ದೀಪಿಕಾ ಪಡುಕೋಣೆ ಮೇಲೆ ಆಸಿಡ್ ದಾಳಿ ಆಗುತ್ತಂತೆ.!
Recommended Video

'ಪದ್ಮಾವತ್' ಚಿತ್ರದ ನಂತರ ದೀಪಿಕಾ ಪಡುಕೋಣೆ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಶಾರೂಖ್ ಖಾನ್ ಅವರ 'ಜೀರೋ' ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವುದು ಬಿಟ್ಟರೇ ನಾಯಕಿಯಾಗಿ ಯಾವ ಸಿನಿಮಾನೂ ಆರಂಭಿಸಿಲ್ಲ.
ಇದೀಗ ವಿಭಿನ್ನ, ವಿಶೇಷ ಮತ್ತು ಸವಾಲಿನ ಪಾತ್ರವೊಂದನ್ನ ನಿರ್ವಹಿಸಲು ಬಾಲಿವುಡ್ ಬ್ಯೂಟಿ ದೀಪಿಕಾ ಸಿದ್ಧವಾಗಿದ್ದಾರೆ. ಹೌದು, ಆಸಿಡ್ ದಾಳಿಗೆ ಒಳಗಾಗಿದ್ದ ಹುಡುಗಿ ಪಾತ್ರದಲ್ಲಿ ದೀಪಿಕಾ ಬಣ್ಣ ಹಚ್ಚಲಿದ್ದಾರೆ. ನೈಜ ಘಟನೆಯಾಧರಿತ ಚಿತ್ರದಲ್ಲಿ ನಾಯಕಿಯಾಗಿರುವ ದೀಪಿಕಾ ಆಸಿಡ್ ದಾಳಿಗೆ ಒಳಗಾಗಿ ಸಾಧಿಸಿದ ಹುಡುಗಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
2005ರಲ್ಲಿ ಲಕ್ಷ್ಮಿ ಅಗರ್ ವಾಲ್ ಎಂಬಾಕೆಯ ಮೇಲೆ ಆಸಿಡ್ ದಾಳಿಯಾಗಿತ್ತು. ಮದುವೆಯಾಗು ಎಂದು ಪೀಡಿಸುತ್ತಿದ್ದ ವ್ಯಕ್ತಿಯನ್ನ ನಿರಾಕರಿಸಿದ್ದಕ್ಕೆ ಆಸಿಡ್ ಹಾಕಿದ್ದ. ನಂತರ ಜೀವನವನ್ನ ಸವಾಲಾಗಿ ಸ್ವೀಕರಿಸಿದ ಲಕ್ಷ್ಮಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಹಲವು ಟಿವಿ ಶೋ ನಿರೂಪಣೆ ಮಾಡಿದ್ದಾರೆ. ಇಂತಹ ಮಹಿಳೆಯ ಪಾತ್ರದಲ್ಲಿ ದಿಪೀಕಾ ಅಭಿನಯಿಸುತ್ತಿದ್ದಾರೆ.

ಆಲಿಯಾ ಭಟ್ ಅಭಿನಯದ 'ರಾಝೀ' ಚಿತ್ರ ನಿರ್ದೇಶನ ಮಾಡಿದ್ದ ಮೇಘನಾ ಗುಲ್ಜಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾವನ್ನ ಸ್ವತಃ ದಿಪೀಕಾ ನಿರ್ಮಾಣ ಮಾಡಲಿದ್ದಾರಂತೆ.
ಹಾಗಾಗಿ, ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ನಂತರ ದೀಪಿಕಾ ಕೂಡ ನಿರ್ಮಾಪಕಿ ಸಾಲಿಗೆ ಸೇರಿದ್ದಾರೆ. ಇದಕ್ಕೂ ಮುಂಚೆ ವಿಶಾಲ್ ಭಾರದ್ವಾಜ್ ನಿರ್ದೇಶನ ಮಾಡಬೇಕಿದ್ದ ಚಿತ್ರದಲ್ಲಿ ನಟ ಇರ್ಫಾನ್ ಖಾನ್ ಜೊತೆ ದಿಪೀಕಾ ನಟಿಬೇಕಿತ್ತು. ಆದ್ರೆ, ಅದು ವಿಳಂಬವಾಗಿತ್ತಿರುವ ಕಾರಣ ಅದಕ್ಕೂ ಮುಂಚೆಯೇ ಈ ಸಿನಿಮಾ ಟೇಕ್ ಆನ್ ಮಾಡಲಿದ್ದಾರೆ.

ಮತ್ತೊಂದೆಡೆ ನಟ ರಣ್ವೀರ್ ಸಿಂಗ್ ಜೊತೆ ದೀಪಿಕಾ ಸಪ್ತಪದಿ ತುಳಿಯಲಿದ್ದಾರೆ ಎಂಬು ಸುದ್ದಿ ಹರಿದಾಡುತ್ತಿದೆ. ಅದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.


Click it and Unblock the Notifications











