twitter
    For Quick Alerts
    ALLOW NOTIFICATIONS  
    For Daily Alerts

    ಜೆ ಎನ್ ಯು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ದೀಪಿಕಾ ಪಡುಕೋಣೆ

    |

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದೆಹಲಿ ಜೆ ಎನ್ ಯುಗೆ (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಮಂಗಳವಾರ ರಾತ್ರಿ 7.30ರ ಸಮಯಕ್ಕೆ ಜೆ ಎನ್ ಯು ಕ್ಯಾಂಪಸ್ ಒಳಗೆ ಪ್ರವೇಶಿಸಿದ ನಟಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

    ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ದೀಪಿಕಾ ಪಡುಕೋಣೆ ಭಾಷಣ ಮಾಡಿಲ್ಲ. ಘಟನೆ ಕುರಿತು ಏನೂ ಮಾತನಾಡಿಲ್ಲ. 15 ನಿಮಿಷ ಅಲ್ಲೇ ಇದ್ದ ದೀಪಿಕಾ ಇಬ್ಬರು ವಿದ್ಯಾರ್ಥಿಗಳು ಮಾತನಾಡಿದ ಬಳಿಕ ಅಲ್ಲಿಂದ ತೆರಳಿದರು. ಈ ವೇಳೆ ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್
    ಇದ್ದರು.

    ಜೆಎನ್‌ಯು ಹಿಂಸಾಚಾರ: ಭಯದಲ್ಲಿ ಕ್ಯಾಂಪಸ್ ತೊರೆದ ವಿದ್ಯಾರ್ಥಿನಿಯರು

    ದೀಪಿಕಾ ಪಡುಕೋಣೆ ಅವರು ಆಪ್ತರು ತಿಳಿಸಿರುವ ಪ್ರಕಾರ, ದೀಪಿಕಾ ವಿದ್ಯಾರ್ಥಿಗಳ ಜೊತೆ ಒಗ್ಗಟ್ಟು ಪ್ರದರ್ಶಿಸಲು ಜೆ ಎನ್ ಯುಗೆ ಹೋಗಿದ್ದರು ಎಂದು ಹೇಳಲಾಗಿದೆ.

    Deepika Padukone Visit To JNU Supports Student Protest

    ಇತ್ತೀಚಿಗಷ್ಟೆ ಜೆ ಎನ್ ಯು ಕ್ಯಾಂಪಸ್ ನಲ್ಲಿ ಮುಸುಕುದಾರಿಗಳು ವಿದ್ಯಾರ್ಥಿ ಹಾಗು ಶಿಕ್ಷಕರ ಮೇಲೆ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು ಕೂಡ ಹಲ್ಲೆಗೆ ಒಳಗಾಗಿದ್ದರು. ಈ ಘಟನೆಗೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ.

    ಬಿಜೆಪಿಯೇ ಹಿಂದೆ ನಿಂತು ಜೆಎನ್ ಯುನಲ್ಲಿ ಹಿಂಸಾಚಾರ ಮಾಡಿಸಿತಾ?

    ಇನ್ನು ದೀಪಿಕಾ ಪಡುಕೋಣೆ ಅವರು ಜೆ ಎನ್ ಯು ಕ್ಯಾಂಪಸ್ ಗೆ ಭೇಟಿ ನೀಡಿದ ಕಾರಣ, ಆಕೆಯ ಚಿತ್ರಗಳನ್ನು ನಿಷೇದ ಮಾಡಿ ಎಂದು ಕೆಲವರು ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜನವರಿ 10 ರಂದು ದೀಪಿಕಾ ಪಡುಕೋಣೆ ಅಭಿನಯದ ಚಪಾಕ್ ಸಿನಿಮಾ ಬಿಡುಗಡೆಯಾಗುತ್ತಿದೆ. ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ ವಾಲ್ ಅವರ ಜೀವನ ಆಧಾರಿತ ಚಿತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಮೇಘನಾ ಗುಲ್ಜಾರ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ.

    English summary
    Bollywood actress Deepika Padukone visit to JNU to express solidarity with students and teachers after Sunday's violence.
    Tuesday, January 7, 2020, 22:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X