For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿ ಬಿದ್ದ ದೀಪಿಕಾ: 'ಚಪಾಕ್' ಚಿತ್ರದ ಕಲೆಕ್ಷನ್ ಅಷ್ಟಕಷ್ಟೆ.!

  |

  ಬೆಂಗಳೂರು ಬೆಡಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಚಿತ್ರ ಕಳೆದ ಶುಕ್ರವಾರ ತೆರೆಗೆ ಬಂದಿತ್ತು. ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನಚರಿತ್ರೆ ಆಧಾರಿತ 'ಚಪಾಕ್' ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಸಿಕ್ಕಿತ್ತು.

  'ಚಪಾಕ್' ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ದೀಪಿಕಾ ಪಡುಕೋಣೆ ಅಭಿನಯವನ್ನು ಹಾಡಿ ಹೊಗಳಿದ್ದರು. 'ಚಪಾಕ್' ಚಿತ್ರಕ್ಕೆ ಎಲ್ಲೆಡೆ ಉತ್ತಮ ವಿಮರ್ಶೆ ಕೂಡ ಲಭ್ಯವಾಗಿತ್ತು. 'ಚಪಾಕ್' ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದರೂ, ಬಾಕ್ಸ್ ಆಫೀಸ್ ನಲ್ಲಿ ಮಾತ್ರ ಕಮಾಲ್ ಮಾಡುತ್ತಿಲ್ಲ.

  ವಿವಾದದ ನಡುವೆ ಬಿಡುಗಡೆ ಆದ 'ಚಪಾಕ್' ಚಿತ್ರ ಮೊದಲ ದಿನ ಕಮಾಯಿ ಮಾಡಿದ್ದು ತೀರಾ ಕಡಿಮೆ. ವೀಕೆಂಡ್ ನಲ್ಲೂ ಹೆಚ್ಚು ಪ್ರೇಕ್ಷಕರನ್ನು ಸೆಳೆಯದ 'ಚಪಾಕ್' ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಅಕ್ಷರಶಃ ಮುಗ್ಗರಿಸಿ ಬಿದ್ದಿದೆ. ಮುಂದೆ ಓದಿರಿ...

  'ಚಪಾಕ್' ಚಿತ್ರದ ಮೊದಲ ದಿನದ ಗಳಿಕೆ ಎಷ್ಟು.?

  'ಚಪಾಕ್' ಚಿತ್ರದ ಮೊದಲ ದಿನದ ಗಳಿಕೆ ಎಷ್ಟು.?

  ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಚಿತ್ರ ಭಾರತದಲ್ಲಿ 1700 ಸ್ಕ್ರೀನ್ ಗಳಲ್ಲಿ ತೆರೆಗೆ ಬಂದಿತ್ತು. ಹೀಗಿದ್ದರೂ, ಮೊದಲ ದಿನ (ಶುಕ್ರವಾರ) 'ಚಪಾಕ್' ಚಿತ್ರ ಕಲೆಕ್ಟ್ ಮಾಡಿದ್ದು ಕೇವಲ 4.50 ಕೋಟಿ. ಬಾಲಿವುಡ್ ಮಟ್ಟಕ್ಕೆ ಇದು ತೀರಾ ಕಡಿಮೆ.

  'ಚಪಾಕ್' ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ತೀರಾ ಕಡಿಮೆ'ಚಪಾಕ್' ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ತೀರಾ ಕಡಿಮೆ

  ವೀಕೆಂಡ್ ಪರ್ಫಾಮೆನ್ಸ್ ಪರ್ವಾಗಿಲ್ಲ

  ವೀಕೆಂಡ್ ಪರ್ಫಾಮೆನ್ಸ್ ಪರ್ವಾಗಿಲ್ಲ

  ಮೊದಲ ದಿನಕ್ಕೆ ಹೋಲಿಸಿದರೆ, ಶನಿವಾರ ಮತ್ತು ಭಾನುವಾರ 'ಚಪಾಕ್' ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಪರ್ವಾಗಿಲ್ಲ. ಎರಡನೇ ದಿನ (ಶನಿವಾರ) ಅಂದಾಜು 6.50 ಕೋಟಿ ಕಲೆಕ್ಷನ್ ಮಾಡಿದ 'ಚಪಾಕ್', ಮೂರನೇ ದಿನ (ಭಾನುವಾರ) ಸುಮಾರು 7 ಕೋಟಿ ವಸೂಲಿ ಮಾಡಿದೆ.

  Chhapaak Review: ಅದ್ಭುತ ಸಿನಿಮಾ, ಅತ್ಯದ್ಭುತ ನಟನೆChhapaak Review: ಅದ್ಭುತ ಸಿನಿಮಾ, ಅತ್ಯದ್ಭುತ ನಟನೆ

  ನಾಲ್ಕು ದಿನಕ್ಕೆ 20 ಕೋಟಿ

  ನಾಲ್ಕು ದಿನಕ್ಕೆ 20 ಕೋಟಿ

  ನಿನ್ನೆ ಸೋಮವಾರ ಬಾಕ್ಸ್ ಆಫೀಸ್ ನಲ್ಲಿ ಮತ್ತೆ 'ಚಪಾಕ್' ಚಿತ್ರ ಡಲ್ ಆಗಿದೆ. ಕೇವಲ 2 ಕೋಟಿಯನ್ನು ಮಾತ್ರ ಮೇಘನಾ ಗುಲ್ಜರ್ ನಿರ್ದೇಶನದ ಚಿತ್ರ ಕಲೆಕ್ಟ್ ಮಾಡಿದೆ. ನಾಲ್ಕು ದಿನಗಳಲ್ಲಿ ಅಂದಾಜು 20 ಕೋಟಿ ಕಲೆಕ್ಷನ್ ಮಾಡುವಲ್ಲಿ ಮಾತ್ರ 'ಚಪಾಕ್' ಚಿತ್ರ ಯಶಸ್ವಿ ಆಗಿದೆ.

  'ಚಪಾಕ್' ಚಿತ್ರದಲ್ಲಿ ಆಸಿಡ್ ಎರಚಿದವನ ಹೆಸರು ರಾಜೇಶ್ ಅಲ್ಲ: ಬಷೀರ್ ಖಾನ್.!'ಚಪಾಕ್' ಚಿತ್ರದಲ್ಲಿ ಆಸಿಡ್ ಎರಚಿದವನ ಹೆಸರು ರಾಜೇಶ್ ಅಲ್ಲ: ಬಷೀರ್ ಖಾನ್.!

  ಕಲೆಕ್ಷನ್ ನಲ್ಲಿ ಹಿಂದೆ ಬಿದ್ದ 'ಚಪಾಕ್'

  ಕಲೆಕ್ಷನ್ ನಲ್ಲಿ ಹಿಂದೆ ಬಿದ್ದ 'ಚಪಾಕ್'

  ಬಹು ನಿರೀಕ್ಷೆ ಹುಟ್ಟಿಸಿದ್ದ 'ಚಪಾಕ್' ಚಿತ್ರದ ಬಗ್ಗೆ ಪಾಸಿಟಿವ್ ವಿಮರ್ಶೆಗಳು ಪ್ರಕಟವಾದರೂ, ಕಲೆಕ್ಷನ್ ವಿಷಯದಲ್ಲಿ ಹಿಂದೆ ಬಿದ್ದಿದೆ. 'ಚಪಾಕ್' ಚಿತ್ರದಲ್ಲಿ ನಟನೆಯ ಜೊತೆಗೆ ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಸಹಯೋಗದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ದೀಪಿಕಾ ಪಡುಕೋಣೆ ವಹಿಸಿಕೊಂಡಿದ್ದರು.

  English summary
  Deepika Padukone starrer Chhapaak earns approx Rs.20 crore in 4 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X