ಸಿನಿಮಾದಲ್ಲಿ ಕಿಸ್ ಮಾಡಲು ಪತಿಯ ಪರ್ಮೀಷನ್ ಪಡೆಯುತ್ತಾರಾ ದೀಪಿಕಾ ಪಡುಕೋಣೆ?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಮುಂದಿನ ಚಿತ್ರ 'ಗೆಹ್ರೈಯಾನ್' ಸಲುವಾಗಿ​​ ಸುದ್ದಿಯಲ್ಲಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ ವೈರಲ್ ಆಗಿದೆ. ನಟಿ ದೀಪಿಕಾ ಹಿಂದೆಂದೂ ಕಾಣಿಸಿಕೊಂಡಿರದಷ್ಟು ಬೋಲ್ಡ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಕಣ್ಣಿಗೆ ಕಾಣುತ್ತಿದೆ. ಈ ಚಿತ್ರಕ್ಕಾಗಿ ಹಲವು ವರ್ಷಗಳ ಬಳಿಕ ದೀಪಿಕಾ ಬಿಕಿನಿ ಕೂಡ ಧರಿಸಿದ್ದಾರೆ.

ಚಿತ್ರದ ಟ್ರೇಲರ್‌ನಲ್ಲಿ ಲಿಪ್ ಲಾಕ್, ರೊಮ್ಯಾಂಟಿಕ್ ಸೀನ್​ಗಳು ಹೆಚ್ಚಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಇದು ಒಂದಿಷ್ಟು ಮಂದಿಯ ಮನಸ್ಸು ಗೆದ್ದಿದ್ದರೆ, ಮತ್ತೊಂದಿಷ್ಟು ಮಂದಿ ಈ ಬಗ್ಗೆ ಟೀಕೆ ವ್ಯಕ್ತ ಪಡಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಹಾಟ್‌ನೆಸ್‌ನ ಮಿತಿ ಮೀರಿದ್ದಾರೆ ಎನ್ನುವಂತಹ ಕಮೆಂಟ್‌ಗಳು ಕೂಡ ಬಂದಿದ್ದವು. ಅಷ್ಟೇ ಅಲ್ಲ ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ರಣ್ವೀರ್ ಸಿಂಗ್ ಬಗ್ಗೆ ಮಾತನಾಡಿದ್ದಾರೆ.

ರಣ್ವೀರ್ ಸಿಂಗ್ ಬಗ್ಗೆ ದೀಪಿಕಾ ವಿಚಾರದಲ್ಲಿ ಟ್ರೋಲ್‌ಗಳು ಆಗ್ತಿವೆ. ಈ ಬಗ್ಗೆ ನಟಿ ದೀಪಿಕಾ ನಟಿ ದೀಪಿಕಾ ಪಡುಕೋಣೆ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಅಷ್ಟಕ್ಕೂ ದೀಪಿಕಾ, ರಣ್ವೀರ್ ಬಗ್ಗೆ ಬಂದಿರು ಕಮೆಂಟ್ ಏನು ಅದಕ್ಕೆ ದೀಪಿಕಾ ನೀಡಿದ ಉತ್ತರ ಏನು ಎನ್ನುವುದನ್ನು ಮುಂದೆ ಓದಿ...

ಸಿನಿಮಾದಲ್ಲಿ ಲಿಪ್ ಲಾಕ್ ಮಾಡಲು ಪತಿ ಪರ್ಮಿಷನ್ ಕೊಟ್ಟರಾ?

ಸಿನಿಮಾದಲ್ಲಿ ಲಿಪ್ ಲಾಕ್ ಮಾಡಲು ಪತಿ ಪರ್ಮಿಷನ್ ಕೊಟ್ಟರಾ?

ಶಕುನ್ ಬಾತ್ರಾ ನಿರ್ದೇಶನದ 'ಗೆಹ್ರೈಯಾನ್' ಚಿತ್ರದ ಟ್ರೈಲರ್, ಪೋಸ್ಟರ್​​​ ಇತ್ತೀಚೆಗೆ ಬಿಡುಗಡೆಯಾಗಿ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ನಡುವೆ ಒಂದಷ್ಟು ಹಾಟ್ ದೃಶ್ಯಗಳು ಮತ್ತು ಲಿಪ್ ಲಾಕ್ ಸೀನ್‌ಗಳು ಇವೆ. ದೀಪಿಕಾ ಕಿಸ್ಸಿಂಗ್ ದೃಶ್ಯಗಳು ಟ್ರೋಲ್‌ಗೆ ತುತ್ತಾಗಿವೆ. "ನೀವೂ ಕಿಸ್ಸಿಂಗ್ ದೃಶ್ಯದಲ್ಲಿ ಅಭಿನಯಿಸುವ ಮುನ್ನ ಪತಿ ರಣ್ವೀರ್ ಸಿಂಗ್ ಬಳಿ ಅನುಮತಿ ಪಡೆದುಕೊಂಡಿದ್ದಾರಾ." ಎಂದು ಕಮೆಂಟ್ ಮಾಡಲಾಗಿದೆ. ಸಂದರ್ಶನ ಒಂದರಲ್ಲಿ ನಟಿ ದೀಪಿಕಾಗೆ ಈ ಪ್ರಶ್ನೆ ಎದುರಾಗಿದೆ.

ವಿಚಾರ ಕೇಳಿ ''Yuck

ವಿಚಾರ ಕೇಳಿ ''Yuck" ಎಂದ ದೀಪಿಕಾ!

ಚಿತ್ರದಲ್ಲಿ ರೊಮ್ಯಾಂಟಿಕ್ ಮತ್ತು ಲಿಪ್ ಲಾಕ್ ದೃಶ್ಯಗಳಲ್ಲಿ ಅಭಿನಯಿಸಲು ರಣವೀರ್ ಅನುಮತಿ ಕೇಳಿದ್ದೀರಾ ಎಂಬ ಕಾಮೆಂಟ್‌ಗಳ ಬಗ್ಗೆ ನಟಿ ದೀಪಿಕಾ ಅವರನ್ನು ಕೇಳಲಾಯಿತು. ಇದಕ್ಕೆ ನಟಿ ದೀಪಿಕಾ ಪಡುಕೋಣೆ "Yuck!" ಎಂಬ ಒಂದು ಪದ ಬಳಕೆ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಯಕ್ ಎಂದರೆ ಅಸಹ್ಯ ಎನ್ನುವ ಅರ್ಥ ಬರುತ್ತದೆ. ಹೀಗೆ ಹೇಳಿದ ದೀಪಿಕಾ "ಅಂತಹ ಕಾಮೆಂಟ್​, ಟ್ರೋಲ್‌ಗಳಿಗೆ ಪ್ರತಿಕ್ರಿಯಿಸುವುದು ತುಂಬಾ ಮೂರ್ಖತನದ ವಿಚಾರ ಎನಿಸುತ್ತದೆ." ಎಂದಿದ್ದಾರೆ.

ದೀಪಿಕಾ ಬಗ್ಗೆ ರಣ್ವೀರ್‌ಗೆ ಬಹಳ ಹೆಮ್ಮೆ ಇದೆಯಂತೆ!

ದೀಪಿಕಾ ಬಗ್ಗೆ ರಣ್ವೀರ್‌ಗೆ ಬಹಳ ಹೆಮ್ಮೆ ಇದೆಯಂತೆ!

ಇನ್ನು ಸಿನಿಮಾ ಮಾಡಲು ರಣವೀರ್ ಸಿಂಗ್ ಜೊತೆ ಚರ್ಚೆ ಮಾಡುತ್ತೀರಾ ಎನ್ನುವ ವಿಚಾರಕ್ಕೆ ಸಂಬಂದಿಸಿದಂತೆ. "ನಮಗೆ ಇದು ಅತ್ಯಂತ ಮುಖ್ಯವಾದ ವಿಷಯ ಎಂದು ನಾನು ಭಾವಿಸುತ್ತೇನೆ. ನಾನು ಕಾಮೆಂಟ್‌ಗಳನ್ನು ಓದುವುದಿಲ್ಲ, ರಣ್ವೀರ್ ಕೂಡ ಹಾಗೆ ಮಾಡುವುದಿಲ್ಲ ಎಂದು ನನಗೆ ಖಚಿತತೆ ಇದೆ. "ನಾನು ಮಾಡುವ ಚಿತ್ರದ ಬಗ್ಗೆ ಅವರು ತುಂಬಾ ಹೆಮ್ಮೆಪಡುತ್ತಾರೆ ಮತ್ತು ನನ್ನ ಅಭಿನಯದ ಬಗ್ಗೆ ಅವರು ತುಂಬಾ ಹೆಮ್ಮೆ ಹೊಂದಿದ್ದಾರೆ." ಎಂದು ನಟಿ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ನೀಡಿದ್ದಾರೆ.

ಒಟಿಟಿಯಲ್ಲಿ ಗೆಹ್ರೈಯಾನ್ ರಿಲೀಸ್!

ಒಟಿಟಿಯಲ್ಲಿ ಗೆಹ್ರೈಯಾನ್ ರಿಲೀಸ್!

ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೊಣೆ, ಅನನ್ಯ ಪಾಂಡೆ, ಧೈರ್ಯ ಕರ್ವಾ, ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಫೆಬ್ರವರಿ 11ಕ್ಕೆ ಈ ಚಿತ್ರ ಒಟಿಟಿ ಪ್ಲ್ಯಾಟ್ ಫಾರ್ಮ್ ಆದ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಸದ್ಯ ದೀಪಿಕಾ ನೀಡಿರುವ ಹೇಳಿಕೆ ವೈರಲ್ ಆಗಿದೆ.

More from Filmibeat

English summary
Deepika Padukone Take Permission From Ranveer Singh To Act In Intimate scene, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X