ಕಳ್ಳರ ಗುಂಪು ಸೇರಲಿರುವ ನಟಿ ದೀಪಿಕಾ ಪಡುಕೋಣೆ!

ನಟಿ ದೀಪಿಕಾ ಪಡುಕೋಣೆ ಕಳ್ಳರ ಗುಂಪು ಸೇರಲಿದ್ದಾರೆ. ಹೌದು, ಇಷ್ಟು ದಿನ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದ ದೀಪಿಕಾ ಈಗ ಖಳನಾಯಕಿ ಆಗುತ್ತಿದ್ದಾರೆ.

ಧೂಮ್ ಸಿನಿಮಾ ಸರಣಿ ಬಾಲಿವುಡ್‌ ನ ಜನಪ್ರಿಯ ಸಿನಿಮಾ ಸರಣಿಗಳಲ್ಲೊಂದು. ಈವರೆಗೆ ಮೂರು ಧೂಮ್ ಸಿನಿಮಾಗಳು ಬಂದಿದ್ದು ಮೂರೂ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ನಾಲ್ಕನೇ ಧೂಮ್ ಸಿನಿಮಾ ತೆರೆಗೆ ಬರಲು ತಯಾರಾಗಿದ್ದು, ಧೂಮ್ 4 ರಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

ಧೂಮ್ ಸಿನಿಮಾದಲ್ಲಿ ನಾಯಕ ನಟರಿಗಿಂತ ಖಳರ ಪಾತ್ರಕ್ಕೇ ಮಹತ್ವ ಹೆಚ್ಚು. ಈಗ ಧೂಮ್ 4 ನಲ್ಲಿ ನಟಿ ದೀಪಿಕಾ ಪಡುಕೋಣೆ ಖಳನಾಯಕಿ ಪಾತ್ರದಲ್ಲಿ ನಟಿಸಲಿದ್ದಾರೆ. ಅಂದಹಾಗೆ ಧೂಮ್ 4 ನಲ್ಲಿ ಪ್ರಮುಖ ಕಳ್ಳನ ಪಾತ್ರದಲ್ಲಿ ನಟಿಸುತ್ತಿರುವುದು ಶಾರುಖ್ ಖಾನ್.

ಧೂಮ್ 2 ಐಶ್ವರ್ಯಾ ರೈ ಕಳ್ಳಿಯ ಪಾತ್ರದಲ್ಲಿ ನಟಿಸಿದ್ದರು

ಧೂಮ್ 2 ಐಶ್ವರ್ಯಾ ರೈ ಕಳ್ಳಿಯ ಪಾತ್ರದಲ್ಲಿ ನಟಿಸಿದ್ದರು

ಧೂಮ್ 2 ನಲ್ಲಿ ನಟಿ ಐಶ್ವರ್ಯಾ ರೈ ಕಳ್ಳಿಯ ಪಾತ್ರದಲ್ಲಿ ನಟಿಸಿದ್ದರು. ಧೂಮ್ 3 ನಲ್ಲಿ ಅಮೀರ್ ಖಾನ್ ಫ್ಯಾನ್ಸಿ ಹಾಗೂ ಬುದ್ಧಿವಂತ ಕಳ್ಳನ ಪಾತ್ರದಲ್ಲಿ ನಟಿಸಿದ್ದರು. ಧೂಮ್ 4 ನಲ್ಲಿ ಶಾರುಖ್ ಖಾನ್ ಕಳ್ಳನಾಗುತ್ತಿದ್ದಾರೆ. ಶಾರುಖ್‌ಗೆ ದೀಪಿಕಾ ಪಡುಕೋಣೆ ಜೊತೆಯಾಗಲಿದ್ದಾರೆ.

ಅಭಿಷೇಕ್-ಉದಯ್ ಚೋಪ್ರಾ ಮುಂದುವರೆಯಲಿದ್ದಾರೆ

ಅಭಿಷೇಕ್-ಉದಯ್ ಚೋಪ್ರಾ ಮುಂದುವರೆಯಲಿದ್ದಾರೆ

ಇನ್ನು ಧೂಮ್ ನ ಮೊದಲ ಸಿನಿಮಾ ಸರಣಿಯಿಂದಲೂ ಪೊಲೀಸ್ ಪಾತ್ರದಲ್ಲಿರುವ ಅಭಿಷೇಕ್ ಬಚ್ಚನ್, ಧೂಮ್ 4 ನಲ್ಲಿಯೂ ಪೊಲೀಸ್ ಪಾತ್ರದಲ್ಲಿಯೇ ಮುಂದುವರೆಯಲಿದ್ದಾರೆ. ಇನ್ನು ಉದಯ್ ಚೋಪ್ರಾ ಸಹ ಪೊಲೀಸ್ ಪಾತ್ರದಲ್ಲಿ ಮುಂದುವರೆಯಲಿದ್ದಾರೆ.

ಪಠಾಣ್ ನಲ್ಲಿ ಶಾರುಖ್-ದೀಪಿಕಾ ನಟನೆ

ಪಠಾಣ್ ನಲ್ಲಿ ಶಾರುಖ್-ದೀಪಿಕಾ ನಟನೆ

ಶಾರುಖ್ ಹಾಗೂ ದೀಪಿಕಾ ಪಡುಕೋಣೆ 'ಪಠಾಣ್' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ ಸಹ ನಟಿಸಲಿದ್ದಾರೆ. ಗೌಪ್ಯ ಏಜೆಂಟ್‌ ಬಗೆಗಿನ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್, ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

ಸಖತ್ ಬ್ಯುಸಿ ನಟಿ ದೀಪಿಕಾ ಪಡುಕೋಣೆ

ಸಖತ್ ಬ್ಯುಸಿ ನಟಿ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಬಾಲಿವುಡ್‌ನ ಸಖತ್ ಬ್ಯುಸಿ ನಟಿ. ಅವರ ನಟನೆಯ '83' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಪ್ರಭಾಸ್ ಜೊತೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಕ್ರಿಶ್ 4 ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ಪಠಾಣ್ ನಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Deepika Padukone to act in Dhoom 4 movie. She will be acting as villain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X