ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಎನ್‌ಸಿಬಿ ನೊಟೀಸ್
ಸುಶಾಂತ್ ಸಾವು ಪ್ರಕರಣದ ತನಿಖೆಯಿಂದ ಬಾಲಿವುಡ್ ನಟ-ನಟಿಯರ ಡ್ರಗ್ಸ್ ನಂಟು ಬಹಿರಂಗಗೊಂಡಿದ್ದು, ಈಗಾಗಲೇ ಹಲವರಿಗೆ ಎನ್‌ಸಿಬಿ ನೊಟೀಸ್ ಜಾರಿ ಮಾಡಿದೆ.
ರಿಯಾ ಚಕ್ರವರ್ತಿ, ಆಕೆಯ ಸಹೋದರ, ಸುಶಾಂತ್ ರ ಮಾಜಿ ವ್ಯವಸ್ಥಾಪಕ ಇನ್ನೂ ಕೆಲವರನ್ನು ಈಗಾಗಲೇ ಬಂಧಿಸಿರುವ ಎನ್‌ಸಿಬಿ ಅಧಿಕಾರಿಗಳು ಈಗ ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ.
ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಿಕಾ ಪಡುಕೋಣೆಯ ಮ್ಯಾನೇಜರ್ ಕರಿಶ್ಮಾ ಪ್ರಕಾಶ್ ಗೆ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಇಬ್ಬರಿಗೆ ಎನ್‌ಸಿಬಿ ನೊಟೀಸ್
ಕರಿಶ್ಮಾ ಪ್ರಕಾಶ್ ಮಾತ್ರವೇ ಅಲ್ಲದೆ ಕ್ವಾನ್ ಟ್ಯಾಲೆಂಟ್ ಏಜೆನ್ಸಿಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಧ್ರುವ ಚಿತ್ಗೋಪ್ಕೇರ್ ಗೂ ಎನ್‌ಸಿಬಿ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.

ದೀಪಿಕಾಗೂ ಸಮನ್ಸ್ ನೀಡುವ ದಟ್ಟ ಸಾಧ್ಯತೆ ಇದೆ
ದೀಪಿಕಾ ಪಡುಕೋಣೆ ವ್ಯವಸ್ಥಾಪಕಿಗೆ ನೊಟೀಸ್ ನೀಡಿರುವ ಕಾರಣ, ನಂತರ ದೀಪಿಕಾ ಪಡುಕೋಣೆಗೂ ಸಮನ್ಸ್ ನೀಡುವುದು ಬಹುತೇಕ ಖಾತ್ರಿಯಾಗಿದೆ. ದೀಪಿಕಾ ಪಡುಕೋಣೆ ನಂತರ ಪತಿ ರಣವೀರ್ ಸಿಂಗ್ ಗೂ ಸಹ ನೊಟೀಸ್ ಹೋಗಲಿದೆ.

ಸಾರಾ ಅಲಿ ಖಾನ್, ರಾಕುಲ್, ಶ್ರದ್ಧಾಗೆ ಇದೇ ವಾರ ನೊಟೀಸ್?
ಈ ನಡುವೆ ಸುಶಾಂತ್ ಮಾಜಿ ಪ್ರೇಯಸಿ ನಟಿ ಸಾರಾ ಅಲಿ ಖಾನ್ , ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ನಟಿ ಶ್ರದ್ಧಾ ಕಪೂರ್ ಗೆ ಇದೇ ವಾರದಲ್ಲಿ ಎನ್‌ಸಿಬಿ ಸಮನ್ಸ್ ನೀಡಲಿದೆ. ಅವರ ವಿಚಾರಣೆ ನಂತರ ದೀಪಿಕಾ ಪಡುಕೋಣೆ ವಿಚಾರಣೆ ನಡೆಯುವ ಸಾಧ್ಯತೆ ಇದೆ.
Recommended Video

ಟ್ವೀಟ್ ಮೂಲಕ ದೀಪಿಕಾ ಕಾಲೆಳೆದ ಕಂಗನಾ
ದೀಪಿಕಾ ಪಡುಕೋಣೆಗೆ ಎನ್‌ಸಿಬಿ ಸಮನ್ಸ್ ನೀಡುವುದು ಬಹುತೇಕ ಖಾತ್ರಿಯಾದ ಕೂಡಲೇ ದೀಪಿಕಾ ಕುರಿತು ವ್ಯಂಗ್ಯದ ಟ್ವೀಟ್ ಮಾಡಿರುವ ಕಂಗನಾ, 'ಖಿನ್ನತೆ ಮಾದಕ ವ್ಯಸನದ ಪರಿಣಾಮವೇ ಆಗಿದೆ. ಬಾಲಿವುಡ್‌ನ ದೊಡ್ಡ ಸೆಲೆಬ್ರಿಟಿಗಳ ಮಕ್ಕಳು ತಮ್ಮ ಮ್ಯಾನೇಜರ್ ಅನ್ನು 'ಮಾಲ್ ಎಲ್ಲಿದೆ' ಎಂದು ಕೇಳುತ್ತಾರೆ' ಎಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ ಕಂಗನಾ.


Click it and Unblock the Notifications











