ವಿಚಿತ್ರ ಬಟ್ಟೆ ತೊಟ್ಟು ಟ್ರೋಲ್ ಆದ ನಟಿ ದೀಪಿಕಾ ಪಡುಕೋಣೆ!
ಸದ್ಯ ಕಾನ್ ಫಿಲ್ಮ್ ಫೆಸ್ಟಿವಲ್ ಜೋರಾಗಿ ನಡೆಯುತ್ತಿದೆ. ಸಿನಿಮೋತ್ಸವದಲ್ಲಿ ಬಾಲಿವುಡ್ ತಾರೆಯರು ಮಿಂಚುತ್ತಾ ಇದ್ದಾರೆ. ದಿನಕ್ಕೊಂದು ವೇಷ ಭೂಷಣದ ಮೂಲಕ ಗಮನ ಸೆಳೆಯುತ್ತಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಈ ತಾರೆಯರು ಯವ ರೀತಿ ಬಟ್ಟೆಗಳನ್ನು ತೊಡುತ್ತಾರೆ ಎನ್ನುವುದೇ ಕುತೂಹಲದ ಸಂಗತಿ.
ನಟಿ ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಪೂಜಾ ಹೆಗ್ಡೆ, ಊರ್ವಶಿ ರೌಟೇಲಾ ಸೇರಿದಮತೆ ಹಲವು ಬಾಲಿವುಡ್ ನಟಿಯರು ಬಣ್ಣ ಬಣ್ಣದ, ವಿವಿಧ ವಿನ್ಯಾಸದ ಉಡುಪು ತೊಟ್ಟು ಮಿಂಚುತ್ತಾ ಇದ್ದಾರೆ.
ಆದರೆ ನಟಿ ದೀಪಿಕಾ ತೊಟ್ಟ ಡ್ರೆಸ್ ಒಂದು ಸಿಕ್ಕಾ ಪಟ್ಟೆ ಟ್ರೋಲ್ ಅಗುತ್ತಾ ಇದೆ. ದೊಡ್ಡ ಗೌನ್ ಹಾಕಿಕೊಂಡು ದೀಪಿಕಾ ನಡೆಯಲು ಹೆಣಗಾಡಿದ್ದಕ್ಕೆ ಟ್ರೋಲ್‌ಗೆ ತುತ್ತಾಗಿದ್ದಾರೆ.

ಸೀರೆಯುಟ್ಟು ಮಿಂಚಿದ್ದ ದೀಪಿಕಾ ಪಡುಕೋಣೆ!
ನಟಿ ದೀಪಿಕಾ ಪಡುಕೋಣೆ ಸದ್ಯ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಕ್ರಿಯವಾಗಿ ಭಾಗಿ ಆಗಿದ್ದಾರೆ. ಮೊದಲ ದಿನದಿಂದಲೂ ಈ ಕಾರ್ಯಕ್ರಮದಲ್ಲಿ ದೀಪಿಕಾ ಭಾಗಿ ಆಗಿದ್ದಾರೆ. ಇನ್ನು ಮೊದಲ ದಿನ ತಮ್ಮ ಎಂಟ್ರಿ ವೇಳೆ ದೀಪಿಕಾ ಸೀರೆ ಉಟ್ಟಿದ್ದರು. ಸಬ್ಯಸಾಚಿ ವಿನ್ಯಾಸದ ಸೀರೆಯಲ್ಲಿ ದೀಪಿಕಾ ಸುಂದರವಾಗಿ ಕಾಣಿಸಿಕೊಂಡಿದ್ದರು.

ಬ್ಲೋಯಿಂಗ್ ಗೌನ್‌ನಲ್ಲಿ ದೀಪಿಕಾ ಪರದಾಟ!
ಕಾನ್ ಸಿನಿಮೋತ್ಸವದ ಭಾಗವಾಗಿ ನಟಿ ದೀಪಿಕಾ ಪಡೊಕೋಣೆ ಮತ್ತೊಂದು ವಿಭಿನ್ನ ಕಾಸ್ಟ್ಯೂಂ ತೊಟ್ಟು ರೆಡ್ ಕಾರ್ಪೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಕೇಸರಿ ಬಣ್ಣದ ಬ್ಲೋಯಿಂಗ್ ಗೌನ್ ತೊಟ್ಟಿದ್ದರು ದೀಪಿಕಾ ಪಡುಕೋಣೆ. ಇದು ತುಂಬಾ ದೊಡ್ಡ ಗೌನ್ ಆದ ಕಾರಣ ದೀಪಿಕಾ ಈ ಡ್ರೆಸ್ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲು ಕಷ್ಟ ಪಡುತ್ತಿದ್ದರು.

ಟ್ರೋಲ್ ಆದ ದೀಪಿಕಾ ಪಡುಕೋಣೆ ಡ್ರೆಸ್!
ಈ ಡ್ರೆಸ್ ನೋಡಿದ ನೆಟ್ಟಿಗರು ದೀಪಿಕಾ ಬಗ್ಗೆ ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕಮೆಂಟ್‌ಗಳು ಈ ರೀತಿ ಇವೆ. 'ಈ ರೀತಿಯ ಬಟ್ಟೆಯನ್ನು ಹಾಕಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಹಾಗಾಗಿ ದೀಪಿಕಾ ಸಿನಿಮಾಗಳನ್ನು ನೋಡುವುದೇ ಇಲ್ಲವೇನೋ, ಭಾರತೀಯ ಸಿನಿಮಾ ತಾರೆಯರು ಎಂದಿಗೂ ಕಲಿಯುವುದಿಲ್ಲ, ಈ ರೀತಿ ಪರದೆ ಸುತ್ತಿಕೊಳ್ಳುವುದರ ಬದಲು ಇವರ ಬಟ್ಟೆ ಹಾಕಿಕೊಳ್ಳ ಬಹುದು.' ಎನ್ನುವ ಹಲವಾರು ಕಮೆಂಟ್‌ಗಳು ಬಂದಿವೆ.

ವಿಚಿತ್ರ ಉಡುಪಿನಿಂದ ಹಲವು ಬಾರಿ ಟ್ರೋಲ್!
ಈ ಹಿಂದೆಯೂ ದೀಪಿಕಾ ಹಸಿರು ಬಣ್ಣದ ದೊಡ್ಡ ಗೌನ್ ತೊಟ್ಟು ಟ್ರೊಲ್ ಆಗಿದ್ದರು. ಜೊತೆಗೆ 'ಗೆಹ್ರಾಹಿಯಾ' ಸಿನಿಮಾ ಪ್ರಮೋಷನ್ ವೇಳೆ ಕಪ್ಪು, ಬಿಳಿ ಬಣ್ಣದ ಸೂಟ್ ತೊಟ್ಟು ಟ್ರೋಲ್‌ಗೆ ತುತ್ತಾಗಿದ್ದರು. ಆಗ ದೀಪಿಕಾ ಮತ್ತು ಅನನ್ಯಾ ಪಾಂಡೆ ಇಬ್ಬರೂ ಕೂಡ ಟ್ರೋಲ್ ಆಗಿದ್ದರು.


Click it and Unblock the Notifications











