NCB ವಿಚಾರಣೆ ಬಳಿಕ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಮರಳಿದ ನಟಿ ದೀಪಿಕಾ: ಪ್ರಭಾಸ್ ಬಗ್ಗೆ ಹೇಳಿದ್ದೇನು?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾದಕ ವಸ್ತು ಜಾಲದ ವಿಚಾರವಾಗಿ ಇತ್ತೀಚಿಗೆ ಎನ್ ಸಿ ಬಿ ವಿಚಾರಣೆ ಎದುರಿಸಿದ್ದರು. ಡ್ರಗ್ಸ್ ಜಾಲದ ಬೆನ್ನತ್ತಿರುವ ಪೊಲೀಸರು ದೀಪಿಕಾ ವಾಟ್ಸಪ್ ಚಾಟ್ ಆಧರಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಮಾದಕ ವಸ್ತು ಜಾಲದ ತನಿಖೆಯಲ್ಲಿ ದೀಪಿಕಾ ಹೆಸರು ಕೇಳಿಬಂದಿರುವುದು ಅಭಿಮಾನಿಗಳಿಗೆ ಶಾಕ್ ನೀಡಿತ್ತು.

ಮಾದಕ ವಸ್ತು ದಂಧೆಯಲ್ಲಿ ದೀಪಿಕಾ ಹೆಸರು ಕೇಳಿಬರುತ್ತಿದ್ದಂತೆ ದೀಪಿಕಾ ಸೈಲೆಂಟ್ ಆಗಿದ್ದರು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅಲ್ಲದೆ ಸಾಮಾಜಿಕ ಜಾಲತಾಣದಿಂದನೂ ಮಾಯವಾಗಿದ್ದರು. ಲಾಕ್ ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದ ಎನ್ ಸಿ ಬಿ ವಿಚಾರಣೆ ಬಳಿಕ ನಾಪತ್ತೆಯಾಗಿದ್ದರು. ಇದೀಗ ಅನೇಕ ದಿನಗಳ ಬಳಿಕ ದೀಪಿಕಾ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿದ್ದಾರೆ. ಮುಂದೆ ಓದಿ..

ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ ಪೋಸ್ಟ್

ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ ಪೋಸ್ಟ್

ಎನ್ ಸಿ ಬಿ ವಿಚಾರಣೆ ಬಳಿಕ ದೀಪಿಕಾ ಮೊದಲ ಬಾರಿಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಟಾಲಿವುಡ್ ನಟ ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ನಟಿ ದೀಪಿಕಾ ಇನ್ಸ್ಟಾಗ್ರಾಮ್ ನಲ್ಲಿ ವಿಶ್ ಮಾಡಿ ಪೋಸ್ಟ್ ಹಾಕಿದ್ದಾರೆ. ಪ್ರಭಾಸ್ ಫೋಟೋ ಶೇರ್ ಮಾಡಿ, ಹುಟ್ಟುಹಬ್ಬದ ಸಂದೇಶ ರವಾನಿಸಿದ್ದಾರೆ.

ಪ್ರಭಾಸ್ ಗೆ ವಿಶ್ ಮಾಡಿದ ದೀಪಿಕಾ

ಪ್ರಭಾಸ್ ಗೆ ವಿಶ್ ಮಾಡಿದ ದೀಪಿಕಾ

'ಹುಟ್ಟುಹಬ್ಬದ ಶುಭಾಶಯಗಳು ಪ್ರಭಾಸ್. ನಿಮಗೆ ಯಾವಾಗಲು ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಬಯಸುತ್ತೇನೆ. ಉತ್ತಮ ವರ್ಷ ನಿಮ್ಮದಾಗಲಿ' ಎಂದು ಬರೆದುಕೊಂಡಿದ್ದಾರೆ. ಮೊದಲ ಬಾರಿಗೆ ದೀಪಿಕಾ ಪ್ರಭಾಸ್ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ. ದೀಪಿಕಾ ವಿಶ್ ಪ್ರಭಾಸ್ ಅಭಿಮಾನಿಗಳಿಗೆ ಸಂತಸಕ್ಕೆ ಕಾರಣವಾಗಿದೆ.

ಮೊದಲ ಬಾರಿಗೆ ಪ್ರಭಾಸ್ ಗೆ ದೀಪಿಕಾ ನಾಯಕಿ

ಮೊದಲ ಬಾರಿಗೆ ಪ್ರಭಾಸ್ ಗೆ ದೀಪಿಕಾ ನಾಯಕಿ

ಅಂದ್ಹಾಗೆ ದೀಪಿಕಾ ಮೊದಲ ಬಾರಿಗೆ ಪ್ರಭಾಸ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಹಾನಟಿ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಸಿನಿಮಾದಲ್ಲಿ ದೀಪಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಅಭಿನಯಿಸುತ್ತಿದ್ದಾರೆ. ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿರುವ ಪ್ರಭಾಸ್ ಮತ್ತು ದೀಪಿಕಾ ಅವರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಶಕುನ್ ಭಾತ್ರಾ ನಿರ್ದೇಶನದ ಸಿನಿಮಾದಲ್ಲಿ ದೀಪಿಕಾ

ಶಕುನ್ ಭಾತ್ರಾ ನಿರ್ದೇಶನದ ಸಿನಿಮಾದಲ್ಲಿ ದೀಪಿಕಾ

ದೀಪಿಕಾ ಪಡುಕೋಣೆ ಸದ್ಯ ಶಕುನ್ ಭಾತ್ರಾ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗೋವಾದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಸಿದ್ಧಾರ್ಥ್ ಚತುರ್ವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Actress Deepika Padukone posts on social media first time after NCB enquiry; shares birthday wish for Prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X