»   » 'ರಾಬ್ತಾ' ಚಿತ್ರಕ್ಕಾಗಿ ಹೊಸ ಅವತಾರದಲ್ಲಿ ದೀಪಿಕಾ ಪಡುಕೋಣೆ

'ರಾಬ್ತಾ' ಚಿತ್ರಕ್ಕಾಗಿ ಹೊಸ ಅವತಾರದಲ್ಲಿ ದೀಪಿಕಾ ಪಡುಕೋಣೆ

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಇತ್ತೀಚೆಗೆ ಟ್ರೈಲರ್ ನಿಂದ ಸಂಚಲನ ಉಂಟುಮಾಡಿರುವ ಚಿತ್ರ 'ರಾಬ್ತಾ'. ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಕ್ರಿತಿ ಸನೋನ್ ಅಭಿನಯದ ಈ ಚಿತ್ರಕ್ಕಾಗಿ ಈಗ ನಟಿ ದೀಪಿಕಾ ಪಡುಕೋಣೆ ಹೊಸ ಅವತಾರ ತಾಳಿದ್ದಾರೆ.

ಡಿಂಪಿ 'ರಾಬ್ತಾ' ಚಿತ್ರದ ಸಾಂಗ್ ಒಂದರಲ್ಲಿ ಸ್ಟೆಪ್ ಹಾಕಿದ್ದು ಹೊಸ ಲುಕ್ ನಲ್ಲಿ ಕಾಣಿಸಿ ಕೊಂಡಿದ್ದಾರೆ. ಅಮೆರಿಕದದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ದೀಪಿಕಾ ಈ ಸಾಂಗ್ ಗಾಗಿ ಬರೋಬ್ಬರಿ 22 ಗಂಟೆಗಳ ಕಾಲ ಜರ್ನಿ ಮಾಡಿ 3 ಫ್ಲೈಟ್ ಗಳನ್ನು ಬದಲಿಸಿದರಂತೆ. ದೀಪಿಕಾ ಇಷ್ಟೆಲ್ಲಾ ಕಷ್ಟ ಪಟ್ಟಿರುವುದು ಜಸ್ಟ್ ಆಕೆಯ ಕ್ಲೋಸ್ ಫ್ರೆಂಡ್ ದಿನೇಶ್ ವಿಜನ್ ಆಗಿ.

'ರಾಬ್ತಾ' ಚಿತ್ರದ ನಿರ್ದೇಶಕ ದಿನೇಶ್ ವಿಜನ್, ದೀಪಿಕಾಗೆ ಒಂದು ವಿಶೇಷ ಪಾತ್ರಕ್ಕೆ ಆಹ್ವಾನಿಸಿದಾಗ ತುಟಿಕ್ ಪಿಟಿಕ್ ಎನ್ನದೇ ಒಪ್ಪಿಕೊಂಡ ದೀಪಿಕಾ, ಹಂಗೇರಿಯ ಬುದಪೆಸ್ಟ್ ಗೆ ಭೇಟಿ ನೀಡಿ ಒಂದೇ ದಿನದಲ್ಲಿ ಸಾಂಗ್ ಮುಗಿಸಿಕೊಟ್ಟರಂತೆ. ಮುಂದೆ ಓದಿರಿ...

ದೀಪಿಕಾ ಪಡುಕೋಣೆ

'ರಾಬ್ತಾ' ಚಿತ್ರದ ಹಾಡೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಮೈನವಿರೇಳಿಸುವ ಅತ್ಯದ್ಭುತ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾಗಾಗಿ ಹೊಸ ಅವತಾರದಲ್ಲಿ ಸ್ಟೆಪ್ ಹಾಕಿದ್ದಾರೆ.

ದಿನೇಶ್ ವಿಜನ್ ಗಾಗಿ ಡ್ಯಾನ್ಸ್ ಮಾಡಿದ ಡಿಂಪಿ

ಅಂದಹಾಗೆ ಚಿತ್ರದ ನಿರ್ದೇಶಕ ದಿನೇಶ್ ವಿಜನ್ ಸಾಂಗ್ ಚಿತ್ರೀಕರಣಕ್ಕೆ ಆಹ್ವಾನಿಸಿದಾಗ ದೀಪಿಕಾ ಪಡುಕೋಣೆ ಅಮೆರಿಕದಲ್ಲಿ xxx ಸೀಕ್ವೆಲ್ ಸಿನಿಮಾ ಶೂಟಿಂಗ್ ನಲ್ಲಿದ್ದರಂತೆ. ದಿನೇಶ್ ವಿಜನ್ ಬೆಸ್ಟ್ ಗೆಳೆಯ ಆದ್ದರಿಂದ ನಿರಂತರವಾಗಿ 22 ಗಂಟೆಗಳ ಟ್ರಾವೆಲ್ ಮಾಡಿ 3 ಫ್ಲೈಟ್ ಗಳನ್ನು ಬದಲಿಸಿ ಚಿತ್ರೀಕರಣಕ್ಕೆ ಬಂದರಂತೆ.

ಒಂದೇ ದಿನದಲ್ಲಿ ಸಾಂಗ್ ಮುಕ್ತಾಯ

ಅಂದಹಾಗೆ ಡಿಫರೆಂಟ್ ಡಿಸೈನ್ ಇರುವ ಕಪ್ಪು ಉಡುಗೆಯನ್ನು ಧರಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸುವ ಹಾಟ್ ಲುಕ್ ನಲ್ಲಿ ದೀಪಿಕಾ ಒಂದೇ ದಿನದಲ್ಲಿ ಸಾಂಗ್ ಮುಗಿಸಿದರಂತೆ.

ದಿನೇಶ್ ವಿಜನ್ ಚಿತ್ರದಲ್ಲಿ ನಟಿಸಿದ್ದ ದೀಪಿಕಾ

ಈ ಹಿಂದೆ ದೀಪಿಕಾ ಪಡುಕೋಣೆ ತಮ್ಮ ಬೆಸ್ಟ್ ಫ್ರೆಂಡ್ ದಿನೇಶ್ ವಿಜನ್ ಅವರ 'ಲವ್ ಆಜ್ಕಲ್' ಮತ್ತು 'Cocktail' ಚಿತ್ರದಲ್ಲಿ ನಟಿಸಿದ್ದಾರೆ.

ಬುದಪೆಸ್ಟ್ ನಲ್ಲಿ ಚಿತ್ರೀಕರಣ

ಡಿಂಪಿ 'ರಾಬ್ತಾ' ಚಿತ್ರಕ್ಕಾಗಿ ಸ್ಟೆಪ್ ಹಾಕಿರುವ ಹಾಡನ್ನು ಹಂಗೇರಿ ದೇಶದ ಬುದಪೆಸ್ಟ್ ನಲ್ಲಿ ಒಂದು ದಿನ ಪೂರ್ಣವಾಗಿ ಶೂಟಿಂಗ್ ಮಾಡಲಾಗಿದೆಯಂತೆ.

'ರಾಬ್ತಾ' ಚಿತ್ರದ ತಾರಾಬಳಗ

ದಿನೇಶ್ ವಿಜನ್ ಆಕ್ಷನ್ ಕಟ್ ಹೇಳಿರುವ 'ರಾಬ್ತಾ' ಚಿತ್ರದಲ್ಲಿ ಸುಶಾಂತ್ ಸಿಂಗ್ ಮತ್ತು ಕ್ರಿತಿ ಸನೋನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ವಿಶೇಷ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ನಟ ರಾಜ್ ಕುಮಾರ್ ರಾವ್ ಅಭಿನಯಿಸಿದ್ದಾರೆ.

ಬಿಡುಗಡೆ ಯಾವಾಗ?

ರಾಬ್ತಾ' ಚಿತ್ರದ ಹಾಡುಗಳಿಗೆ ಪ್ರೀತಮ್ ಸಂಗೀತ ಸಂಯೋಜನೆ ನೀಡಿದ್ದು, ಸಚಿನ್ ಜಿಗರ್ ಹಿನ್ನೆಲೆ ಸಂಗೀತ ನಿರ್ವಹಣೆ ಮಾಡಿದ್ದಾರೆ. ಚಿತ್ರ ಜೂನ್ 9 ರಂದು ದೇಶದಾದ್ಯಂತ ಬಿಡುಗಡೆ ಆಗಲಿದೆ.

English summary
Bollywood Actress Deepika Padukone Travelled For 22 Hours And Changed 3 Flights For 'The Raabta' Song!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada