For Quick Alerts
  ALLOW NOTIFICATIONS  
  For Daily Alerts

  ನಟ ಅಮೀರ್ ಖಾನ್ ವಿರುದ್ಧ ದೀಪಿಕಾ ಪಡುಕೋಣೆ ಆರೋಪ

  By Avani Malnad
  |

  ಲಾಕ್ ಡೌನ್ ಅವಧಿಯಲ್ಲಿ ನಟಿ ದೀಪಿಕಾ ಪಡುಕೋಣೆ ತಮ್ಮ ಆಲ್ಬಂ ಸಂಗ್ರಹದಿಂದ ಅನೇಕ ಹಳೆಯ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಪರೂಪದ ಫೋಟೊಗಳನ್ನು ಕಂಡು ಅವರ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಫೋಟೊದೊಂದಿಗೆ ಕೆಲವು ವಿವರಗಳನ್ನೂ ದೀಪಿಕಾ ನೀಡುತ್ತಿದ್ದಾರೆ.

  2000ನೇ ಇಸವಿಯಲ್ಲಿನ ಹೊಸ ವರ್ಷದಂದು ನಡೆದ ಸಮಾಗಮದ ಫೋಟೊವೊಂದನ್ನು ದೀಪಿಕಾ ಹಂಚಿಕೊಂಡಿದ್ದಾರೆ. ಕಪ್ಪು ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ತರುಣಿ ದೀಪಿಕಾ, ಒಂದೆಡೆ ಅಮೀರ್ ಖಾನ್ ಮತ್ತು ಇನ್ನೊಂದೆಡೆ ತಂದೆ ಪ್ರಕಾಶ್ ಪಡುಕೋಣೆ ಮಧ್ಯೆ ಕಷ್ಟಪಟ್ಟು ಕುಳಿತಿದ್ದರು. 2000ರ ಇಸವಿಯಲ್ಲಿಯೇ ಅಮೀರ್ ಖಾನ್ ಮತ್ತು ದೀಪಿಕಾ ಪಡುಕೋಣೆ ಫೋಟೊಗಾಗಿ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಇಷ್ಟು ವರ್ಷಗಳಾದರೂ ಇಬ್ಬರೂ ತೆರೆಯ ಮೇಲೆ ಜತೆಯಾಗಿ ನಟಿಸಿಲ್ಲ. ಮುಂದೆ ಓದಿ...

  ಅಮೀರ್ ಜತೆ ದೀಪಿಕಾ ಫ್ಯಾಮಿಲಿ

  ಅಮೀರ್ ಜತೆ ದೀಪಿಕಾ ಫ್ಯಾಮಿಲಿ

  ದೀಪಿಕಾ ತಾಯಿ ಉಜ್ವಲಾ, ತಮ್ಮ ಕಿರಿಮಗಳು ಅನಿಶಾರನ್ನು ತೊಡೆಯ ಮೇಲೆ ಕೂರಿಸಿಕೊಂಡು ಆ ಸಾಲಿನ ಕೊನೆಯಲ್ಲಿ ಕುಳಿತಿದ್ದರು. ಈ ಫೋಟೊದೊಂದಿಗೆ ದೀಪಿಕಾ, ಹಸಿವಾಗಿದ್ದರೂ ಅಮೀರ್ ಖಾನ್ ತಮಗೆ ಮೊಸರನ್ನ ಕೊಟ್ಟಿರಲಿಲ್ಲ ಎಂದು ಮುನಿಸನ್ನು ತಿಳಿಸಿದ್ದಾರೆ.

  ಫಿಟ್ನೆಸ್ ಉಳಿಸಿಕೊಳ್ಳಲು ಡಯಟ್ ಫುಡ್‌ಗೆ ದೀಪಿಕಾ-ರಣವೀರ್ ಸುರಿಯುತ್ತಿರುವ ಹಣ ಎಷ್ಟು ಗೊತ್ತೇ?ಫಿಟ್ನೆಸ್ ಉಳಿಸಿಕೊಳ್ಳಲು ಡಯಟ್ ಫುಡ್‌ಗೆ ದೀಪಿಕಾ-ರಣವೀರ್ ಸುರಿಯುತ್ತಿರುವ ಹಣ ಎಷ್ಟು ಗೊತ್ತೇ?

  ಮೊಸರನ್ನ ತಿನ್ನಲು ಕರೆಯಲಿಲ್ಲ

  ಮೊಸರನ್ನ ತಿನ್ನಲು ಕರೆಯಲಿಲ್ಲ

  '2000ರ ಜನವರಿ 1ರಷ್ಟು ಹಳೆಯದಾದ ಫೋಟೊ. ನನಗೆ ಆಗ 13 ವರ್ಷ. ಆಗ ವಿಚಿತ್ರವಾಗಿದ್ದೆ. ಈಗಲೂ ಅಷ್ಟೇ. ಅವರ ಅಂದು ಊಟ ಮಾಡುತ್ತಿದ್ದರು. ಅದು ಮೊಸರನ್ನ. ಯಾವಾಗಲೂ ಇರುವಂತೆಯೇ ಅಂದು ಸಹ ನನಗೆ ಬಹಳ ಹಸಿವಾಗಿತ್ತು. ಆದರೆ ಅವರು ಊಟಕ್ಕೆ ಕರೆಯಲಿಲ್ಲ. ನಾನೂ ಕೇಳಲಿಲ್ಲ' ಎಂದು ಅಮೀರ್ ಖಾನ್ ಅವರನ್ನು ಟ್ಯಾಗ್ ಮಾಡಿ ದೀಪಿಕಾ ಆರೋಪಿಸಿದ್ದಾರೆ.

  ನೀವು ಗರ್ಭಿಣಿಯೇ? ದೀಪಿಕಾ ಪಡುಕೋಣೆಗೆ ಅಭಿಮಾನಿಗಳ ಪ್ರಶ್ನೆನೀವು ಗರ್ಭಿಣಿಯೇ? ದೀಪಿಕಾ ಪಡುಕೋಣೆಗೆ ಅಭಿಮಾನಿಗಳ ಪ್ರಶ್ನೆ

  ರಣವೀರ್ ಸಿಂಗ್ ಪ್ರತಿಕ್ರಿಯೆ

  ರಣವೀರ್ ಸಿಂಗ್ ಪ್ರತಿಕ್ರಿಯೆ

  ಇದಕ್ಕೆ ನಗುವ ಎಮೋಜಿ ಹಾಕಿರುವ ದೀಪಿಕಾ ಪತಿ ರಣವೀರ್ ಸಿಂಗ್ 'ನಿಜಕ್ಕೂ ಬಹಳ ಹಳೆಯದು' ಎಂದಿದ್ದಾರೆ. ದೀಪಿಕಾ ಫೋಟೊಕ್ಕೆ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. 13ರ ವಯಸ್ಸಿನಲ್ಲಿಯೇ ಅಷ್ಟು ಎತ್ತರ ಇದ್ದಿರಾ ಎಂದು ಕೆಲವರು ಪ್ರಶ್ನಿಸಿದ್ದಾರೆ.

  ಕಾಜೋಲ್ ಜೊತೆ ನಟಿಸಬೇಡ: ಆಮೀರ್ ಖಾನ್ ಗೆ ಶಾರುಖ್ ಹೀಗೆ ಹೇಳಿದ್ದೇಕೆ?ಕಾಜೋಲ್ ಜೊತೆ ನಟಿಸಬೇಡ: ಆಮೀರ್ ಖಾನ್ ಗೆ ಶಾರುಖ್ ಹೀಗೆ ಹೇಳಿದ್ದೇಕೆ?

  ಬಿಗ್ ಬಾಸ್‌ಗೆ ಕಳಿಸಬೇಕು

  ಬಿಗ್ ಬಾಸ್‌ಗೆ ಕಳಿಸಬೇಕು

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸಿನಿಮಾ ಪ್ರಚಾರಕ್ಕೆ ತೆರಳಿದ್ದ ದೀಪಿಕಾ, ಅವಕಾಶ ಸಿಕ್ಕರೆ ಅಮೀರ್ ಖಾನ್ ಅವರನ್ನು ಬಿಗ್ ಬಾಸ್ ಮನೆಗೆ ಕಳಿಸಲು ಬಯಸುವುದಾಗಿ ಹೇಳಿದ್ದರು. ಅಮೀರ್ ಮಾತನಾಡುವುದು ಬಹಳ ಕಡಿಮೆ. ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಹೀಗಾಗಿ ಅವರನ್ನು ಬಿಗ್ ಬಾಸ್‌ಗೆ ಕಳಿಸಬೇಕು ಎಂದು ಸಲ್ಮಾನ್ ಖಾನ್ ಅವರ ಬಳಿ ಹೇಳಿದ್ದರು.

  English summary
  Bollywood actress Deepika Padukone has shared a 20 years old photo of her and family with Aamir Khan and said i was awkward.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X