For Quick Alerts
  ALLOW NOTIFICATIONS  
  For Daily Alerts

  ದೀಪಿಕಾಗೆ ಕಾಡುತ್ತಿದ್ದ ದೀರ್ಘಕಾಲದ ನೋವು: ನಾಲ್ಕೈದು ತಿಂಗಳು ವಿಶ್ರಾಂತಿ.!

  By Bharath Kumar
  |

  'ಪದ್ಮಾವತ್' ಚಿತ್ರದ ಯಶಸ್ಸಿನ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬೇರೆ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ. ಕಾರಣ ದೀಪಿಕಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ, ಚಿತ್ರೀಕರಣ ಮಾಡಲು ಸಾಧ್ಯವಾಗುತ್ತಿಲ್ಲ.

  ಪ್ರಸ್ತತ ಇರ್ಫಾನ್ ಖಾನ್ ಜೊತೆ ಅಭಿನಯಿಸಬೇಕಿರುವ ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಸದ್ಯಕ್ಕೆ ಈ ಸಿನಿಮಾ ಶೂಟಿಂಗ್ ಕೂಡ ನಿಂತಿದೆ. ಶ್ರೀದೇವಿಯ ಅಂತಿಮ ದರ್ಶನಕ್ಕೆ ಬಂದಿದ್ದ ದೀಪಿಕಾ, ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

  ಅಷ್ಟಕ್ಕೂ, ದೀಪಿಕಾ ಪಡುಕೋಣೆಗೆ ಆಗಿರುವ ಗಾಯ ಅಥವಾ ಕಾಯಿಲೆ ಏನು ಎಂಬುದು ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ. ಡಿಪ್ಪಿಗೆ ಏನಾಗಿದೆ ಎಂದು ತಿಳಿಯಲು ಮುಂದೆ ಓದಿ....

  ಬೆನ್ನು ನೋವಿನಿಂದ ಬಳಲುತ್ತಿರುವ ದೀಪಿಕಾ

  ಬೆನ್ನು ನೋವಿನಿಂದ ಬಳಲುತ್ತಿರುವ ದೀಪಿಕಾ

  ದೀರ್ಘಕಾಲದ ಬೆನ್ನು ನೋವಿನಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬಳಲುತ್ತಿದ್ದಾರೆ. ಹೀಗಾಗಿ, ಚಿತ್ರೀಕರಣದಲ್ಲಿ ಭಾಗಿಯಾಗಲು ಕಷ್ಟವಾಗುತ್ತಿದೆ.

  3-4 ತಿಂಗಳು ವಿಶ್ರಾಂತಿ ಬೇಕಿದೆ

  3-4 ತಿಂಗಳು ವಿಶ್ರಾಂತಿ ಬೇಕಿದೆ

  ಸತತವಾಗಿ ಕಾಡುತ್ತಿರುವ ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಂಡಿದ್ದು, ವೈದ್ಯರು 3-4 ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರಂತೆ.

  ಹೆಚ್ಚಿದ ಕೆಲಸದಿಂದ ಒತ್ತಡ

  ಹೆಚ್ಚಿದ ಕೆಲಸದಿಂದ ಒತ್ತಡ

  ದೀಪಿಕಾ ಪಡುಕೋಣೆ ಸತತ ಸಿನಿಮಾ ಚಿತ್ರೀಕರಣಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಜೊತೆಗೆ ಜಾಹೀರಾತುಗಳಲ್ಲೂ ಭಾಗಿಯಾಗುತ್ತಿದ್ದಾರೆ. ಇದು ಸಹಜವಾಗಿ ದೀಪಿಕಾ ಹೆಗಲ ಮೇಲೆ ಒತ್ತಡವಾಗುತ್ತಿದೆ. ಈ ಎಲ್ಲ ಕಾರಣದಿಂದ ಬೆನ್ನು ನೋವು ಹೆಚ್ಚಾಗುತ್ತಿದೆ.

  ಸೋನಂ ಕಪೂರ್ ವಿರುದ್ಧ ಗರಂ ಆದ ದೀಪಿಕಾ ಪಡುಕೋಣೆ ಅಭಿಮಾನಿಗಳು.!ಸೋನಂ ಕಪೂರ್ ವಿರುದ್ಧ ಗರಂ ಆದ ದೀಪಿಕಾ ಪಡುಕೋಣೆ ಅಭಿಮಾನಿಗಳು.!

  ಮನೆ ಕೆಲಸ ಮಾಡಲು ಕಷ್ಟಪಡುತ್ತಿದ್ದಾರೆ

  ಮನೆ ಕೆಲಸ ಮಾಡಲು ಕಷ್ಟಪಡುತ್ತಿದ್ದಾರೆ

  ಮೂಲಗಳ ಪ್ರಕಾರ ದೀಪಿಕಾ ಪಡುಕೋಣೆ ತಮ್ಮ ಮನೆಯಲ್ಲಿ ದೈನಂದಿನ ಕೆಲಸ ಮಾಡಲು ಕೂಡ ಕಷ್ಟ ಪಡುತ್ತಿದ್ದಾರೆ ಎನ್ನಲಾಗಿದೆ. ಬೆನ್ನಿಗೆ ಬೆಲ್ಟ್ ಕಟ್ಟಿಕೊಂಡು ನೋವು ನಿವಾರಣೆ ಮಾಡಲು ಪ್ರಯತ್ನಿಸುತ್ತಿದ್ದಾರಂತೆ.

  ಖಾಸಗಿ ಕಾರ್ಯಕ್ರಮದಲ್ಲೂ ಡಿಪ್ಪಿ ಗೈರು

  ಖಾಸಗಿ ಕಾರ್ಯಕ್ರಮದಲ್ಲೂ ಡಿಪ್ಪಿ ಗೈರು

  ಇತ್ತೀಚಿಗಷ್ಟೆ ಶ್ರೀದೇವಿ ಅವರ ಅಂತಿಮ ಸಂಸ್ಕಾರದ ವೇಳೆ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ ಮತ್ತೆ ಯಾವ ಖಾಸಗಿ ಕಾರ್ಯಕ್ರಮದಲ್ಲೂ ಕಾಣಿಸಿಲ್ಲ. ಬಹುಶಃ ಇದೇ ಕಾರಣದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

  ದೀಪಿಕಾ ಮುಂದಿನ ಸಿನಿಮಾ ಯಾವುದು.?

  ದೀಪಿಕಾ ಮುಂದಿನ ಸಿನಿಮಾ ಯಾವುದು.?

  ವಿಶಾಲ್ ಭಾರದ್ವಜ್ ನಿರ್ದೇಶನ ಮಾಡಲಿರುವ ಹೊಸ ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇರ್ಫಾನ್ ಖಾನ್ ನಾಯಕರಾಗಿದ್ದಾರೆ. ಮತ್ತೊಂದೆಡೆ ಇರ್ಫಾನ್ ಖಾನ್ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ, ಇಬ್ಬರು ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಈ ಸಿನಿಮಾದ ಚಿತ್ರೀಕರಣ ಕೂಡ ತಾತ್ಕಲಿಕವಾಗಿ ಸ್ಥಗಿತಗೊಂಡಿದೆ.

  ಆರೋಗ್ಯದ ಬಗ್ಗೆ ಆತಂಕಕಾರಿ ವಿಚಾರ ಬಿಚ್ಚಿಟ್ಟ ನಟ ಇರ್ಫಾನ್ ಖಾನ್ಆರೋಗ್ಯದ ಬಗ್ಗೆ ಆತಂಕಕಾರಿ ವಿಚಾರ ಬಿಚ್ಚಿಟ್ಟ ನಟ ಇರ್ಫಾನ್ ಖಾನ್

  English summary
  Reports state that Deepika Padukone is suffering from unbearable back pain. The doctors have advised Deepika Padukone to take complete rest for 3-4 months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X