For Quick Alerts
  ALLOW NOTIFICATIONS  
  For Daily Alerts

  'ಇಂದಿರಾನಗರದ ಗೂಂಡಾ ನಾನೇ' ಎಂದು ದ್ರಾವಿಡ್‌ಗೆ ಸೆಡ್ಡು ಹೊಡೆದ ಖ್ಯಾತ ನಟಿ

  |

  ಸಿಲಿಕಾನ್ ಸಿಟಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಕ್ರಿಕೆಟಿಗ ರಾಹುಲ್ ದ್ರಾವಿಡ್ ''ನಾನು ಇಂದಿರಾನಗರದ ಗೂಂಡಾ'' ಎಂದು ಕಿರುಚಾಡಿ ಅಕ್ಕಪಕ್ಕದ ಕಾರುಗಳ ಗಾಜು ಪುಡಿ ಪುಡಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಅಂದ್ಹಾಗೆ, ಇದು ಜಾಹೀರಾತು. ಕ್ರಿಕೆಟ್ ಜಗತ್ತಿನ ಜಂಟಲ್‌ಮ್ಯಾನ್ ಎಂದೇ ಗುರುತಿಸಿಕೊಂಡಿರುವ ರಾಹುಲ್ ದ್ರಾವಿಡ್ ಅವರನ್ನು ಹಿಂದೆಂದೂ ಈ ರೀತಿ ನೋಡಿರಲು ಸಾಧ್ಯವಿಲ್ಲ. ಆದರೆ, ಜಾಹೀರಾತಿಗಾಗಿ ತಮ್ಮ ಉಗ್ರರೂಪ ತೋರಿಸಿದ್ದಾರೆ.

  ಇದೀಗ, 'ನಾನು ಇಂದಿರಾನಗರದ ಗೂಂಡಾ' ಎಂಬ ಡೈಲಾಗ್ ಈಗ ಟ್ರೆಂಡಿಂಗ್‌ನಲ್ಲಿದೆ. ಇದೇ ಡೈಲಾಗ್‌ನ್ನು ಖ್ಯಾತ ನಟಿ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡು, ಜೊತೆಗೆ ತನ್ನ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ.

  ಹೌದು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತನ್ನ ಬಾಲ್ಯದ ಫೋಟೋ ಶೇರ್ ಮಾಡಿದ್ದು, ''ಇಂದಿರಾನಗರದ ಗೂಂಡಾ ನಾನೇ'' ಎಂದು ಕ್ಯಾಪ್ಷನ್ ಹಾಕಿರುವುದು ಗಮನ ಸೆಳೆದಿದೆ.

  ಬೆಂಗಳೂರಿನಲ್ಲಿ ಓದಿ ಬೆಳೆದಿರುವ ದೀಪಿಕಾ ಪಡುಕೋಣೆ ನಟ ರಣ್ವೀರ್ ಸಿಂಗ್ ಅವರನ್ನು ಮದುವೆ ಆಗಿ ಮುಂಬೈನಲ್ಲಿ ನೆಲೆಸಿದ್ದಾರೆ. ಬಿಟೌನ್ ಇಂಡಸ್ಟ್ರಿಯಲ್ಲಿ ಪ್ರಸ್ತುತ ನಂ 1 ನಟಿ ಎನಿಸಿಕೊಂಡಿದ್ದಾರೆ.

  IPL ಪಂದ್ಯಗಳ ವಿಶ್ಲೇಷಣೆ ಜೊತೆಗೆ RCB ಗೆ ಸಪೋರ್ಟ್ ಮಾಡಲು ಬರ್ತಿದ್ದಾರೆ ಸುದೀಪ್ | Oneindia Kannada

  ದೀಪಿಕಾ ಪಡುಕೋಣೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ರಣ್ವೀರ್ ಸಿಂಗ್ ನಟನೆಯ '83' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಹೃತಿಕ್ ರೋಷನ್ ಜೊತೆ ಫೈಟರ್ ಚಿತ್ರ ಮಾಡ್ತಿದ್ದಾರೆ. ಶಾರೂಖ್ ಖಾನ್ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ 21ನೇ ಚಿತ್ರದಲ್ಲೂ ದೀಪಿಕಾ ನಾಯಕಿ.

  English summary
  Deepika Padukone Shares Childwood of her and Caption to 'Indiranagar ki gundi hoon main'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X