ದಾಸಿ ಅವರ ಜೀವನಕಥೆ ಸಿನಿಮಾ ಆಗುತ್ತಿದ್ದು, ಅವರ ಪಾತ್ರದಲ್ಲಿ ನಟಿಸಲು ದೀಪಿಕಾ ಪಡುಕೋಣೆಗೆ ಆಫರ್ ಬಂದಿತ್ತು. ಇದೀಗ, ಈ ಚಿತ್ರದಿಂದ ದೀಪಿಕಾ ಹೊರಗೆ ಬಂದಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ.

  ಸ್ಕ್ರಿಪ್ಟ್ ಇಷ್ಟ ಆದರೂ ತಿರಸ್ಕರಿಸಿದ್ದೇಕೆ?

  ಸ್ಕ್ರಿಪ್ಟ್ ಇಷ್ಟ ಆದರೂ ತಿರಸ್ಕರಿಸಿದ್ದೇಕೆ?

  ಸುಮಾರು 12ನೇ ವಯಸ್ಸಿಗೆ ನಟನೆ ಆರಂಭಿಸಿದ ಬಿನೋದಿನಿ 23 ವರ್ಷಕ್ಕೆ ನಟನೆಯಿಂದ ಹಿಂದೆ ಸರಿದರು. ರಂಗಭೂಮಿ ಕಲಾವಿದೆಯಾಗಿದ್ದ ಈಕೆ ಸುಮಾರು 80ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದರು. ಸಿನಿಮಾಗಳಲ್ಲಿ ನಟಿಸಿದ್ದರು. ಗಾಯಕರೂ ಕೂಡ ಹೌದು. ಇಂತಹ ನಟಿಯ ಕಥೆ ಓದಿದ್ದ ದೀಪಿಕಾ ಮೊದಲು ಸಿನಿಮಾಗೆ ಒಪ್ಪಿಗೆ ನೀಡಿದ್ದರು. ಬಳಿಕ, ಇಷ್ಟವಿಲ್ಲ ಎಂದು ತಿರಸ್ಕರಿದರು ಎಂದು ಹೇಳಲಾಗುತ್ತಿದೆ.

  ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿ ಬಿದ್ದ ದೀಪಿಕಾ: 'ಚಪಾಕ್' ಚಿತ್ರದ ಕಲೆಕ್ಷನ್ ಅಷ್ಟಕಷ್ಟೆ.!ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿ ಬಿದ್ದ ದೀಪಿಕಾ: 'ಚಪಾಕ್' ಚಿತ್ರದ ಕಲೆಕ್ಷನ್ ಅಷ್ಟಕಷ್ಟೆ.!

  ಐಶ್ವರ್ಯ ರೈ ಕೈ ಸೇರಿದ ಪ್ರಾಜೆಕ್ಟ್

  ಐಶ್ವರ್ಯ ರೈ ಕೈ ಸೇರಿದ ಪ್ರಾಜೆಕ್ಟ್

  ಚಿತ್ರರಂಗದಿಂದ ದೂರ ಸರಿದ ಬಳಿಕ ಬಿನೋದಿನಿ, ಆಮಾರಾ ಕಥಾ, ಆಮಾರಾ ಅಭಿನೇತ್ರಿ ಜೀಬನ್ ಎಂಬ ಎರಡು ಆತ್ಮಕಥೆ ರಚಿಸಿದ್ದರು. ದೀಪಿಕಾ ಪಡುಕೋಣೆ ತಿರಸ್ಕರಿಸಿದ ಬಳಿಕ ಈ ಚಿತ್ರದಲ್ಲಿ ನಟಿಸುವಂತೆ ಐಶ್ವರ್ಯ ರೈ ಬಳಿ ಚಿತ್ರತಂಡ ಹೋಗಿದೆಯಂತೆ. ಐಶ್ ಕೂಡ ಸ್ಕ್ರಿಪ್ಟ್ ಓದಿದ್ದು, ಒಪ್ಪಿಗೆ ನೀಡಿದ್ದಾರಂತೆ.

  ಪ್ರದೀಪ್ ಸರ್ಕಾರ್ ನಿರ್ದೇಶನದಲ್ಲಿ ಚಿತ್ರ

  ಪ್ರದೀಪ್ ಸರ್ಕಾರ್ ನಿರ್ದೇಶನದಲ್ಲಿ ಚಿತ್ರ

  ಬಿನೋದಿನಿ ದಾಸಿ ಅವರ ಬಯೋಪಿಕ್ ಚಿತ್ರವನ್ನು ಪ್ರದೀಪ್ ಸರ್ಕಾರ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಪೂರ್ವ ತಯಾರಿ ನಡೆಯುತ್ತಿದ್ದು, ಆದಷ್ಟೂ ಬೇಗ ಸೆಟ್ಟೇರುವ ಸಾಧ್ಯತೆ ಇದೆ. ಅಂದ್ಹಾಗೆ, ದೀಪಿಕಾ ಈ ಚಿತ್ರವನ್ನು ಚಪಾಕ್ ಬಳಿಕ ಮಾಡಬೇಕಿತ್ತು. ಆದರೆ, ಗಂಭೀರ ಕಥೆ ಮತ್ತು ಭಾವಾನಾತ್ಮಕ ಅಂಶಗಳು ಚಿತ್ರದಲ್ಲಿ ಇರುವುದರಿಂದ ಇದು ದೀಪಿಕಾಗೆ ಇಷ್ಟವಾಗಿಲ್ಲ ಎಂದು ಹೇಳಲಾಗಿದೆ.

  ಜೆ ಎನ್ ಯು ವಿವಾದದಿಂದ ಬೇಸರ!

  ಜೆ ಎನ್ ಯು ವಿವಾದದಿಂದ ಬೇಸರ!

  ಜೆ ಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗಿಯಾದ ಕಾರಣ, ದೀಪಿಕಾ ಪಡುಕೋಣೆಯ ಚಪಾಕ್ ಚಿತ್ರಕ್ಕೆ ಸಂಕಷ್ಟ ಎದುರಾಯ್ತು. ಸಿನಿಮಾವನ್ನು ಅನೇಕರು ನಿಷೇಧಿಸಿದರು. ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಹೀಗಾಗಿ, ಬಯೋಪಿಕ್ ಚಿತ್ರವನ್ನು ಮಾಡುವುದರಿಂದ, ಒಂದು ಸಮುದಾಯ ಅಥವಾ ಒಂದು ಜನಾಂಗದಿಂದ ವಿವಾದಕ್ಕೆ ಒಳಗಾಗಬಹುದು ಎಂಬ ಆತಂಕ ಮೂಡಿರಬಹುದು. ಅದಕ್ಕಾಗಿ ಬಯೋಪಿಕ್ ಚಿತ್ರಕ್ಕೆ ದೀಪಿಕಾ ಆಸಕ್ತಿ ತೋರಿಲ್ಲ ಎನ್ನಲಾಗುತ್ತಿದೆ.

  English summary
  Bollywood actress Deepika Padukone rejects another biopic movie after Chhapaak movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X