For Quick Alerts
  ALLOW NOTIFICATIONS  
  For Daily Alerts

  ಪತಿ ರಣ್ವೀರ್ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದಾರೆ ದೀಪಿಕಾ ಪಡುಕೋಣೆ

  |

  ನಟಿ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಬಾಲಿವುಡ್‌ನ ಸಖತ್ ಕ್ಯೂಟ್ ಕಪಲ್. ಬೇರೆಯವರಿಗೆ ಹೊಟ್ಟೆ ಉರಿ ತರಿಸುವಷ್ಟು ಚಂದವಾದ ಜೋಡಿ ಅವರದ್ದು.

  ಶೈನ್ ಶೆಟ್ಟಿ ಬರ್ತ್ ಡೇಗೆ ದೀಪಿಕಾ ದಾಸ್ ಕೊಟ್ಟ ಗಿಫ್ಟ್ ಏನು ಗೊತ್ತಾ? | Shine Shetty & Deepika Das

  ದೀಪಿಕಾ ಪಡುಕೋಣೆಯನ್ನು ರಣ್ವೀರ್ 'ಬೇಬ್' , 'ಡಿಪ್ಸ್' ಎಂದು ಕರೆಯುತ್ತಾರೆ. ಆದರೆ ದೀಪಿಕಾ ಪಡುಕೋಣೆ ರಣವೀರ್‌ ಸಿಂಗ್‌ ಅನ್ನು ಹೇಗೆ ಕರೆಯುತ್ತಾರೆ? ಮೊಬೈಲ್‌ ನಲ್ಲಿ ರಣ್ವೀರ್ ಸಿಂಗ್ ಹೆಸರನ್ನು ಏನೆಂದು ಸೇವ್ ಮಾಡಿದ್ದಾರೆ ಗೊತ್ತೆ?

  ಪ್ರತಿದಿನ ರಾತ್ರಿ ಮಲಗುವ ಮುನ್ನ ದೀಪಿಕಾ 'ಈ' ಸ್ಟಾರ್ ನಟನ ಫೋಟೋಗೆ ಕಿಸ್ ಮಾಡುತ್ತಾರಂತೆ

  ದೀಪಿಕಾ ಪಡುಕೋಣೆ ತಮ್ಮ ಫ್ಯಾಮಿಲಿ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ನಡೆದಿರುವ ಮಾತು-ಕತೆಯ ಸ್ಕ್ರೀನ್ ಶಾಟ್ ಅನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ರಣ್ವೀರ್ ಸಿಂಗ್ ಹೆಸರು ಸಹ ಇದೆ.

  ಹೆಸರನ್ನು ಏನೆಂದು ಸೇವ್ ಮಾಡಿದ್ದಾರೆ?

  ಹೆಸರನ್ನು ಏನೆಂದು ಸೇವ್ ಮಾಡಿದ್ದಾರೆ?

  ತಮ್ಮ ತರ್ಲೆ, ತುಂಟಾಟಗಳು, ಬಿಂದಾಸ್ ಮಾತುಗಳಿಂದ ಖ್ಯಾತರಾಗಿರುವ ರಣ್ವೀರ್ ಸಿಂಗ್ ಹೆಸರನ್ನು 'ಹ್ಯಾಂಡ್ಸಮ್' ಎಂದು ಸೇವ್ ಮಾಡಿಕೊಂಡಿದ್ದಾರೆ ದೀಪಿಕಾ ಪಡುಕೋಣೆ. ಅದು ನಿಜವೂ ಹೌದು. ರಣ್ವೀರ್ ಸಿಂಗ್ ನಿಜಕ್ಕೂ ಹ್ಯಾಂಡ್ಸಮ್.

  ಅಳಿಯನನ್ನು ಹೊಗಳಿರುವ ದೀಪಿಕಾ ಪೋಷಕರು

  ಅಳಿಯನನ್ನು ಹೊಗಳಿರುವ ದೀಪಿಕಾ ಪೋಷಕರು

  ದೀಪಿಕಾ ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ನಲ್ಲಿ, ದೀಪಿಕಾ ಅವರ ಅಮ್ಮ ಮತ್ತು ಅಪ್ಪ ಅಳಿಯ ರಣ್ವೀರ್ ಸಿಂಗ್ ಅನ್ನು ಹೊಗಳುತ್ತಿದ್ದಾರೆ. ಅತ್ತೆ-ಮಾವನವರ ಪ್ರೀತಿಯ ಹೊಗಳಿಕೆಗೆ ಧನ್ಯವಾದ ಹೇಳಿದ್ದಾರೆ ರಣ್ವೀರ್ ಸಿಂಗ್.

  ನಟ ಅಮೀರ್ ಖಾನ್ ವಿರುದ್ಧ ದೀಪಿಕಾ ಪಡುಕೋಣೆ ಆರೋಪ

  ದೀಪಿಕಾ ಅಮ್ಮನ ಹೊಗಳಿಕೆ

  ದೀಪಿಕಾ ಅಮ್ಮನ ಹೊಗಳಿಕೆ

  ರಣ್ವೀರ್ ಸಿಂಗ್ ಅವರ ಸಂದರ್ಶನವನ್ನು ನೋಡಿ ದೀಪಿಕಾ ತಾಯಿ ಉಜ್ಜಲಾ ಪಡುಕೋಣೆ, 'ತುಂಬಾ ಕುತೂಹಲಭರಿತವಾದ ಸಂದರ್ಶನ, ಸಂದರ್ಶನ ನೋಡಿದ ಪ್ರತಿ ನಿಮಿಷವನ್ನೂ ನಾನು ಎಂಜಾಯ್ ಮಾಡಿದೆ' ಎಂದು ಹೊಗಳಿದ್ದಾರೆ.

  ಶಹಭಾಸ್ ಎಂದ ರಣ್ವೀರ್ ಸಿಂಗ್ ಅಪ್ಪ

  ಶಹಭಾಸ್ ಎಂದ ರಣ್ವೀರ್ ಸಿಂಗ್ ಅಪ್ಪ

  ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ, 'ಮಾಹಿತಿಪೂರ್ಣವಾದ ಸಂದರ್ಶನ, ತುಂಬಾ ಚೆನ್ನಾಗಿ ಮಾತನಾಡಿದ್ದೀಯ' ಎಂದಿದ್ದಾರೆ. ರಣ್ವೀರ್ ಸಿಂಗ್ ತಂದೆ ಜಗ್ಜೀತ್ ಸಿಂಗ್ ಭವಾನಿ, 'ಉಲ್ಲಾಸಭರಿತವಾದ ಫ್ರೆಶ್ ಆದ ಸಂದರ್ಶನ' ಎಂದಿದ್ದಾರೆ.

  ನೀವು ಗರ್ಭಿಣಿಯೇ? ದೀಪಿಕಾ ಪಡುಕೋಣೆಗೆ ಅಭಿಮಾನಿಗಳ ಪ್ರಶ್ನೆ

  ದೀಪಿಕಾ ಹೇಳಿರುವುದೇನು?

  ದೀಪಿಕಾ ಹೇಳಿರುವುದೇನು?

  ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ದೀಪಿಕಾ ಪಡುಕೋಣೆ, 'ನಾವು ಕುಟುಂಬದವರು ಹೀಗೆಯೇ ಒಬ್ಬರ ಸಾಧನೆಯನ್ನು ಎಲ್ಲರೂ ಸಂಭ್ರಮಿಸುತ್ತೇವೆ. ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.

  ಫಿಟ್ನೆಸ್ ಉಳಿಸಿಕೊಳ್ಳಲು ಡಯಟ್ ಫುಡ್‌ಗೆ ದೀಪಿಕಾ-ರಣವೀರ್ ಸುರಿಯುತ್ತಿರುವ ಹಣ ಎಷ್ಟು ಗೊತ್ತೇ?

  English summary
  Actress Deepika Padukone shares family what's app group chat screenshot on Instagram today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X