»   » ದೀಪಿಕಾಗೆ ಇನ್ನೂ ಹಳೇ ಲವ್ವರ್ ದೇ ಚಿಂತೆ..!

ದೀಪಿಕಾಗೆ ಇನ್ನೂ ಹಳೇ ಲವ್ವರ್ ದೇ ಚಿಂತೆ..!

Posted By:
Subscribe to Filmibeat Kannada

''ರಣ್ಬೀರ್ ಕಪೂರ್ ನ ಮದುವೆಯಾಗಬೇಡಿ'' ಅಂತ ಕತ್ರೀನಾಗೆ ದೀಪಿಕಾ ಪಡುಕೋಣೆ ನೀಡಿದ ಸಲಹೆ ಸುದ್ದಿ ನಿನ್ನೆಯಷ್ಟೇ ಬಾಲಿವುಡ್ ನಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು. ಅದನ್ನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವೂ ಕೂಡ ಓದಿದ್ರಿ.

ಇದೀಗ ಅದೇ ಸುದ್ದಿ ಜೊತೆ ಗಾಸಿಪ್ ಪಂಡಿತರ ಹೊಟ್ಟೆ ತುಂಬುವ ಮತ್ತೊಂದು ಕಣ್ಣರಳಿಸುವ ಖಾಸ್ ಖಬರ್ ಬಂದಿದೆ ನೋಡಿ. ಕತ್ರೀನಾಗೆ ''ರಣ್ಬೀರ್ ನ ಮದುವೆಯಾಗಬೇಡಿ'' ಅಂತ ಹೇಳಿದ್ದ ದಿಪ್ಪಿ, ಅದರ ಹಿಂದಿನ ಉದ್ದೇಶವನ್ನೂ ಯಾವುದೇ ಅಳುಕಿಲ್ಲದೇ ಬಾಯಿಬಿಟ್ಟಿದ್ದಾರೆ.

Deepika Padukone wants to marry Ranbir Kapoor

''ನಾನು ಕತ್ರೀನಾ ಜಾಗದಲ್ಲಿದ್ದರೆ ಖಂಡಿತ ರಣ್ಬೀರ್ ಕಪೂರ್ ನ ಮದುವೆಯಾಗುತ್ತಿದೆ'' ಅಂತ್ಹೇಳಿ, ಎಲ್ಲರೂ ಬಾಯಿ ಮೇಲೆ ಬೆರಳಿಡುವ ಹಾಗೆ ಮಾಡಿದ್ದಾರೆ ದೀಪಿಕಾ ಪಡುಕೋಣೆ. ನಿನ್ನೆಯಷ್ಟೇ ಮಾಯಾನಗರಿ ಮುಂಬೈನಲ್ಲಿ ಅದ್ಧೂರಿಯಾಗಿ ನಡೆದ 'ಸ್ಟಾರ್ ಗಿಲ್ಡ್ ಅವಾರ್ಡ್ಸ್' ಸಮಾರಂಭದಲ್ಲಿ ದೀಪಿಕಾ ಈ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾಳೆ. [ಕತ್ರೀನಾ ಕೈಫ್ ಕಿವಿಕಚ್ಚಿದ ರಣ್ಬೀರ್ ಮಾಜಿ ಪ್ರೇಯಸಿ ದೀಪಿಕಾ]

ದೀಪಿಕಾರ ಈ ಎರಡು ಉಲ್ಟಾ ಹೇಳಿಕೆಗಳನ್ನ ಅಳೆದು ತೂಗಿ ಲೆಕ್ಕ ಹಾಕಿ ನೋಡಿದ್ರೆ, ದಿಪ್ಪಿ ಇನ್ನೂ ರಣ್ಬೀರ್ ಗುಂಗಿನಲ್ಲೇ ಇರುವ ಹಾಗಿದೆ ಅಂತಿದ್ದಾರೆ ಗಲ್ಲಿ ಗಾಸಿಪ್ ಗುರುಗಳು. ದಿಪ್ಪಿ ಮನಸ್ಸಲ್ಲಿ ಅದೇನಿದೆಯೋ, ಇಲ್ಲವೋ....ಆದ್ರೆ, ಇದನ್ನ ಕೇಳಿರುವ ರಣ್ವೀರ್ ಸಿಂಗ್ ಹೊಟ್ಟೆಗೆ ಮಾತ್ರ ಬೆಂಕಿ ಬಿದ್ದಿದೆ. (ಏಜೆನ್ಸೀಸ್)

English summary
Bollywood Actress Deepika Padukone has made a statement,''If i was in the place of Katrina Kaif, I would marry Ranbir Kapoor''. This incident happened at a Star Guild awards event in Mumbai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada