ಮತ್ತೆ ಒಂದೇ ಚಿತ್ರದಲ್ಲಿ ರಣ್ವೀರ್ - ದೀಪಿಕಾ ಪಡುಕೋಣೆ

ನಟ ರಣ್ವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ, ಮದುವೆಯ ಬಳಿಕ ಈ ಜೋಡಿಯ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಮೊದಲ ಸಿನಿಮಾ ಇದಾಗಿದೆ.

ರೀಲ್ ಜೋಡಿ ರಿಯಲ್ ಲೈಫ್ ಜೋಡಿಯಾಗಿದೆ. ಈಗ ಈ ರಿಯಲ್ ಲೈಫ್ ಜೊತೆ ಮತ್ತೆ ರೀಲ್ ನಲ್ಲಿ ಒಂದಾಗಿದೆ. ರಣ್ವೀರ್ ನಟನೆಯ '83' ಸಿನಿಮಾದಲ್ಲಿ ದೀಪಿಕಾ ಸಹ ನಟಿಸುತ್ತಿದ್ದಾರೆ.

1983 ಭಾರತ ಕ್ರಿಕೆಟ್ ತಂಡ ಮೊದಲ ವಿಶ್ವಕಪ್ ಗೆದ್ದ ವರ್ಷ. ಈಗ ಅದೇ ವಿಷಯವನ್ನು ಇಟ್ಟುಕೊಂಡು ಬಾಲಿವುಡ್ ನಲ್ಲಿ ಸಿನಿಮಾ ಮಾಡಲಾಗುತ್ತಿದೆ. ಭಾರತ ಕ್ರಿಕೆಟ್ ತಂಡದ ಅಂದಿನ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ನಟಿಸುತ್ತಿದ್ದಾರೆ.

deepika padukone will be playing lead role in ranveers 83 movie

'ಭಜರಂಗಿ ಭಾಯಿಜಾನ್' ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ಕಬೀರ್ ಖಾನ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

ದೀಪಿಕಾ ಚಿತ್ರಕ್ಕೆ ಆಯ್ಕೆ ಆದ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ರಣ್ವೀರ್ ''ನನ್ನ ಹೆಂಡತಿಯ ಪಾತ್ರ ಮಾಡಲು ನನ್ನ ಹೆಂಡತಿಗಿಂತ ಉತ್ತಮರು ಯಾರು'' ಎಂದು ಸಂತಸ ಹಂಚಿಕೊಂಡಿದ್ದಾರೆ.

deepika padukone will be playing lead role in ranveers 83 movie

ಈ ಹಿಂದೆ 'ರಾಮ್ ಲೀಲಾ' 'ಬಾಜಿರಾವ್ ಮಸ್ತಾನಿ' ಹಾಗೂ 'ಪದ್ಮಾವತಿ' ಸಿನಿಮಾಗಳಲ್ಲಿ ರಣ್ವೀರ್ ಹಾಗೂ ದೀಪಿಕಾ ಒಟ್ಟಿಗೆ ನಟಿಸಿದ್ದರು. ಅಂದಹಾಗೆ, '83' ಸಿನಿಮಾ ಮುಂದಿನ ವರ್ಷದ ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ.

More from Filmibeat

English summary
Actress Deepika Padukone will be playing lead role in Ranveer's Singh '83' movie. The movie is directed by Kabir Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X