'ಪಠಾಣ್' ಸುದ್ದಿಗೋಷ್ಠಿಯಲ್ಲಿ ಫ್ಲೋರಲ್ ಡ್ರೆಸ್ ಧರಿಸಿ ಮಿಂಚಿದ ದೀಪಿಕಾ: ದಿಪ್ಪಿ ಕಿವಿಯೋಲೆ ಬೆಲೆ ಎಷ್ಟು ಗೊತ್ತಾ?

ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಪ್ರತಿ ಬಾರಿ ತಮ್ಮ ವಿಭಿನ್ನ ರೀತಿಯ ಧಿರಿಸಿನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಜೀನ್ಸ್, ಸ್ಕರ್ಟ್, ಗೌನ್, ಸೀರೆ ಹೀಗೆ ಯಾವುದೇ ಉಡುಗೆ ತೊಟ್ಟರೂ ಕರಾವಳಿ ಚೆಲುವೆಯ ಅಂದಕ್ಕೆ ಸರಿಸಾಟಿ ಯಾರು ಇಲ್ಲ. ದೀಪಿಕಾ ಯಾವುದೇ ಬಟ್ಟೆ ಧರಿಸಿದರೂ ಸಖತ್ ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ. ಇತ್ತೀಚೆಗೆ ಪಠಾಣ್ ಸಿನಿಮಾದ 'ಬೇಷರಮ್ ರಂಗ್' ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಜೊತೆಗೆ 'ಬಾಯ್ಕಾಟ್ ಪಠಾಣ್' ಟ್ರೆಂಡ್ ಕೂಡ ಆರಂಭವಾಗಿತ್ತು. ಆದರೆ, ಇದೆಲ್ಲಾವನ್ನ ಮೀರಿ ಸಿನಿಮಾ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಮಾಡಿದ್ದು, ಈ ಸಂದರ್ಭದ ದೀಪಿಕಾ ಲುಕ್ ಸಖತ್ ವೈರಲ್ ಆಗಿದೆ.

Deepika Padukone styled her stunning floral gown with Rs 7k earrings

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಪಠಾಣ್ ಗೆಲುವಿನ ಟಾನಿಕ್ ನೀಡಿದೆ. ಪಠಾಣ್ ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ಆದರೂ ಈ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಡಿದ್ದು, ಗೆಲುವು ಸಾಧಿಸಿದೆ. ಪಠಾಣ್ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಸೋಮವಾರ ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ ನಿರ್ದೇಶಕ ಸಿದ್ದಾರ್ಥ್ ಆನಂದ್, ಜಾನ್ ಅಬ್ರಹಾಂ, ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಭಾಗಿಯಾಗಿದ್ದರು. ಈ ಸಂದರ್ಭ ನಟಿ ದೀಪಿಕಾ ಪಡುಕೋಣೆ ಮಲ್ಟಿ ಕಲರ್ ಫ್ಲೋರಲ್ ಡ್ರೆಸ್ ಧರಿಸಿ ಬಂದಿದ್ದರು. ಸದ್ಯ ದೀಪಿಕಾ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಫ್ಲೋರಲ್ ಉಡುಗೆಯಲ್ಲಿ ಕಂಗೊಳಿಸಿದ ದೀಪಿಕಾ

ಫ್ಲೋರಲ್ ಉಡುಗೆಯಲ್ಲಿ ಕಂಗೊಳಿಸಿದ ದೀಪಿಕಾ

ದೀಪಿಕಾ ಸುದ್ದಿಗೋಷ್ಠಿಯಲ್ಲಿ ಗುಲಾಬಿ, ಹಸಿರು ಮತ್ತು ಹಳದಿ ಬಣ್ಣದ ದೊಡ್ಡದಾದ ಹೂಗಳಿರುವ ಕಪ್ಪು ಬಣ್ಣದ ಮಿಡ್ ಗೌನ್ ಧರಿಸಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು. ಆ ಡ್ರೆಸ್ ಅನ್ನು ಜನಪ್ರಿಯ ಡಿಸೈನರ್ ಜೋಡಿಗಳಾದ ಗೌರಿ ಹಾಗೂ ನೈನಿಕಾ ಎಂಬುವವರು ವಿನ್ಯಾಸಗೊಳಿಸಿದ್ದಾರೆ. ಈ ಡ್ರೆಸ್ ಜೊತೆಗೆ ದೀಪಿಕಾ ಗೋಲ್ಡ್ ಕಲರ್ ಕಿವಿಯೋಲೆ ಹಾಗೂ ಸಿಂಪಲ್ ಮೇಕಪ್ ಮಾಡಿದ್ದು, ಪಾಯಿಂಟ್ ಹೈಹೀಲ್ಸ್ ಧರಿಸಿದ್ದರು. ಈ ಉಡುಗೆಯಲ್ಲಿ ಬಾಲಿವುಡ್ ದೀವಾ ದೀಪಿಕಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಅವರ ಬ್ಯೂಟಿಫುಲ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ದೀಪಿಕಾ ಧರಿಸಿದ್ದ ಕಿವಿಯೋಲೆ ಬೆಲೆ 7 ಸಾವಿರ

ದೀಪಿಕಾ ಧರಿಸಿದ್ದ ಕಿವಿಯೋಲೆ ಬೆಲೆ 7 ಸಾವಿರ

ದೀಪಿಕಾ ಪಡುಕೋಣೆ ಫ್ಲೋರಲ್ ಡ್ರೆಸ್ ಜೊತೆ ಸಿಂಪಲ್ ಟು ಟೋನ್ ಡ್ರಾಪ್ ಕಿವಿಯೋಲೆ ಧರಿಸಿದ್ದರು. ಹೆಚ್ಚು ಹೊಳಪಿನ ಸ್ಪಟಿಕಾ ಹಾಗೂ ಎನಾಮೆಲ್ ವರ್ಕ್ ನೊಂದಿಗೆ ಮಾಡಲಾದ ಈ ಕಿವಿಯೋಲೆ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದಂತು ಗ್ಯಾರಂಟಿ. ಅಂದಹಾಗೆ ದೀಪಿಕಾ ಧರಿಸಿದ್ದ ಕಿವಿಯೋಲೆ ಬೆಲೆ 7,874 ರೂಪಾಯಿ.

ಕಿಂಗ್ ಖಾನ್ ಲುಕ್ ಗೆ ಅಭಿಮಾನಿಗಳು ಫಿದಾ

ಕಿಂಗ್ ಖಾನ್ ಲುಕ್ ಗೆ ಅಭಿಮಾನಿಗಳು ಫಿದಾ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರಿಗೆ ಈಗ 56 ವರ್ಷ. ಆದರೂ ಕೂಡ ಪಠಾಣ್ ಚಿತ್ರಕ್ಕಾಗಿ ಶಾರುಖ್ ೮ ಪ್ಯಾಕ್ ಮಾಡಿದ್ದರು. ಸಿನಿಮಾದಲ್ಲಿನ ಅವರ ಲುಕ್ ಕೂಡ ಸಖತ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಪಠಾಣ್ ಸುದ್ದಿಗೋಷ್ಠಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಕಪ್ಪು ಬಣ್ಣದ ಬ್ಲೇಝರ್ ಹಾಗೂ ಮ್ಯಾಸ್ಕುಲಿನ್ ಲೇಬಲ್ ನ ಪ್ಯಾಂಟ್ ಧರಿಸಿದ್ದರು. ಬ್ಲೇಝರ್ ಒಳಗೆ ಶರ್ಟ್ ಬದಲು ಕಪ್ಪು ಟಿ ಶರ್ಟ್ ಧರಿಸಿದ್ದು, ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸುತ್ತಿದ್ದರು. ಶಾರುಖ್ ಧರಿಸನ್ನು ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಆದಂತಹ ಶೆಲಿನಾ ನಥಾನಿ ವಿನ್ಯಾಸಗೊಳಿಸಿದ್ದು, ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

More from Filmibeat

English summary
Deepika Padukone styled her stunning floral gown with Rs 7k earrings for Pathaan press conference, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X