ಹಳೆ ಬಾಯ್‌ಫ್ರೆಂಡ್ ಜೊತೆಗಿನ ಚಿತ್ರ ಹಂಚಿಕೊಂಡ ದೀಪಿಕಾ ಪಡುಕೋಣೆ: ಕಾಡುತ್ತಿದೆಯಂತೆ ನೆನಪು

ನಟಿ ದೀಪಿಕಾ ಪಡುಕೋಣೆ ರಣ್ವೀರ್ ಸಿಂಗ್ ಅವರನ್ನು ವಿವಾಹವಾಗಿ ಎರಡು ವರ್ಷವಾಯಿತು. ಆದರೆ ಇನ್ನೂ ಹಳೆಯ ಬಾಯ್‌ಫ್ರೆಂಡ್ ನೆನಪು ಹೋಗಿಲ್ಲವೇ ಎಂಬ ಅನುಮಾನ ಕಾಡುತ್ತಿದೆ.

ಮದುವೆಯಾಗುವ ಮುಂಚೆ ದೀಪಿಕಾ ಪಡುಕೋಣೆ ಹೆಸರು ಹಲವರೊಂದಿಗೆ ಕೇಳಿ ಬಂದಿತ್ತು. ಸಿದ್ಧಾರ್ಥ್ ಮಲ್ಯ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಇನ್ನೂ ಕೆಲವರೊಂದಿಗೆ ಹೆಸರು ತಳುಕು ಹಾಕಿಕೊಂಡಿತ್ತು, ಆದರೆ ಅವರು ಪ್ರೀತಿಸಿದ್ದು ರಣ್ಬೀರ್ ಕಪೂರ್ ಅವರನ್ನು.

ರಣ್ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್‌ ನ ಫೇಮಸ್ ಪ್ರೇಮಿಗಳಾಗಿದ್ದರು. ರಣ್ಬೀರ್ ಕಪೂರ್ ಹೆಸರಿನ ಟ್ಯಾಟೂ ಸಹ ಹಾಕಿಸಿಕೊಂಡಿದ್ದರು ದೀಪಿಕಾ ಆದರೆ ಅವರಿಬ್ಬರ ಸಂಬಂಧ ಹೆಚ್ಚು ಕಾಲ ಬಾಳಲಿಲ್ಲ. ಇಬ್ಬರೂ ಬ್ರೇಕ್‌ಅಪ್ ಆದರು. ಕೊನೆಗೆ ದೀಪಿಕಾ ರಣ್ವೀರ್ ಸಿಂಗ್ ಅವರನ್ನು ಮದುವೆಯಾದರು.

ಹಳೆ ಬಾಯ್‌ಫ್ರೆಂಡ್ ಜೊತೆಗಿನ ಚಿತ್ರ

ಹಳೆ ಬಾಯ್‌ಫ್ರೆಂಡ್ ಜೊತೆಗಿನ ಚಿತ್ರ

ಆದರೆ ಈಗ ಇದ್ದಕ್ಕಿದ್ದಂತೆ ಯಾಕೋ ಹಳೆ ಬಾಯ್‌ಪ್ರೆಂಡ್‌ ಅವರೊಂದಿಗೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕೆಲವು ಭಾವನಾತ್ಮಕ ಸಾಲುಗಳನ್ನೂ ಬರೆದುಕೊಂಡಿದ್ದಾರೆ.

ರಣ್ಬೀರ್ ಕಪೂರ್ ಜೊತೆಗಿನ ಕ್ಯೂಟ್ ಚಿತ್ರ

ರಣ್ಬೀರ್ ಕಪೂರ್ ಜೊತೆಗಿನ ಕ್ಯೂಟ್ ಚಿತ್ರ

ರಣ್ಬೀರ್ ಕಪೂರ್ ಜೊತೆಗಿನ ಕ್ಯೂಟ್ ಚಿತ್ರಗಳನ್ನು ದೀಪಿಕಾ ಪಡುಕೋಣೆ ಹಂಚಿಕೊಂಡಿದ್ದಾರೆ. ದೀಪಿಕಾ ರಣ್ಬೀರ್ ಕಪೂರ್ ಒಟ್ಟಿಗೆ ನಟಿಸಿದ್ದ 'ಯೇ ಜವಾನಿ ಯೇ ದಿವಾನಿ' ಸಿನಿಮಾ ಬಿಡುಗಡೆ ಆಗಿ ಏಳು ವರ್ಷವಾದ ಸವಿ ನೆನಪಿಗೆ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಹಂಚಿಕೊಂಡಿರುವುದು ಸಿನಿಮಾದ ಲುಕ್‌ ಟೆಸ್ಟ್‌ನ ಚಿತ್ರಗಳು.

ನೆನಪುಗಳ ಬಗ್ಗೆ ಸುಂದರ ಸಾಲುಗಳು

ನೆನಪುಗಳ ಬಗ್ಗೆ ಸುಂದರ ಸಾಲುಗಳು

ಚಿತ್ರದ ಜೊತೆಗೆ ಕೆಲವು ಸಾಲುಗಳನ್ನೂ ದೀಪಿಕಾ ಬರೆದಿದ್ದಾರೆ. 'ನೆನಪುಗಳು ಸಿಹಿತಿಂಡಿಯ ಡಬ್ಬಾ ಇದ್ದಂತೆ, ಒಮ್ಮೆ ತೆರೆದರೆ ಕೇವಲ ಒಂದು ತುಣುಕನ್ನು ತಿಂದು ಸುಮ್ಮನಿರಲಾರಿರಿ' ಎಂದು ಬರೆದಿದ್ದಾರೆ ದೀಪಿಕಾ ಪಡುಕೋಣೆ.

ದೀಪಿಕಾ ಗೆ ಕಾಡುತ್ತಿದ್ದೆಯೇ ಹಳೆಯ ನೆನಪು

ದೀಪಿಕಾ ಗೆ ಕಾಡುತ್ತಿದ್ದೆಯೇ ಹಳೆಯ ನೆನಪು

ದೀಪಿಕಾ ಪಡುಕೋಣೆ ಬರೆದಿರುವ ಸಾಲು ಅವರ ಜೀವನಕ್ಕೂ ಅನ್ವಯವಾಗುತ್ತದೆಯೇ? ಏಕೆಂದರೆ ಸಿನಿಮಾ ತೆಗೆದಾಗ ರಣ್ಬೀರ್ ಕಪೂರ್ ದೀಪಿಕಾ ಪಡುಕೋಣೆ ಪ್ರೀತಿಯಲ್ಲಿದ್ದರು. ಹಳೆಯ ನೆನಪುಗಳು ದೀಪಿಕಾ ಅವರನ್ನು ಕಾಡುತ್ತಿದೆಯೇ ಎಂಬ ಅನುಮಾನ ದೀಪಿಕಾ ಅವರು ಬರೆದಿದ್ದನ್ನು ಓದಿದಾಗ ಕಾಡುತ್ತದೆ.

More from Filmibeat

English summary
Deepika Padukone shared YJHD movie pics in social media. She wrote some emotional lines also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X