ಆಲಿಯಾ ಜೊತೆ ಪುರುಷರ ಶೌಚಾಲಯಕ್ಕೆ ನುಗ್ಗಿದ್ದ ವಿಷಯ ಹಂಚಿಕೊಂಡ ದೀಪಿಕಾ ಪಡುಕೋಣೆ!

ನಟಿ ದೀಪಿಕಾ ಪಡುಕೋಣೆ ತಮ್ಮ ಹೊಸ ಸಿನಿಮಾ 'ಗೆಹ್ರಾಯಿಯಾ' ಸಿನಿಮಾದ ಬಿಡುಗಡೆ ಸಿದ್ಧತೆಯಲ್ಲಿದ್ದಾರೆ. ಫೆಬ್ರವರಿ 11 ರಂದು ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

Recommended Video

ಗಂಡಸರ ಶೌಚಾಲಯಕ್ಕೆ ನುಗ್ಗಿ ಕೆಲಸ ಮುಗಿಸಿದ್ವಿ ಎಂದ ದೀಪಿಕಾ ಪಡುಕೋಣೆ..?

'ಗೆಹ್ರಾಯಿಯಾ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ದೀಪಿಕಾ ಪಡುಕೋಣೆ ಬ್ಯುಸಿಯಾಗಿದ್ದು, ಸಿನಿಮಾದ ಸಹ ನಟರಾದ ಅನನ್ಯಾ ಪಾಂಡೆ ಹಾಗೂ ಸಿದ್ಧಾಂತ್ ಚತುರ್ವೇದಿ ಜೊತೆ ಹಲವು ಸಂದರ್ಶನಗಳಲ್ಲಿ, ಇವೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ.

ಹೀಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದಾಗ ಮಾತನಾಡಿರುವ ದೀಪಿಕಾ ಪಡುಕೋಣೆ, ತಾವು ಆಲಿಯಾ ಭಟ್ ಜೊತೆಗೂಡಿ ಗಂಡಸರ ಶೌಚಾಲಯದ ಒಳಕ್ಕೆ ನುಗ್ಗಿದ್ದ ವಿಷಯವನ್ನು ಹಂಚಿಕೊಂಡಿದ್ದಾರೆ.

ಸಂದರ್ಶಕ, 'ಅಗತ್ಯ ಬಿದ್ದರೆ ಪುರುಷರ ಶೌಚಾಲಯ ಬಳಸುತ್ತೀರ?' ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿರುವ ಅನನ್ಯಾ ಪಾಂಡೆ, 'ಸ್ವಚ್ಛವಾಗಿದ್ದ ಖಂಡಿತ ಬಳಸುತ್ತೇನೆ' ಎಂದಿದ್ದಾರೆ. ಬಳಿಕ ಮಾತನಾಡಿದ ನಟ ಸಿದ್ಧಾಂತ್ ಚತುರ್ವೇದಿ, 'ದೀಪಿಕಾ ಪಡುಕೋಣೆ, ಹಾಗೆ ಮಾಡಲು ಸಾಧ್ಯವಿಲ್ಲ. ಆಕೆ ಪುರುಷರ ಶೌಚಾಲಯ ಬಳಸುವುದಿಲ್ಲ' ಎನ್ನುತ್ತಾರೆ. ಆಗ ಮಾತನಾಡುವ ದೀಪಿಕಾ ತಾವು ಈಗಾಗಲೇ ಪುರುಷರ ಶೌಚಾಲಯ ಬಳಸಿದ್ದಾಗಿ ಹೇಳಿಕೊಂಡಿದ್ದಾರೆ.

ಬರ್ಲಿನ್‌ನಲ್ಲಿ ನಡೆದ ಘಟನೆ ನೆನಪಿಸಿಕೊಂಡ ದೀಪಿಕಾ

ಬರ್ಲಿನ್‌ನಲ್ಲಿ ನಡೆದ ಘಟನೆ ನೆನಪಿಸಿಕೊಂಡ ದೀಪಿಕಾ

ಒಮ್ಮೆ ಕೋಲ್ಡ್‌ ಪ್ಲೇ ಕಾನ್ಸರ್ಟ್‌ಗಾಗಿ ಬರ್ಲಿನ್‌ಗೆ ಹೋಗಿದ್ದೆವು. ಅಲ್ಲಿ ಕಾನ್ಸರ್ಟ್ ನಡೆಯುವಾಗ ಮಹಿಳೆಯ ಶೌಚಾಲಯದ ಮುಂದೆ ಬಹಳ ದೊಡ್ಡ ಕ್ಯೂ ಇತ್ತು. ಹಾಗಾಗಿ ನಾನೂ ಹಾಗೂ ಆಲಿಯಾ ಭಟ್ ಪುರುಷರ ಶೌಚಾಲಯಕ್ಕೆ ನುಗ್ಗಿ, ನಮ್ಮ ಕೆಲಸ ಮುಗಿಸಿಕೊಂಡೆವು'' ಎಂದಿದ್ದಾರೆ. ''ಸ್ವಚ್ಛತೆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಶೌಚಾಲಯ ಬಳಸಬೇಕು ಎಂದುಕೊಂಡಾಗ ಶೌಚಾಲಯ ಬಳಸಬೇಕು ಅಷ್ಟೆ. ಸ್ವಚ್ಛವಾಗಿರಲಿ-ಇಲ್ಲದಿರಲಿ, ಪುರುಷರ ಶೌಚಾಲಯವಿರಲಿ, ಮಹಿಳೆಯರದ್ದಾಗಲಿ, ಎಲ್ಲಾದರೂ ಆಗಿರಲಿ ನಾನು ಯೋಚನೆ ಮಾಡುವುದಿಲ್ಲ'' ಎಂದಿದ್ದಾರೆ ದೀಪಿಕಾ ಪಡುಕೋಣೆ.

ಆಲಿಯಾ-ದೀಪಿಕಾ ಆತ್ಮೀಯ ಗೆಳತಿಯರು

ಆಲಿಯಾ-ದೀಪಿಕಾ ಆತ್ಮೀಯ ಗೆಳತಿಯರು

ದೀಪಿಕಾ ಪಡುಕೋಣೆ ಹಾಗೂ ಆಲಿಯಾ ಭಟ್ ಆತ್ಮೀಯ ಗೆಳತಿಯರು. ಈ ಹಿಂದೆ 2018 ರಲ್ಲಿ ಇಬ್ಬರೂ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಸಹ ಇಬ್ಬರೂ ನಟಿಯರು ತಮ್ಮ ಗೆಳೆತನದ ಬಗ್ಗೆ ಹಲವು ವಿಷಯಗಳನ್ನು ಮಾತನಾಡಿದ್ದು, ''ಆಲಿಯಾ ಭಟ್ ನನ್ನ ಪಾರ್ಟನರ್ ಇನ್ ಕ್ರೈಂ' ಎಂದು ದೀಪಿಕಾ ಪಡುಕೋಣೆ ಹೇಳಿದ್ದರು.

ಪ್ರಭಾಸ್ ಜೊತೆ ನಟಿಸಲಿದ್ದಾರೆ ದೀಪಿಕಾ

ಪ್ರಭಾಸ್ ಜೊತೆ ನಟಿಸಲಿದ್ದಾರೆ ದೀಪಿಕಾ

ದೀಪಿಕಾ ಪಡುಕೋಣೆ ನಟಿಸಿರುವ 'ಗೆಹ್ರಾಯಿಯಾ' ಸಿನಿಮಾವು ಫೆಬ್ರವರಿ 11 ಕ್ಕೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವು ಪ್ರೀತಿ ಮತ್ತು ಅಕ್ರಮ ಸಂಬಂಧದ ಕತೆಯನ್ನು ಹೊಂದಿದೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ದೀಪಿಕಾ ಪಡುಕೋಣೆ ಹಾಗೂ ಸಿದ್ಧಾಂತ್ ಚತುರ್ವೇದಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿರುವುದು ಗಮನ ಸೆಳೆದಿದೆ. ಈ ಸಿನಿಮಾದ ಬಳಿಕ ದೀಪಿಕಾ, ಶಾರುಖ್ ಜೊತೆ ನಟಿಸಿರುವ 'ಪಠಾಣ್' ಸಿನಿಮಾ ಬಿಡುಗಡೆ ಆಗಲಿದೆ. ಹೃತಿಕ್ ಜೊತೆಗೆ ಆಕ್ಷನ್ ಸಿನಿಮಾ 'ಫೈಟರ್‌'ಗೆ ದೀಪಿಕಾ ಸಹಿ ಹಾಕಿದ್ದಾರೆ. ಅಮಿತ್ ರವೀಂದ್ರನಾಥ್ ನಿರ್ದೇಶನದ 'ದಿ ಇಂಟರ್ನ್' ಬಳಿಕ ಪ್ರಭಾಸ್ ಜೊತೆಗೆ ಹೊಸ ಸಿನಿಮಾದಲ್ಲಿ ದೀಪಿಕಾ ನಟಿಸಲಿದ್ದಾರೆ.

ಹಲವು ಸಿನಿಮಾಗಳಲ್ಲಿ ಆಲಿಯಾ ಬ್ಯುಸಿ

ಹಲವು ಸಿನಿಮಾಗಳಲ್ಲಿ ಆಲಿಯಾ ಬ್ಯುಸಿ

ಇನ್ನು ನಟಿ ಆಲಿಯಾ ಭಟ್ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಲಿಯಾ ನಟಿಸಿರುವ 'ಆರ್‌ಆರ್‌ಆರ್‌', 'ಗಂಗೂಬಾಯಿ ಕಾಠಿಯಾವಾಡಿ' ಹಾಗೂ 'ಬ್ರಹ್ಮಾಸ್ತ್ರ' ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಆ ಬಳಿಕ ಫರ್ಹಾನ್ ಅಖ್ತರ್ ನಿರ್ದೇಶನದ 'ಜೀ ಲೇ ಜರಾ' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ನಟಿಸಲಿದ್ದಾರೆ. ಕರಣ್ ಜೋಹರ್ ನಿರ್ದೇಶನದ 'ತಕ್ತ್' ಮತ್ತು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ', ಸಲ್ಮಾನ್ ಖಾನ್ ನಟನೆಯ 'ಇನ್‌ಶಾ ಅಲ್ಲ', 'ಆಶಿಕಿ 3', 'ಡಾರ್ಲಿಂಗ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Deepika Padukone said once she and Alia Bhatt rushed into men's wash room in Berlin. Her Gehraiyaan movie releasing on February 11 on Amazon Prime.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X