'ನಿಮ್ಮ ಮದುವೆ ಯಾವಾಗ' ಎಂದ ಪತ್ರಕರ್ತನಿಗೆ ದೀಪಿಕಾ ಹೀಗಾ ಹೇಳೋದು.?
ಬಾಲಿವುಡ್ ನಲ್ಲಿ ಸದ್ಯಕ್ಕೆ ಕುತೂಹಲದ ಕೇಂದ್ರ ಬಿಂದುವಾಗಿರುವ ವಿಷ್ಯ ಅಂದ್ರೆ ಅದು ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರ ಮದುವೆ. ಇದುವರೆಗೂ ಇವರಿಬ್ಬರ ಮದುವೆ ಆಗಲಿ ಅಥವಾ ಪ್ರೀತಿಯ ಬಗ್ಗೆ ಆಗಲಿ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಹೀಗಿದ್ದರೂ, ಇವರಿಬ್ಬರ ಮದುವೆ ಬಗ್ಗೆ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಲೇ ಇದೆ. ಸದ್ಯದ ಮಾಹಿತಿ ಪ್ರಕಾರ ನವೆಂಬರ್ 20 ರಂದು ಇಟಲಿಯ Lake Como ದಲ್ಲಿ ದೀಪಿಕಾ-ರಣ್ವೀರ್ ಮದುವೆ ನಡೆಯಲಿದೆಯಂತೆ. ಕೇವಲ 30 ಜನರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗುತ್ತಿದ್ದು, ಭಾರತದಲ್ಲಿ ಗ್ರ್ಯಾಂಡ್ ರಿಸೆಪ್ಷನ್ ನಡೆಸಲು ಜೋಡಿ ನಿರ್ಧರಿಸಿದೆ ಎನ್ನಲಾಗಿದೆ.
ಆದ್ರೆ, ಈ ಬಗ್ಗೆ ಕೇಳಿದ್ರೆ ಮಾತ್ರ ಅದ್ಯಾಕೋ ದೀಪಿಕಾ ಉರಿದುಬೀಳ್ತಾರೆ. ಇತ್ತೀಚಿಗಷ್ಟೆ ವರದಿಗಾರನೊಬ್ಬ ದೀಪಿಕಾ ಅವರನ್ನ ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಡದ ದೀಪಿಕಾ, ಆ ರಿಪೋರ್ಟರ್ ಗೆ ಕಾಲೆಳೆದಿದ್ದಾರೆ. ಅಷ್ಟಕ್ಕೂ, ದೀಪಿಕಾ ಏನಂದ್ರು.? ಮುಂದೆ ಓದಿ....

ನೀನಗ್ಯಾಕೆ ಹೇಳ್ಬೇಕು.?
''ನನ್ನ ಮದುವೆ ಬಗ್ಗೆ ನೀವು ಕೇಳಿದ ಪ್ರಶ್ನೆಗೆ ನಾನು ಉತ್ತರಿಸಲು ಸಾಧ್ಯವಿಲ್ಲ. ಅದು ನನ್ನ ವೈಯಕ್ತಿಕ ವಿಚಾರ. ನೀನಗ್ಯಾಕೆ ಹೇಳ್ಬೇಕು.? ಇಂತಹ ಕಾರ್ಯಕ್ರಮದಲ್ಲಿ ಅಂತಹ ಪ್ರಶ್ನೆ ಕೇಳುವುದು ಸರಿಯಿಲ್ಲ'' ಎಂದು ಸ್ವಲ್ಪ ಗಟ್ಟಿಯಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಮಹಿಳೆಯ ಮಾನಸಿಕ ಸಮಸ್ಯೆ ಬಗ್ಗೆ ಕಾರ್ಯಕ್ರಮ
ಮಹಿಳೆಯ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ದೀಪಿಕಾ ಪಡುಕೋಣೆ. ''ಮಹಿಳೆಯರು ಸಾಧಾರಣವಾಗಿ ಹೆಚ್ಚು ಗಿಲ್ಟಿ ಫೀಲ್ ಆಗ್ತಾರೆ. ಜೀವನದಲ್ಲಿ ಮಹಿಳೆಯರಿಗೆ ಬಹಳ ರೀತಿಯಲ್ಲಿ ಸಮಸ್ಯೆಗಳಿವೆ. ಅಂತಹ ಸಮಯದಲ್ಲಿ ಮಹಿಳೆಯರು ತಮ್ಮನ್ನ ತಾವೇ ನಿಯಂತ್ರಿಸಿಕೊಳ್ಳಬೇಕು. ತಮ್ಮ ಮೇಲೆ ಆತ್ಮ ವಿಶ್ವಾಸ ಉಳಿಸಿಕೊಳ್ಳಬೇಕು'' ಎಂದು ಅನುಭವ ಹಂಚಿಕೊಂಡಿದ್ದಾರೆ. ಈ ಹಿಂದೆ ದೀಪಿಕಾ ಕೂಡ ಮಾನಸಿಕವಾಗಿ ಡಿಪ್ರೆಶನ್ ಗೆ ಒಳಗಾಗಿದ್ದರು.

ಪ್ರತಿಕ್ಷಣವೂ ಒಬ್ಬರಿಗಾಗಿ ಪರದಾಟ
''ಹೆಣ್ಣು ಪ್ರತಿಕ್ಷಣವೂ ಒಬ್ಬರಿಗಾಗಿ ಯೋಚಿಸುತ್ತಿರುತ್ತಾಳೆ. ಶಾಪಿಂಗ್ ಗೆ ಹೋದ್ರು, ಬ್ಯೂಟಿ ಪಾರ್ಲರ್ ಗೆ ಹೋದ್ರು ಮನೆಯ ಬಗ್ಗೆ ಯೋಚನೆ ಮಾಡ್ತಾಳೆ. ಶಾಲೆಗೆ ಹೋದ ಮಕ್ಕಳು ಬರ್ತಾರೆ, ಆಫೀಸ್ ನಿಂದ ಗಂಡ ಬರ್ತಾನೆ. ಅವರಿಗೆ ಏನಾದರೂ ತಿಂಡಿ ಮಾಡ್ಬೇಕು ಎಂದು ಪ್ರತಿಕ್ಷಣವೂ ಅವರ ಬಗ್ಗೆಯೇ ಆಲೋಚನೆ ಮಾಡ್ತಾಳೆ. ಹೀಗೆ, ಒಬ್ಬರ ಬಗ್ಗೆ ಚಿಂತೆ ಮಾಡ್ತಾನೆ ಇರ್ತಾರೆ. ಇಂತವರಿಗೆ ಒಂದು ಬ್ರೇಕ್ ಬೇಕು'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನವೆಂಬರ್ 20ಕ್ಕೆ ಮದುವೆ
ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರ ಮದುವೆ ನವೆಂಬರ್ 20 ರಂದು ನಡೆಯಲಿದೆ ಎನ್ನಲಾಗುತ್ತಿದೆ. ಆದ್ರೆ, ಯಾವುದೇ ರೀತಿಯ ಸುಳಿವು ಕೂಡ ಬಿಟ್ಟುಕೊಟ್ಟಿಲ್ಲ. ಬಹುಶಃ ಇದು ನಿಜಾನ ಅಥವಾ ಬರಿ ವದಂತಿಗಳೇ ಎನ್ನುವಷ್ಟು ಆಲೋಚನೆ ಜನರನ್ನ ಕಾಡುತ್ತಿದೆ.


Click it and Unblock the Notifications











