»   » ಪಿ.ವಿ ಸಿಂಧು ಆಗಲಿದ್ದಾರೆ ದೀಪಿಕಾ ಪಡುಕೋಣೆ.!

ಪಿ.ವಿ ಸಿಂಧು ಆಗಲಿದ್ದಾರೆ ದೀಪಿಕಾ ಪಡುಕೋಣೆ.!

Posted By: Naveen
Subscribe to Filmibeat Kannada

ಬಾಲಿವುಡ್ ನಲ್ಲಿ ಈಗ ಕ್ರೀಡಾಭಿಮಾನ ಹೆಚ್ಚಾಗುತ್ತಿದೆ. ಹೇಗೆ ಅಂದ್ರೆ, 'ಧೋನಿ ದಿ ಆನ್ ಟೋಲ್ಡ್ ಸ್ಟೋರಿ', 'ಅಝರ್', 'ಮೇರಿ ಕೋಮ್', 'ದಂಗಲ್' ಸೇರಿದಂತೆ ಕ್ರೀಡೆಗೆ ಸಂಬಂಧಪಟ್ಟ ಹಲ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಕಂಡು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದೆ. ಇದೇ ಲಿಸ್ಟ್ ಗೆ 'ಸಚಿನ್' ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾ ಸದ್ಯದಲ್ಲಿಯೇ ರಿಲೀಸ್ ಆಗಲಿದೆ. ಹೀಗಿರುವಾಗಲೇ ಯುವ ಕ್ರೀಡಾಪಟುವಿನ ಜೀವನಗಾಥೆ ಬಾಲಿವುಡ್ ಮಂದಿಯ ಕಣ್ಣಿಗೆ ಬಿದ್ದಿದೆ.

2016ರ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ 'ಪಿ.ವಿ.ಸಿಂಧು' ಅವರ ಜೀವನ ಚರಿತ್ರೆ ಈಗ ಸಿನಿಮಾ ಆಗಲಿದೆ.

ಅಂದಹಾಗೆ, ಪಿ.ವಿ. ಸಿಂಧು ಪಾತ್ರದಲ್ಲಿ ಬೆಂಗಳೂರು ಬೆಡಗಿ, ಬ್ಯಾಡ್ಮಿಂಟನ್ ಆಟಗಾರ್ತಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರಂತೆ. ಮುಂದೆ ಓದಿ....

'ಪಿ.ವಿ. ಸಿಂಧು' ಜೀವನ ಚರಿತ್ರೆ

2016ರ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಆಟದಲ್ಲಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆದ್ದಿದ್ದರು. 21 ವರ್ಷ ವಯಸ್ಸಿನಲ್ಲಿಯೇ, ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಕೊಟ್ಟ ಮೊದಲ ಹುಡುಗಿ ಎಂಬ ಕೀರ್ತಿಗೆ ಪಾತ್ರರಾದ ಪಿ.ವಿ.ಸಿಂಧು ನಿಜ ಜೀವನ ಇದೀಗ ಬೆಳ್ಳಿಪರದೆ ಮೇಲೆ ಬರಲು ರೆಡಿಯಾಗುತ್ತಿದೆ.

'ಬೆಳ್ಳಿ ಹುಡುಗಿ'ಯಾಗಲಿದ್ದಾರೆ ದೀಪಿಕಾ

'ಪಿ.ವಿ ಸಿಂಧು' ಅವರ ಬಯೊಪಿಕ್ ನಲ್ಲಿ ನಟಿ ದೀಪಿಕಾ ಪಡುಕೋಣೆ ನಟಿಸಲಿದ್ದಾರಂತೆ. ದೀಪಿಕಾ ರವರಿಗೆ ಈ ಕಥೆ ಇಷ್ಟ ಆಗಿದ್ದು, ಸಿನಿಮಾಗೆ ಒಪ್ಪಿಗೆ ಸೂಚಿಸಿದ್ದಾರೆ ಅಂತ ಹೇಳಲಾಗ್ತಿದೆ.

ದೀಪಿಕಾಗಿದೆ 'ಬ್ಯಾಡ್ಮಿಂಟನ್' ನಂಟು

ನಟಿ ದೀಪಿಕಾ ಪಡುಕೋಣೆಗೆ ಬ್ಯಾಡ್ಮಿಂಟನ್ ನಂಟು ಹೊಸದೇನಲ್ಲ. ಯಾಕಂದ್ರೆ, ಅವರ ತಂದೆ ಪ್ರಕಾಶ್ ಪಡುಕೋಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬ್ಯಾಡ್ಮಿಂಟನ್ ಪ್ಲೇಯರ್. ಇನ್ನೂ ದೀಪಿಕಾ ಪಡುಕೋಣೆ ಕೂಡ ಕಮ್ಮಿ ಏನಿಲ್ಲ. ಬ್ಯಾಡ್ಮಿಂಟನ್ ನಲ್ಲಿ ದೀಪಿಕಾ ನ್ಯಾಷನಲ್ ಲೆವೆಲ್ ಆಟಗಾರ್ತಿ. ಹೀಗಾಗಿ, ಪಿ.ವಿ.ಸಿಂಧು ಪಾತ್ರಕ್ಕೆ ದೀಪಿಕಾ ಪಡುಕೋಣೆ ಪರ್ಫೆಕ್ಟ್ ಎಂಬುದು ಚಿತ್ರತಂಡದ ಅಭಿಪ್ರಾಯ.

'ಸೋನು ಸೂದ್' ನಿರ್ಮಾಣ

ನಟ, ನಿರ್ಮಾಪಕ 'ಸೋನು ಸೂದ್' ಈ ಸಿನಿಮಾವನ್ನ ತೆರೆಗೆ ತರುವ ಕನಸು ಹೊಂದಿದ್ದಾರೆ.

'ಸ್ಫೂರ್ತಿ'ಯ ಕಥೆ

''ಭಾರತದ ಎಷ್ಟೋ ಹೆಣ್ಣು ಮಕ್ಕಳಿಗೆ ಈ ಕಥೆ ಸ್ಫೂರ್ತಿ ನೀಡುವಂಥದ್ದು. ಎಲ್ಲಾ ಹೆಣ್ಣು ಮಕ್ಕಳು ಸಹ ದೊಡ್ಡ ಕನಸು ಕಾಣಬೇಕು, ಅಷ್ಟೆ ಅಲ್ಲ ಅದನ್ನ ಸಾಧಿಸಬೇಕು. ಇದೇ ಉದ್ದೇಶದಿಂದ ಈ ಚಿತ್ರವನ್ನ ಕೈಗೆತ್ತಿಕೊಂಡಿದ್ದೇನೆ'' ಎಂದು ಸೋನು ಸೂದ್ ಹೇಳಿದ್ದಾರೆ.

ಸಾಕಷ್ಟು ತಯಾರಿ

'ಸೋನು ಸೂದ್' ಈಗಾಗಲೇ 'ಪಿ.ವಿ.ಸಿಂಧು' ಅವರ ಬಗ್ಗೆ ಸಾಕಷ್ಟು ವಿಷಯಗಳನ್ನ ಕಲೆ ಹಾಕಿದ್ದಾರೆ. ಆರು ತಿಂಗಳಿಗೂ ಹೆಚ್ಚು ಕಾಲ ಸಿಂಧು ಬಗ್ಗೆ ರಿಸರ್ಚ್ ಮಾಡಿ ಅನೇಕ ಇಂಟ್ರೆಸ್ಟಿಂಗ್ ವಿಷಯಗಳನ್ನ ಕಥೆಯಲ್ಲಿ ಆಳವಡಿಸಿದ್ದಾರೆ.

'ಸೈನಾ' ಬದಲು 'ಸಿಂಧು'

'ಸೈನಾ ನೆಹ್ವಾಲ್' ಬಯೋಪಿಕ್ ಸಹ ಬಾಲಿವುಡ್ ನಲ್ಲಿ ತಯಾರಾಗ್ತಿದೆ. ಈ ಚಿತ್ರದಲ್ಲಿ ಈಗ 'ಶ್ರದ್ಧಾ ಕಪೂರ್' ಕಾಣಿಸಿಕೊಳ್ತಿದ್ದಾರೆ. ಆದ್ರೆ, ಮೊದಲು ಈ ಸಿನಿಮಾದ ಆಫರ್ ಕೂಡ ದೀಪಿಕಾಗೆ ಹೋಗಿತ್ತಂತೆ.

ಸಂತಸದಲ್ಲಿ 'ಸಿಂಧು'

ತಮ್ಮ ಬಗ್ಗೆ ಸಿನಿಮಾ ಬರ್ತಿರೋ ಬಗ್ಗೆ ಸಿಂಧು ತುಂಬ ಖುಷಿಯಾಗಿದ್ದಾರೆ. ಅದ್ರಲ್ಲೂ ದೀಪಿಕಾ ತಮ್ಮ ಪಾತ್ರ ಮಾಡುತ್ತಿರುವುದು ಸಿಂಧುಗೆ ತುಂಬ ಕುತೂಹಲವನ್ನ ಹುಟ್ಟಿಸಿದೆಯಂತೆ. ಅಂದಹಾಗೆ, ಈ ಸಿನಿಮಾದ ಚಿತ್ರೀಕರಣ ಸದ್ಯದಲ್ಲೇ ಶುರು ಆಗಲಿದೆ.

English summary
Deepika Padukone to play PV Sindhu role in her biopic. PV Sindhu became the first Indian woman to win a silver medal at the Olympics last year.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada