ಅನ್ನ-ರಸಂ, ದಕ್ಷಿಣ ಭಾರತದ ಫಿಲ್ಟರ್ ಕಾಫಿ ತುಂಬಾ ಇಷ್ಟ: ಬೆಂಗಳೂರಿಗೆ ಬರಲು ಕಾತರರಾಗಿರುವ ದೀಪಿಕಾ

By ಫಿಲ್ಮ್ ಡೆಸ್ಕ್

ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಸದ್ಯ ಪತಿ ರಣ್ವೀರ್ ಜೊತೆ ಮುಂಬೈನಲ್ಲಿ ವಾಸವಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಮುಂಬೈನಲ್ಲಿಯೆ ಲಾಕ್ ಆಗಿರುವ ದೀಪಿಕಾ ಬೆಂಗಳೂರಿಗೆ ಬರಲು ಕಾತರರಾಗಿದ್ದಾರಂತೆ. ಈ ಬಗ್ಗೆ ನಟಿ ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

Recommended Video

Dhruva Sarja and His Wife Prerana Tests Positive for Coronavirus | Filmibeat Kannada

ಲಾಕ್ ಡೌನ್ ಬಳಿಕ ದೀಪಿಕಾ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಆಗಾಗ ಏನಾದರು ಪೋಸ್ಟ್ ಮಾಡುತ್ತ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಇತ್ತೀಚಿಗೆ ದೀಪಿಕಾ ಅಭಿಮಾನಿಗಳಿಗೆ ಏನಾದರು ಪ್ರಶ್ನೆ ಕೇಳಿ ಎಂದು ಹೇಳಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳಿಗೆ 'ಆಸ್ಕ್ ಮಿ ಎನಿಥಿಂಗ್' ಎಂದು ಹೇಳಿದ್ದರು. ಮುಂದೆ ಓದಿ..

ಲಾಕ್ ಡೌನ್ ಬಳಿಕ ದೀಪಿಕಾ ಪ್ಲಾನ್

ಲಾಕ್ ಡೌನ್ ಬಳಿಕ ದೀಪಿಕಾ ಪ್ಲಾನ್

ದೀಪಿಕಾ ಅಭಿಮಾನಿಗಳಿಗೆ ಪ್ರಶ್ನೆ ಕೇಳಿ ಎಂದು ಹೇಳುತ್ತಿದ್ದಂತೆ ಸಾಕಷ್ಟು ಪ್ರಶ್ನೆಗಳು ಹರಿದು ಬಂದಿವೆ. ಕೆಲವು ಪ್ರಶ್ನೆಗಳಿಗೆ ಮಾತ್ರ ದೀಪಿಕಾ ಉತ್ತರಿಸಿದ್ದಾರೆ. ಲಾಕ್ ಡೌನ್ ಬಳಿಕ ಏನು ಮಾಡುತ್ತೀರಿ? ಎಂದು ಒಬ್ಬ ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ದೀಪಿಕಾ 'ಬೆಂಗಳೂರಿಗೆ ಹೋಗುತ್ತೇನೆ. ನನ್ನ ಸಹೋದರಿ ಮತ್ತು ಪೋಷಕರನ್ನು ಭೇಟಿಯಾಗಲು ಕಾಯುತ್ತಿದ್ದೀನಿ' ಎಂದು ಹೇಳಿದ್ದಾರೆ.

ಇಷ್ಟವಾದ ಪಾತ್ರ ಮತ್ತು ಕಾಫಿನಾ ಅಥವಾ ಟೀನಾ?

ಇಷ್ಟವಾದ ಪಾತ್ರ ಮತ್ತು ಕಾಫಿನಾ ಅಥವಾ ಟೀನಾ?

ನೀವು ಅಭಿನಯಿಸಿರುವ ಸಿನಿಮಾಗಳಲ್ಲಿ ನಿಮಗೆ ತುಂಬಾ ಇಷ್ಟವಾದ ಪಾತ್ರಯಾವುದು? ಎಂದು ಅಭಿಮಾನಿಯೊಬ್ಬ ಕೇಳಿದ್ದಾರೆ. ಇದಕ್ಕೆ ದೀಪಿಕಾ 'ಪಿಕು' ಸಿನಿಮಾದ ಪಾತ್ರ ಎಂದು ಹೇಳಿದ್ದಾರೆ. 'ನಿಮಗೆ ಕಾಫಿ ಇಷ್ಟನಾ ಅಥವಾ ಟೀ ಇಷ್ಟನಾ?' ಎಂದು ಮತ್ತೋರ್ವ ಅಭಿಮಾನಿ ಕೇಳಿದ್ದಾರೆ. ದೀಪಿಕಾ "ಕಾಫಿ ಮತ್ತು ಟೀ ಎರಡು ಇಷ್ಟ. ಅದರಲ್ಲೂ ದಕ್ಷಿಣ ಭಾರತದ ಫಿಲ್ಟರ್ ಕಾಫಿ ಮತ್ತು ಚಾ ಎರಡು ತುಂಬಾ ಇಷ್ಟ. ನಾನು ಅದ್ಭುತವಾಗಿ ಟೀ ಮಾಡುತ್ತೇನೆ" ಎಂದಿದ್ದಾರೆ.

ಇಷ್ಟವಾದ ತಿನಿಸು, ಇಷ್ಟವಾದ ಪ್ಲೇಸ್

ಇಷ್ಟವಾದ ತಿನಿಸು, ಇಷ್ಟವಾದ ಪ್ಲೇಸ್

ನಿಮ್ಮ ಲೈಫ್ ನಲ್ಲಿ ನೀವು ಯಾವಾಗಲು ಏನನ್ನು ತಿನ್ನಲು ಬಯಸುತ್ತೀರಿ? ಎಂದು ಕೇಳಿದ ಪ್ರಶ್ನೆಗೆ ದೀಪಿಕಾ "ಅನ್ನ ಮತ್ತು ರಸಂ ಜೊತೆಗೆ ಮಾವಿನಕಾಯಿ ಉಪ್ಪಿನಕಾಯಿ" ಎಂದು ಹೇಳಿದ್ದಾರೆ. ಅಮ್ಮ ಮಾಡುವ ತಿನಿಸುಗಳಲ್ಲಿ ನಿಮ್ಮ ಇಷ್ಟವಾದ ತಿನಿಸು ಯಾವುದು? ದೀಪಿಕಾಗೆ ಅಮ್ಮ ಮಾಡುವ ಎಲ್ಲಾ ಖಾದ್ಯಗಳು ತುಂಬಾ ಇಷ್ಟವಂತೆ. ಯಾಕಂದ್ರೆ ದೀಪಿಕಾ ಅಮ್ಮ ರುಚಿಕರವಾದ ಖಾದ್ಯಗಳನ್ನು ಮಾಡುತ್ತಾರಂತೆ. ಇನ್ನೂ ದೀಪಿಕಾಗೆ ತುಂಬಾ ಇಷ್ಟವಾದ ಪ್ಲೇಸ್ ಅಂದರೆ ಬೀಚ್ ಅಂತೆ.

50ಮಿಲಿಯನ್ ಪಾಲೋವರ್ಸ್ ಹೊಂದಿರುವ ದೀಪಿಕಾ

50ಮಿಲಿಯನ್ ಪಾಲೋವರ್ಸ್ ಹೊಂದಿರುವ ದೀಪಿಕಾ

ಇತ್ತೀಚಿಗಷ್ಟೆ ದೀಪಿಕಾ ಇನ್ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದುವ ಸೆಲೆಟ್ರಿಟಿಗಳ ಲಿಸ್ಟ್ ಗೆ ಸೇರಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ 50 ಮಿಲಿಯನ್ ಗೂ ಅಧಿಕ ಪಾಲೋವರ್ಸ್ ಹೊಂದುವ ಮೂಲಕ ಭಾರತದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ಮೂರನೆ ಸೆಲೆಬ್ರಿಟಿಯಾಗಿದ್ದಾರೆ.

More from Filmibeat

English summary
Bollywood Actress Deepika Padukone reveals after lockdown plane. Deepika Padukone answers to fans questions in Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X