ಅಯ್ಯಯ್ಯೋ... ಒಂದು ಬಟ್ಟೆಗೆ ದೀಪಿಕಾ ಖರ್ಚು ಮಾಡಿರುವ ಬೆಲೆಯಲ್ಲಿ 30 ಗ್ರಾಂ ಚಿನ್ನ ಬರ್ತಿತ್ತು.!
Recommended Video

ಹೊಸ ಬಟ್ಟೆ ಖರೀದಿ ಮಾಡಬೇಕು ಅಂದ್ರೆ ನೀವೆಷ್ಟು ಖರ್ಚು ಮಾಡ್ತೀರಾ.? ಬ್ರ್ಯಾಂಡೆಡ್, ಡಿಸೈನರ್ ಡ್ರೆಸ್ ಬೇಕು ಅಂದ್ರೆ ಮಿನಿಮಂ ಐದು ಸಾವಿರ ಬೇಕೇ ಬೇಕು ಅಲ್ಲವೇ..? ಬೇಡ, ಹತ್ತು ಅಥವಾ ಇಪ್ಪತ್ತು ಸಾವಿರ ಅಂತಾನೇ ಇಟ್ಟುಕೊಳ್ಳಿ..!
ದೊಡ್ಡ ದೊಡ್ಡ ಸಮಾರಂಭ, ಪಾರ್ಟಿ-ಫಂಕ್ಷನ್ ಗಳಿಗೆ ಹೋಗಲು ಡಿಸೈನರ್ ಉಡುಪುಗಳನ್ನೇ ಎಲ್ಲರೂ ಬಯಸುತ್ತಾರೆ. ಸಾಮಾನ್ಯ ಜನರೇ ಹೀಗೆ ಅಂದ್ರೆ ಇನ್ನೂ ಸೆಲೆಬ್ರಿಟಿಗಳೇನು ಕಮ್ಮಿನಾ.?!
ಸದಾ ಫ್ಯಾಶನ್, ಟ್ರೆಂಡ್ ಫಾಲೋ ಮಾಡುವ ಸೆಲೆಬ್ರಿಟಿಗಳು ಮನೆಯಿಂದ ಹೊರಗೆ ಬರ್ತಾರೆ ಅಂದ್ರೆ ಸ್ಟೈಲ್ ಸ್ಟೇಟ್ಮೆಂಟ್ ಮೇನ್ಟೇನ್ ಮಾಡಬೇಕು. ಇದಕ್ಕಾಗಿ ಸಾವಿರಾರು ರೂಪಾಯಿಯನ್ನ ತಾರೆಯರು ಪ್ರತಿದಿನ ಖರ್ಚು ಮಾಡ್ತಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರವರನ್ನೇ ತೆಗೆದುಕೊಳ್ಳಿ... ಒಂದು ಬಾರಿ ಧರಿಸಿದ ಬಟ್ಟೆಯನ್ನ ಮತ್ತಿನ್ನೆಂದೂ ರಿಪೀಟ್ ಮಾಡದ ದೀಪಿಕಾ ಪಡುಕೋಣೆ ಒಂದು ಡ್ರೆಸ್ ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಯಾವುದು ಆ ಡ್ರೆಸ್ ಅಂದ್ರಾ.? ಫೋಟೋ ಸ್ಲೈಡ್ ಗಳಲ್ಲಿ ನೋಡಿರಿ....

ಈ ಡ್ರೆಸ್ ನೋಡಿ...
ನಟಿ ದೀಪಿಕಾ ಪಡುಕೋಣೆ ಧರಿಸಿರುವ ಈ ಡ್ರೆಸ್ ನೋಡಿ... ನೋಡಲು ಸಿಂಪಲ್ ಆಗಿರುವ ಈ ಸ್ಟ್ರೈಪ್ಡ್ ಶರ್ಟ್ ಡ್ರೆಸ್ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ ಕಣ್ರೀ.!

ಬ್ರ್ಯಾಂಡೆಡ್ ಉಡುಪು
ದೀಪಿಕಾ ಧರಿಸಿರುವ ಈ ಸ್ಟ್ರೈಪ್ಡ್ ಶರ್ಟ್ ಡ್ರೆಸ್ ಸ್ಪೇನ್ ನ ಲಕ್ಷುರಿ ಫ್ಯಾಶನ್ ಬ್ರ್ಯಾಂಡ್ ಲೋವಿ ಕಲೆಕ್ಷನ್ ನದ್ದು. ಅಷ್ಟಕ್ಕೂ, ಈ ಡ್ರೆಸ್ ನ ದೀಪಿಕಾ ತೊಟ್ಟಿದ್ದು ಸ್ನೇಹಿತರೊಂದಿಗೆ ಮುಂಬೈನ ಹೋಟೆಲ್ ವೊಂದರಲ್ಲಿ ಡಿನ್ನರ್ ಮಾಡಲು.!

ಸಿಂಪಲ್ ಆಗಿದ್ರೂ ಕಾಸ್ಟ್ಲಿ
32 ವರ್ಷ ವಯಸ್ಸಿನ ದೀಪಿಕಾ ಪಡುಕೋಣೆ ಸದಾ ಸಿಂಪಲ್ ಹಾಗೂ ಬ್ಯೂಟಿಫುಲ್ ಆಗಿ ಕಾಣಲು ಬಯಸುತ್ತಾರೆ. ದೀಪಿಕಾ ಧರಿಸುವ ಉಡುಪುಗಳು ಸಿಂಪಲ್ ಆಗಿ ಕಂಡರೂ ಸಿಕ್ಕಾಪಟ್ಟೆ ಕಾಸ್ಟ್ಲಿ ಅನ್ನೋದಕ್ಕೆ ಇದೇ ಡ್ರೆಸ್ ಸಾಕ್ಷಿ.

ಒಂದು ಲಕ್ಷಕ್ಕೆ ಏನೇನೆಲ್ಲಾ ಬಂದಿರೋದು.!
ಒಂದು ಡ್ರೆಸ್ ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ದೀಪಿಕಾ ಪಡುಕೋಣೆ ಕಂಡು ಜನ ನಿಬ್ಬೆರಗಾಗಿದ್ದಾರೆ. ಅದೇ ಒಂದು ಲಕ್ಷ ಇದ್ದಿದ್ರೆ, ಬಟ್ಟೆ ಬದಲು ಕನಿಷ್ಟ ಅಂದರೂ 30 ಗ್ರಾಂ ಚಿನ್ನ ಬರ್ತಿತ್ತು, ಕಷ್ಟಕಾಲದಲ್ಲಿ ಆಗಿರೋದು.. ಅನ್ನೋದು ಜನ ಸಾಮಾನ್ಯರ ಲೆಕ್ಕಾಚಾರ. ಎಷ್ಟೇ ಆಗಲಿ ಉಳ್ಳವರು ತಾನೇ ಶಿವಾಲಯ ಕಟ್ಟುವರು.!


Click it and Unblock the Notifications











