'ಚಪಾಕ್' ಟ್ರೈಲರ್ ರಿಲೀಸ್ ವೇಳೆ ಭಾವುಕರಾಗಿ ಕಣ್ಣೀರಿಟ್ಟ ನಟಿ ದೀಪಿಕಾ ಪಡುಕೋಣೆ
Recommended Video
ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಚಪಾಕ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಚಪಾಕ್ ಈಗಾಗಲೆ ಗೊತ್ತಿರುವ ಹಾಗೆ 2005ರಲ್ಲಿ ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮೀ ಅಗರ್ ವಾಲ್ ಅವರ ಜೀವನದ ಕಥೆ. ದೀಪಿಕಾ ಪಡುಕೋಣೆ, ಲಕ್ಷ್ಮೀ ಅಗರ್ ವಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೈಜ ಘಟನೆ ಆಧಾರಿತ ಚಿತ್ರದ ಟ್ರೈಲರ್ ನೋಡಿ ಚಿತ್ರಾಭಿಮಾನಿಗಳು ದಂಗ್ ಆಗಿದ್ದಾರೆ.
ಟ್ರೈಲರ್ ನಲ್ಲಿ ದೀಪಿಕಾ ಅಭಿನಯ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಲಕ್ಷ್ಮೀ ಅಗರ್ ವಾಲ್ ಅವರ ಮೇಲೆ ಆಸಿಡ್ ದಾಳಿಯಾದ ನಂತರ ಅವರು ಹೇಗೆ ಬದುಕುಳಿದರು, ಮುಖದ ಸರ್ಜರಿ ನಂತರ ಅವರ ಪ್ರತಿಕ್ರಿಯೆ ಹೇಗಿತ್ತು, ಜೀವನವನ್ನು ಹೇಗೆ ಸವಾಲಾಗಿ ಸ್ವೀಕರಿಸಿದರು, ನಂತರ ಭಾರತದಲ್ಲಿ ಆಸಿಡ್ ಬ್ಯಾನ್ ಮಾಡಬೇಕೆಂದು ನಡೆಸಿದ ಅಭಿಯಾನದ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ.

ಸರ್ಜರಿ ನಂತರ ಲಕ್ಷ್ಮೀ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವ ಚಿತ್ರಣ ನೋಡಿಗರ ಕಣ್ಣಂಚು ಒದ್ದೆಯಾಗುವಂತೆ ಮಾಡುತ್ತೆ. ಚಿತ್ರದಲ್ಲಿ ದೀಪಿಕಾ ಪಾತ್ರದ ಹೆಸರು ಲತಾ. ಈ ಪಾತ್ರಕ್ಕಾಗಿ ದೀಪಿಕಾ ಪಟ್ಟ ಶ್ರಮವನ್ನು ನೆನೆದು ಕಣ್ಣೀರಾಕಿದ್ದಾರೆ. ಟ್ರೈಲರ್ ರಿಲೀಸ್ ಸಮಯದಲ್ಲಿ ಭಾವುಕರಾದ ದೀಪಿಕಾ ಸಿನಿಮಾ ಪಯಣದ ಬಗ್ಗೆ ಮಾತನಾಡುತ್ತ ಅತ್ತಿದ್ದಾರೆ.

ಸಿನಿಮಾ ಜೀವನದಲ್ಲೆ ಚಪಾಕ್ ಅತಿ ಕಠಿಣವಾದ ಪಾತ್ರ ಎಂದು ಹೇಳಿದ್ದಾರೆ. ಪಾತ್ರ ನಿರ್ವಹಿಸುವುದಕ್ಕಿಂತ ಪಾತ್ರಕ್ಕಾಗಿ ಬದಲಾಗಿದ್ದ ಮುಖದ ನಿರ್ವಹಣೆ ಕಷ್ಟವಾಗಿತ್ತು ಎಂದು ಹೇಳಿದ್ದಾರೆ. ಅಂದ್ಹಾಗೆ ಚಿತ್ರಕ್ಕೆ ನಿರ್ದೇಶಕರಿ ಮೇಘನಾ ಗುಲ್ಜರ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಲಕ್ಷ್ಮೀ ಅಗರ್ ವಾಲ್ ಗೆ ಸಹಾಯ ಮಾಡಿದ ಅಮೋಲ್ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಅಂದರೆ ದೀಪಿಕಾ ಲಾಂಗ್ ಗ್ಯಾಪ್ ನ ಬಳಿಕ ವಿಭಿನ್ನ ಪಾತ್ರದ ಮೂಲಕ ತೆರೆ ಮೇಲೆ ಬರ್ತಿದ್ದಾರೆ. ಪದ್ಮಾವತ್ ಚಿತ್ರದ ನಂತರ ದೀಪಿಕಾ ಅಭಿನಯದ ಚಿತ್ರಗಳು ತೆರೆಗೆ ಬಂದಿರಲಿಲ್ಲ. ಚಪಾಕ್ ಚಿತ್ರದ ನಿರ್ಮಾಣದ ಮೊದಲ ಸಿನಿಮಾ. ಚಿತ್ರ ಮುಂದಿನ ವರ್ಷ ಜನವರಿ 10ಕ್ಕೆ ತೆರೆಗೆ ಬರುತ್ತಿದೆ.


Click it and Unblock the Notifications











