ದೀಪಿಕಾ ಪಡುಕೋಣೆ ಮೊದಲ ಕನ್ನಡ ಸಿನಿಮಾದ ಮುಹೂರ್ತ ಫೋಟೋ ವೈರಲ್
ಭಾರತೀಯ ಚಿತ್ರರಂಗದ ಖ್ಯಾತ ನಟಿ ದೀಪಿಕಾ ಪಡುಕೋಣೆ. ಕನ್ನಡ ಮೂಲದ ನಟಿ ದೀಪಿಕಾ ಇಂದು ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಅಭಿಮಾನಿಗಳನ್ನುರಂಜಿಸುತ್ತಿರುವ ದೀಪಿಕಾ ಮೊದಲು ಬಣ್ಣಹಚ್ಚಿದ್ದು ಕನ್ನಡ ಸಿನಿಮಾದಲ್ಲಿ.
ದೀಪಿಕಾ ಬಣ್ಣದ ಲೋಕದ ಜರ್ನಿ ಪ್ರಾರಂಭವಾಗಿದ್ದೆ ಕನ್ನಡ ಸಿನಿಮಾರಂಗದಿಂದ. ಈ ವಿಚಾರ ಕನ್ನಡಿಗರಿಗೆ ಬಿಟ್ಟರೆ ಬೇರೆಯವರಿಗೂ ಗೊತ್ತಿರ್ಲಿಕ್ಕಿಲ್ಲ. ಯಾಕಂದ್ರೆ ದೀಪಿಕಾ ಎಲ್ಲಿಯೂ ಕನ್ನಡ ಸಿನಿಮಾರಂಗದ ಬಗ್ಗೆ, ಮೊದಲ ಸಿನಿಮಾದ ಬಗ್ಗೆ ಮಾತನಾಡಿದವರಲ್ಲ. ಆದರೆ ದೀಪಿಕಾ ಸಿನಿಮಾ ಪಯಣ ಪ್ರಾರಂಭವಾಗಿದ್ದು ಕನ್ನಡದಿಂದ ಎನ್ನುವುದು ಸತ್ಯ. ಆದರೀಗ ಸಿನಿಮಾದ ಮುಹೂರ್ತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಂದೆ ಓದಿ..

ದೀಪಿಕಾ ಮೊದಲ ಕನ್ನಡ ಸಿನಿಮಾ
ರಿಯಲ್ ಸ್ಟಾರ್ ಉಪೇಂದ್ರ ಜೊತೆ ಐಶ್ವರ್ಯ ಸಿನಿಮಾದಲ್ಲಿ ದೀಪಿಕಾ ನಾಯಕಿಯಾಗಿ ಅಭಿನಯಿಸಿದ್ರು. ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದರು. 2006ರಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಅಂದರೆ ಇದೀಗ ಐಶ್ವರ್ಯ ಸಿನಿಮಾಗೆ ಮತ್ತು ದೀಪಿಕಾ ಬಣ್ಣದ ಬದುಕಿನ ಪಯಣ ಪ್ರಾರಂಭವಾಗಿ14 ವರ್ಷಗಳಾಗಿದೆ. ಆದರೆ ಐಶ್ವರ್ಯ ಸಿನಿಮಾದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇದೆ.

ಐಶ್ವರ್ಯ ಸಿನಿಮಾದ ಮುಹೂರ್ತ ಫೋಟೋಗಳು ವೈರಲ್
14 ವರ್ಷದ ಬಳಿಕ ಐಶ್ವರ್ಯ ಸಿನಿಮಾದ ಮುಹೂರ್ತ ಫೋಟೋಗಳು ಈಗ ವೈರಲ್ ಆಗಿವೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಳೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ದೀಪಿಕಾ ಕ್ಯಾಮರಾ ಫೇಸ್ ಮಾಡಿದ್ದು ಎಂದು ಇಂದ್ರಜಿತ್ ಲಂಕೇಶ್ ಬರೆದುಕೊಂಡಿದ್ದಾರೆ. ಅಂದ್ಹಾಗೆ ಈ ಮುಹೂರ್ತ ಸಮಾರಂಭ ನಡೆದಿದ್ದು ಬೆಂಗಳೂರಿನ ಬಸವನಗುಡಿ ಗಣೇಶ್ ದೇವಸ್ಥಾನದಲ್ಲಿ. ದೀಪಿಕಾ ಮತ್ತು ಉಪೇಂದ್ರ ಇಬ್ಬರು ಫೋಟೋಗೆ ಪೋಸ್ ನೀಡಿದ್ದಾರೆ. ವಿಶೇಷ ಅಂದರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗೆಸ್ಟ್ ಆಗಿ ಆಗಮಿಸಿದ್ದರು.

ಮೊದಲ ಸಿನಿಮಾ 'ಓಂ ಶಾಂತಿ ಓಂ' ಎನ್ನುತ್ತಾರೆ ದೀಪಿಕಾ
ಬಳಿ ಬಣ್ಣದ ಡ್ರೆಸ್ ನಲ್ಲಿ ದೀಪಿಕಾ ಕಂಗೊಳಿಸುತ್ತಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ದೀಪಿಕಾ ಸಂದರ್ಶವೊಂದರಲ್ಲಿ ಮೊದಲ ಸಿನಿಮಾ 'ಓಂ ಶಾಂತಿ ಓಂ' ಈ ಸಿನಿಮಾಗೂ ಮೊದಲು ಯಾವುದೇ ಸಿನಿಮಾ ಸೆಟ್ ಗಳಿಗೆ ಹೋಗಿಲ್ಲ. ನನಗೆ ನಟನೆ ಮಾಡಿದ ಅನುಭವವೇ ಇಲ್ಲ" ಎಂದು ಹೇಳಿದ್ದರು. ದೀಪಿಕಾ ಈ ಮಾತು ಕನ್ನಡಿಗರನ್ನು ಕೆರಳಿಸಿತ್ತು. ಕನ್ನಡದಲ್ಲಿ ಸಿನಿಮಾ ಮಾಡಿದರೂ ದೀಪಿಕಾ ಹೇಳಿಕೊಂಡಿಲ್ಲ ಯಾಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೀಪಿಕಾರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಪ್ರಭಾಸ್ ಜೊತೆ ದೀಪಿಕಾ ಮೊದಲ ಸಿನಿಮಾ
ದೀಪಿಕಾ ಮತ್ತೆ ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಬರುತ್ತಿದ್ದಾರೆ. ಪ್ರಭಾಸ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಪ್ರಭಾಸ್ ಮತ್ತು ದೀಪಿಕಾ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಈ ಜೋಡಿಯನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈ ವರ್ಷವೇ ಸೆಟ್ಟೇರಬೇಕಿತ್ತು. ಆದರೆ ಕೊರೊನಾ ವೈರಸ್ ಪರಿಣಾಮ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.


Click it and Unblock the Notifications











