For Quick Alerts
  ALLOW NOTIFICATIONS  
  For Daily Alerts

  ಪತಿ ರಣ್ವೀರ್ ಸಿಂಗ್ ಜೊತೆ ನಟಿಸಲ್ಲ ಎಂದ ದೀಪಿಕಾ

  |

  'ಬಾಜಿರಾವ್ ಮಸ್ತಾನಿ', 'ರಾಮ್ ಲೀಲಾ', 'ಪದ್ಮಾವತ್' ಚಿತ್ರಗಳಲ್ಲಿ ನಟಿಸುವ ಮೂಲಕ ಸೂಪರ್ ಹಿಟ್ ಜೋಡಿ ಎನಿಸಿಕೊಂಡಿರುವ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ಮದುವೆ ಆದ್ಮೇಲೂ ಇಬ್ಬರು ಒಟ್ಟಿಗೆ ಅಭಿನಯಿಸ್ತಾರಾ ಎಂಬ ಕುತೂಹಲ ಬಿಟೌನ್ ಪ್ರೇಕ್ಷಕರನ್ನ ಕಾಡ್ತಿತ್ತು. ಮೊದಲ ಹೆಜ್ಜೆಯಲ್ಲೇ ಈ ಕುತೂಹಲ ನಿರಾಸೆಯಾಗಿದೆ. ಹೌದು, ಪತಿಯ ಹೊಸ ಚಿತ್ರದಲ್ಲಿ ದೀಪಿಕಾ ನಡಿಸುವಂತೆ ಅಫರ್ ಬಂದಿತ್ತು. ಆದ್ರೆ, ಈ ಚಿತ್ರದಲ್ಲಿ ನಾನು ನಟಿಸಲ್ಲ ಎಂದಿದ್ದಾರಂತೆ ಡಿಪ್ಪಿ.

  ಮದುವೆ ಬಳಿಕ ಕಿಸ್ಸಿಂಗ್ ಸೀನ್ ಮಾಡ್ತೀರಾ? ಎಂದವರಿಗೆ ದೀಪಿಕಾ ಉತ್ತರ

  ಹೌದು, ರಣ್ವೀರ್ ಸಿಂಗ್ ಸದ್ಯ '83' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು 1983ರಲ್ಲಿ ವಿಶ್ವಕಪ್ ಗೆದ್ದ ಭಾರತದ ಕ್ರಿಕೆಟ್ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಅವರ ಬಯೋಪಿಕ್ ಸಿನಿಮಾ. ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಅಭಿನಯಿಸುತ್ತಿದ್ದರೇ, ಅವರ ಪತಿ ರೂಮಿ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ, ಇದು ಸುಳ್ಳಾಗಿದೆ.

  ''ಪತ್ನಿಯಿಂದ ದೂರ ಮಾಡಬೇಡಿ'' ಅಂತ ಆರತಕ್ಷತೆಯಲ್ಲಿ ರಣ್ವೀರ್ ಸಿಂಗ್ ಹೇಳಿದ್ಯಾಕೆ.?

  83 ಸಿನಿಮಾ ಸಂಪೂರ್ಣವಾಗಿ ಕ್ರಿಕೆಟ್ ಆಧರಿತ ಚಿತ್ರ. ಇದರಲ್ಲಿ ಕಪಿಲ್ ದೇವ್ ಮತ್ತು ಭಾರತ ಕ್ರಿಕೆಟ್ ಕುರಿತು ಹೇಳಲಾಗ್ತಿದೆ. ಹಾಗಾಗಿ, ಪತ್ನಿ ಪಾತ್ರಕ್ಕೆ ಹೆಚ್ಚಿನ ಮಹತ್ವವಿಲ್ಲ. ಹಾಗಾಗಿ, ದೀಪಿಕಾ ಈ ಸಿನಿಮಾ ಮಾಡುವುದಿಲ್ಲ ಎಂದಿದ್ದಾರಂತೆ.

  ಈ ಮೂಲಕ ಮದುವೆ ಬಳಿಕ ಪತಿ-ಪತ್ನಿ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಆಸೆ ನಿರಾಸೆಯಾಯಿತು. ಕಬೀರ್ ಖಾನ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಕಪಿಲ್ ದೇವ್ ಪತ್ನಿ ರೂಮಿ ಪಾತ್ರಕ್ಕೆ ಯಾರನ್ನ ಕರೆತರಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

  English summary
  Deepika Padukone has reportedly given being cast opposite Ranveer Singh in 83 a miss. The film by Kabir Khan is based on the life of Kapil Dev and India's victory at the 1983 Cricket World Cup.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X