"ರಣ್‌ವೀರ್ ತೊಡೆ ಮೇಲೆ ದೀಪಿಕಾ ಕೂತಿದ್ದು ಕಂಡ ಆಶ್ಚರ್ಯ ಆಗಿತ್ತು": ಬಾಲಿವುಡ್ ನಟ ಗುಲ್ಶನ್ ದೇವಯ್ಯ!

By ಫಿಲ್ಮಿಬೀಟ್ ಡೆಸ್ಕ್

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಬಾಲಿವುಡ್‌ನ ಫೇವರಿಟ್ ಜೋಡಿ. ಇವರಿಬ್ಬರೂ ಜೊತೆಯಾಗಿ ನಟಿಸಿದ ಒಂದು ಸಿನಿಮಾ ಬಿಟ್ಟು ಉಳಿದಿದ್ದೆಲ್ಲವೂ ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ತೆರೆಮೇಲೆ ಜೋಡಿಯಾಗಿದ್ದ ಇಬ್ಬರೂ ಈಗ ರಿಯಲ್‌ ಲೈಫ್‌ನಲ್ಲೂ ಜೊತೆಯಾಗಿವೆ.

ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರೂ ಲವ್ ಸ್ಟೋರಿ ಹೇಗೆ ಶುರುವಾಯ್ತು? ಅನ್ನೋದು ಈಗ ಹಳೇ ವಿಷಯ. ಯಾಕಂದ್ರೆ, ಈ ಜೋಡಿ ಈಗಾಗಲೇ ಹಲವು ಬಾರಿಗೆ ತಮ್ಮ ಪ್ರೇಮಕಥೆಯನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿವೆ.

Deepika Padukone sat on Ranveer Lap on the Goliyon Ki Raasleela Ram-Leela set recalls Gulshan Devaiah

ಆದರೂ, ಮತ್ತೆ ದೀಪಿಕಾ ಹಾಗೂ ರಣ್‌ವೀರ್ ಸಿಂಗ್ ಬಗ್ಗೆ ಹೇಳ್ತಿರೋಕೆ ಕಾರಣ ಬಾಲಿವುಡ್ ನಟ ಗುಲ್ಶನ್ ದೇವಯ್ಯ. ಈ ನಟ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ 'ಗೋಲಿಯೊಂಕಿ ರಾಸ್‌ಲೀಲಾ ರಾಮ್ ಲೀಲಾ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಸೆಟ್ಟಿನಲ್ಲಿ ಇಬ್ಬರೂ ಹೇಗಿದ್ದರು? ಅನ್ನೋದನ್ನು ಗುಲ್ಶನ್ ದೇವಯ್ಯ ರಿವೀಲ್ ಮಾಡಿದ್ದಾರೆ.

ಸಿನಿ ಅವಾರ್ಡ್‌ನಲ್ಲಿ ದೀಪಿಕಾಗೆ ಫಿದಾ

ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಇಬ್ಬರು ಸುಮಾರು 5 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದರು. ಬಳಿಕ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲ ನೋಟದಲ್ಲೇ ದೀಪಿಕಾ ಪಡುಕೋಣೆ ನೋಡಿ ರಣ್‌ವೀರ್ ಸಿಂಗ್ ಫಿದಾ ಆಗಿದ್ದರು.

Deepika Padukone sat on Ranveer Lap on the Goliyon Ki Raasleela Ram-Leela set recalls Gulshan Devaiah

ರಣ್‌ವೀರ್ ಸಿಂಗ್ 2012ರಲ್ಲಿ ಮಕಾವ್‌ನಲ್ಲಿ ನಡೆದ ಸಿನಿ ಅವಾರ್ಡ್ ಸಮಾರಂಭದಲ್ಲಿ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಮೊದಲ ನೋಟದಲ್ಲೇ ದೀಪಿಕಾಗೆ ಕ್ಲೀನ್ ಬೋಲ್ಡ್ ಆಗಿದ್ದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದೇ ಫೇಮಸ್ ಜೋಡಿಯ ಬಗ್ಗೆ ಕೆಲವು ಸೀಕ್ರೆಟ್ ಅನ್ನು ಗುಲ್ಶನ್ ದೇವಯ್ಯ ರಿವೀಲ್ ಮಾಡಿದ್ದಾರೆ.

ರಣ್‌ವೀರ್ ತೊಡೆ ಮೇಲೆ ಕೂತಿದ್ದ ದೀಪಿಕಾ

ನಟ ಗುಲ್ಶನ್ ದೇವಯ್ಯ 'ರಾಮಲೀಲಾ' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ದೀಪಿಕಾ ,ರಣವೀರ್ ಸಿಂಗ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಈ ವೇಳೆ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಇಬ್ಬರು ಕಂಡು ಆಶ್ಚರ್ಯ ಆಗಿತ್ತು ಎಂದು ಗುಲ್ಶನ್ ದೇವಯ್ಯ ಹೇಳಿದ್ದಾರೆ.

'ರಾಮ್ ಲೀಲಾ' ಚಿತ್ರೀಕರಣದ ಮೊದಲ ಹಂತದಲ್ಲಿ ಇಬ್ಬರೂ ಕೇವಲ ಸಹೋದ್ಯೋಗಿಗಳಾಗಿದ್ದರು. ಆದರೆ, ಎರಡನೇ ಹಂತದ ಶೂಟಿಂಗ್‌ನಲ್ಲಿ ದೀಪಿಕಾ ಹಾಗೂ ರಣವೀರ್ ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು ಎಂದು ಗುಲ್ಶನ್ ದೇವಯ್ಯ ಹೇಳಿದ್ದಾರೆ. ಈ ವೇಳೆ ರಣವೀರ್ ತೊಡೆಯ ಮೇಲೆ ದೀಪಿಕಾ ಕೂತಿದ್ದನ್ನು ಗುಲ್ಶನ್ ದೇವಯ್ಯ ನೋಡಿದ್ದರು. ಇದು ಅಚ್ಚರಿ ಮೂಡಿಸಿತ್ತು ಎಂದಿದ್ದಾರೆ.

ಹಾಡಿನ ಚಿತ್ರೀಕರಣದಲ್ಲಿ ಉಕ್ಕಿದ ಪ್ರೀತಿ

"ಮೊದಲ ಶೆಡ್ಯೂಲ್‌ನಲ್ಲಿ ಇವರಿಬ್ಬರ ಪ್ರೀತಿ ಗಮನಕ್ಕೆ ಬಂದಿರಲಿಲ್ಲ. ಆದರೆ, ಉದಯಪುರದಲ್ಲಿ ಎರಡನೇ ಹಂತದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ರಣ್‌ವೀರ್ ಮಡಿಲಲ್ಲಿ ದೀಪಿಕಾ ಪಡುಕೋಣೆ ಕೂತಿದ್ದರು" ಎಂದು ಗುಲ್ಶನ್ ದೇವಯ್ಯ ಹೇಳಿದ್ದಾರೆ.

ರಣ್‌ವೀರ್ ಹಾಗೂ ದೀಪಿಕಾ ಒಟ್ಟಿಗೆ ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. 'ರಾಮಲೀಲಾ', 'ಬಾಜಿರಾವ್ ಮಸ್ತಾನಿ' 'ಪದ್ಮಾವತ್' ಅಂತಹ ಸಿನಿಮಾಗಳು ಮೆಗಾ ಹಿಟ್ ಆಗಿವೆ. ಆದರೆ, 1983ರ ಭಾರತ ವಿಶ್ವಕಪ್ ಗೆದ್ದಿದ್ದನ್ನು ಆಧರಿಸಿ ತೆಗೆದ '83' ಹೀನಾಯವಾಗಿ ಸೋಲುಂಡಿತ್ತು. ಇದರಲ್ಲಿ ಕಪಿಲ್ ದೇವ್ ಪಾತ್ರವನ್ನು ರಣವೀರ್, ಪತ್ನಿ ಪಾತ್ರದಲ್ಲಿ ದೀಪಿಕಾ ನಟಿಸಿದ್ದರು.

More from Filmibeat

English summary
Deepika Padukone Sat on Ranveer Singh Lap on the Goliyon Ki Raasleela Ram-Leela set recalls Gulshan Devaiah, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X