ಗರ್ಭಿಣಿಯಾದ ಬಳಿಕ ಮಾಜಿ ಪ್ರಿಯಕರನ ಟ್ಯಾಟೂ ಅಳಿಸಿದ್ರಾ ದೀಪಿಕಾ?
ನಟ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್ ಹಾಟ್ ಕಪಲ್. 'ರಾಮ್‌ಲೀಲಾ' ಸಿನಿಮಾ ಶೂಟಿಂಗ್ ವೇಳೆ ಶುರುವಾದ ಇವರಿಬ್ಬರ ಪ್ರೇಮ್ ಕಹಾನಿ ಕೊನೆಗೆ ಮದುವೆಯಲ್ಲಿ ಮತ್ತೊಂದು ಹಂತಕ್ಕೇರಿತ್ತು. ಆದರೆ ಮದುವೆಗೂ ಮುನ್ನ ದೀಪಿಕಾ ತಮ್ಮ ಅಫೇರ್‌ಗಳಿಂದ ಬಹಳ ಸುದ್ದಿ ಆಗಿದ್ದರು.
ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಇವತ್ತು ಬಾಲಿವುಡ್ ನಂಬರ್ ವನ್ ಹೀರೊಯಿನ್ಸ್ ಎನಿಸಿಕೊಂಡಿದ್ದಾರೆ. ಕನ್ನಡದ 'ಐಶ್ವರ್ಯ' ಸಿನಿಮಾ ಮೂಲಕ ಆಕೆ ಸಿನಿಜರ್ನಿ ಆರಂಭವಾಯಿತು. ಆದರೆ ಬಳಿಕ 'ಓಂ ಶಾಂತಿ ಓಂ' ಚಿತ್ರದಲ್ಲಿ ನಟಿಸಿ ಬಿಟೌನ್ ಪ್ರವೇಶಿಸಿದರು. ಬಳಿಕ ಆಕೆ ಹಿಂತಿರುಗಿ ನೋಡಲೇಯಿಲ್ಲ. ಇನ್ನು ಮದುವೆಗೂ ಮುನ್ ಡಿಪ್ಪಿ ಹೆಸರು ಐದಾರು ಜನರ ಜೊತೆ ತಳುಕು ಹಾಕಿಕೊಂಡಿತ್ತು.

ಸಿದ್ದಾರ್ಥ್ ಮಲ್ಯ, ಕ್ರಿಕೆಟಿಗ ಎಂ.ಎಸ್ ಧೋನಿ ಹಾಗೂ ರಣ್‌ಬೀರ್ ಕಪೂರ್ ಜೊತೆಗಿನ ದೀಪಿಕಾ ಲವ್ವಿ ಡವ್ವಿ ಭಾರೀ ಸುದ್ದಿಯಾಗಿತ್ತು. ರಣ್‌ಬೀರ್ ಕಪೂರ್ ಜೊತೆ ಮದುವೆ ಆಗಿ ಬಿಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಬಹಳ ದಿನಗಳ ಕಾಲ ಈ ಲವ್ ಸ್ಟೋರಿ ಉಳಿಯಲಿಲ್ಲ. ಬಳಿಕ ರಣ್‌ವೀರ್ ಸಿಂಗ್ ಜೊತೆ ಪ್ರೀತಿಲಿ ಬಿದ್ದು ಡಿಪ್ಪಿ ಹಸೆಮಣೆ ಏರಿದ್ದರು. ಇನ್ನು ರಣ್‌ಬೀರ್ ಜೊತೆ ಪ್ರೀತಿಲಿ ಇದ್ದಾಗ ದೀಪಿಕಾ ಬೆನ್ನಿನ ಮೇಲೆ ಕುತ್ತಿಗೆ ಬಳಿ ಆರ್‌ಕೆ(ಶಾರ್ಟ್ ಆಗಿ ರಣ್‌ಬೀರ್ ಕಪೂರ್) ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು.
ಮದುವೆ ಬಳಿಕ ಕೂಡ ದೀಪಿಕಾ ಪಡುಕೋನೆ ಬೆನ್ನಿನ ಮೇಲೆ RK ಅಕ್ಷರದ ಡಿಸೈನ್ ಇರುವ ಟ್ಯಾಟೂ ಹಾಗೆಯೇ ಇತ್ತು. ಅದನ್ನು ದೀಪಿಕಾ ತೆಗೆಸುವ ಮನಸ್ಸು ಮಾಡಿಲ್ಲ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಒಂದೆರಡು ಬಾರಿ ಪ್ರಶ್ನೆ ಎದುರಾದಾಗಲೂ ಉತ್ತರಿಸದೇ ನುಣುಚಿಕೊಂಡಿದ್ದರು. ಸದ್ಯ ದೀಪಿಕಾ ಶೇರ್ ಮಾಡಿರುವ ಹೊಸ ಫೋಟೊದಲ್ಲಿ ಆ ಟ್ಯಾಟು ಕಾಣಿಸುತ್ತಿಲ್ಲ, ಡಿಪ್ಪಿ ಲೇಸರ್ ಟ್ರೀಟ್‌ಮೆಂಟ್ ಮೂಲಕ ಅದನ್ನು ತೆಗೆಸಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ದೀಪಿಕಾ ಹಿಂದಕ್ಕೆ ತಿರುಗಿರುವ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಟ್ಯಾಟೂ ಮಾಯವಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಬೀಚ್‌ನಲ್ಲಿ ಟ್ಯಾನ್ ಆಗಿ ಬಂದಿರುವುದನ್ನು ಕ್ಯಾಪ್ಷನ್ ಎಮೋಜಿ ಮೂಲಕ ದೀಪಿಕಾ ತಿಳಿಸಿದ್ದಾರೆ. ಫೋಟೊದಲ್ಲಿ ಟ್ಯಾನ್ ಲೈನ್ಸ್ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದೆಲ್ಲದರ ನಡುವೆ RK ಟ್ಯಾಟೂ ವಿಚಾರ ನೆನಪಾಗಿದೆ. ಗರ್ಭೀಣಿ ಆದ ಬಳಿಕ ಆಕೆ ಟ್ಯಾಟೂ ತೆಗೆಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಶೀಘ್ರದಲ್ಲೇ ದೀಪಿಕಾ- ರಣ್ವೀರ್ ದಂಪತಿ ಮನೆಗೆ ಹೊಸ ಅತಿಥಿಯಾ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಡಿಪ್ಪಿ ನಟನೆಯ 'ಫೈಟರ್' ಸಿನಿಮಾ ತೆರೆಕಂಡಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಸದ್ಯ ಮತ್ತೆರಡು ಸಿನಿಮಾಗಳು ಆಕೆಯ ಕೈಯಲ್ಲಿವೆ. 'ಕೊಚಡಿಯನ್' ಬಳಿಕ ಮತ್ತೆ ಸೌತ್ ಚಿತ್ರದಲ್ಲಿ ಡಿಪ್ಪಿ ಬಣ್ಣ ಹಚ್ಚಿದ್ದಾರೆ.
ಪ್ರಭಾಸ್ ನಟನೆಯ 'ಕಲ್ಕಿ 2898 AD' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಪದ್ಮ ಎನ್ನುವ ಪವರ್‌ಫುಲ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಪ್ಯಾನ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಗಂ ಅಗೇನ್' ಚಿತ್ರದಲ್ಲಿ ಕೂಡ ದೀಪಿಕಾ ಬಣ್ಣ ಹಚ್ಚಿದ್ದಾರೆ. ಆಗಸ್ಟ್ 15ಕ್ಕೆ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಚಿತ್ರದಲ್ಲಿ ಶಕ್ತಿ ಶೆಟ್ಟಿ ಆಗಿ ಡಿಪ್ಪಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











