ನಟಿ ದೀಪಿಕಾ ಪಡುಕೋಣೆಗೂ ಕೊರೊನಾ: ಇಡೀ ಕುಟುಂಬಕ್ಕೆ ತಗುಲಿದ ಸೋಂಕು?

ಭಾರತದ ಖ್ಯಾತ ಬ್ಯಾಡ್‌ಮಿಂಟನ್ ಕ್ರೀಡಾಪಟು, ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆಗೆ ಕೊರೊನಾ ಪಾಸಿಟಿವ್ ಆಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ದೀಪಿಕಾ ಇಡೀ ಕುಟುಂಬಕ್ಕೆ ಸೋಂಕು ತಗುಲಿದೆ ಎನ್ನವ ವರದಿಯಾಗಿದೆ.

ನಟಿ ದೀಪಿಕಾ ಪಡುಕೋಣೆಗೂ ಕೊರೊನಾ ಪಾಸಿಟಿವ್ ಆಗಿದ್ದು, ಮನೆಯಲ್ಲೇ ಕ್ವಾರಂಟೈನ್ ಆಗಿರುವ ಬಗ್ಗೆ ವರದಿಯಾಗಿದೆ. ದೀಪಿಕಾ ಸದ್ಯ ತಂದೆ-ತಾಯಿ ಜೊತೆ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಮುಂಬೈನಲ್ಲಿ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ದೀಪಿಕಾ ಮತ್ತು ರಣ್ವೀರ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದರು.

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ದೀಪಿಕಾ ತಾಯಿ ಉಜ್ವಲಾ ಮತ್ತು ಸಹೋದರಿ ಅನಿಷಾ ಪಡುಕೋಣೆಗೂ ಕೊರೊನಾ ಸೋಂಕು ತಗುಲಿದೆ ಎಂದು ಕೆಲವು ಇಂಗ್ಲಿಷ್ ವೆಬ್ ಸೈಟ್ ಗಳು ವರದಿಮಾಡಿವೆ. ಆದರೆ ಈ ಬಗ್ಗೆ ದೀಪಿಕಾ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

Deepika Padukone reportedly tests positive for corona

ಸುಮಾರು 10 ದಿನಗಳ ಹಿಂದೆಯೇ ದೀಪಿಕಾ ಪಡುಕೋಣೆ ಅವರ ತಂದೆ ಪ್ರಕಾಶ್ ಪಡುಕೋಣೆ, ತಾಯಿ ಉಜ್ವಲಾ ಮತ್ತು ಸಹೋದರಿ ಅನಿಷಾಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಬಳಿಕ ಪರೀಕ್ಷೆ ಮಾಡಿಸಿದ ಮೂವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ನಂತರ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಆದರೆ ವಾರ ಕಳೆದರು ಪ್ರಕಾಶ್ ಪಡುಕೋಣೆಗೆ ಜ್ವರ ಕಡಿಮೆಯಾದ ಕಾರಣ ಅವರನ್ನು ತಕ್ಷಣ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಚೇತರಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಡಿಶ್ಚಾರ್ಜ್ ಆಗಲಿದ್ದಾರೆ ಎಂದು ವರದಿಯಾಗಿದೆ. ಪ್ರಕಾಶ್ ಪಡುಕೋಣೆ ಅವರು ವಿಶ್ವ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ ಬ್ಯಾಡ್‌ಮಿಂಟನ್ ಪಟುವಾಗಿದ್ದಾರೆ.

Recommended Video

KGF 2 ನ ಐಟಂ ಸಾಂಗ್ ನಲ್ಲಿ ಸೊಂಟ ಕುಣಿಸ್ತಾರಾ ಶ್ರೀಲಂಕಾ ಸುಂದರಿ? | Filmibeat Kannada

More from Filmibeat

English summary
Actress Deepika Padukone reportedly tests positive for corona.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X