ಅಪ್ಪನ ಜೀವನ ತೆರೆಗೆ ತರಲು ದೀಪಿಕಾ ಕಾರ್ಯೋನ್ಮುಖ

ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ, ಕನ್ನಡದ ಸಿನಿಮಾದಿಂದ ನಟನೆ ಆರಂಭಿಸಿ ಹಾಲಿವುಡ್ ವರೆಗೂ ಏರಿದ ಎತ್ತರ ಸಾಮಾನ್ಯದ್ದಲ್ಲ.

ಆದರೆ ತಂದೆ ಮಾಡಿರುವ ಸಾಧನೆ ಮುಂದೆ ದೀಪಿಕಾರ ಸಾಧನೆ ಮಂಕೆನಿಸುತ್ತದೆ. ಹಾಗಾಗಿಯೇ ನಟಿ ದೀಪಿಕಾ ಪಡುಕೋಣೆ ಇದೀಗ ತಮ್ಮ ತಂದೆಯ ಜೀವನದ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿರುವ ದೀಪಿಕಾ ಕೆಲವೇ ದಿನಗಳಲ್ಲಿ ಇತರೆ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ.

ದೀಪಿಕಾ ಪಡುಕೋಣೆಯ ತಂದೆ ಪ್ರಕಾಶ್ ಪಡುಕೋಣೆ ಈ ರಾಷ್ಟ್ರದಲ್ಲಿ ಬ್ಯಾಡ್‌ಮಿಂಟನ್ ಜನಪ್ರಿಯಗೊಳ್ಳಲು ನೀಡಿರುವ ಕೊಡುಗೆ ಅಪಾರ. ಭಾರತದ ಮೊದಲ ಬ್ಯಾಡ್‌ಮಿಂಟನ್ ವಿಶ್ವಚಾಂಪಿಯನ್ ಆಗಿರುವ ಪ್ರಕಾಶ್ ಪಡುಕೋಣೆ ಹಲವು ಅಂತರಾಷ್ಟ್ರೀಯ ಟೈಟಲ್‌ಗಳನ್ನು ಬ್ಯಾಡ್‌ಮಿಂಟನ್‌ನಲ್ಲಿ ಗೆದ್ದಿದ್ದಾರೆ.

Deepika Padukone Working On Her Father Prakash Padukones Bio Pic

1978ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬ್ಯಾಡ್‌ಮಿಂಟನ್‌ನಲ್ಲಿ ಚಿನ್ನ ಗೆದ್ದ ಪ್ರಕಾಶ್ ಪಡುಕೋಣೆ, ಬಳಿಕ 1981 ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದರು. ವಿಶ್ವ ಚಾಂಪಿಯನ್‌ಶಿಫ್‌ನಲ್ಲಿ ಕಂಚು ಸೇರಿದಂತೆ ವಿಶ್ವದ ಹಲವೆಡೆ ನಡೆದ ಹಲವು ಟೂರ್ನಮೆಂಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿ ಗೆದ್ದಿದ್ದಾರೆ. ಪ್ರಕಾಶ್ ಪಡುಕೋಣೆ ವಿಶ್ವಕಪ್ ಗೆದ್ದ ಬಳಿಕವೇ ಭಾರತದಲ್ಲಿ ಬ್ಯಾಡ್‌ಮಿಂಟನ್ ಹೆಚ್ಚು ಜನಪ್ರಿಯಗೊಂಡಿತು.

ಸಿಎಸ್ ಬರೂಚಾರ ಯೂಟ್ಯೂಬ್ ಚಾನೆಲ್‌ಗಾಗಿ ನೀಡಿದ ಸಂದರ್ಶನದಲ್ಲಿ ತಂದೆಯ ಸಿನಿಮಾ ಬಗ್ಗೆ ಮಾತನಾಡಿರುವ ದೀಪಿಕಾ ಪಡುಕೋಣೆ, ''1983 ರಲ್ಲಿ ಭಾರತ ವಿಶ್ವಕಪ್ ಗೆಲ್ಲುವ ಮೊದಲೇ ನನ್ನ ತಂದೆ ವಿಶ್ವಚಾಂಪಿಯನ್‌ಶಿಪ್ ಗೆದ್ದು ಭಾರತಕ್ಕೆ ಅಂತರಾಷ್ಟ್ರೀಯ ಗೌರವ ತಂದುಕೊಟ್ಟಿದ್ದರು. ತಂದೆಯ ಸಿನಿಮಾ ಮಾಡಲು ನಾನು ಯೋಚಿಸುತ್ತಿದ್ದೇನೆ'' ಎಂದಿದ್ದಾರೆ.

ಅದೇ ಸಂದರ್ಶನದಲ್ಲಿ ತಮ್ಮ ತಂದೆ ಬ್ಯಾಡ್‌ಮಿಂಟನ್ ಆಡಲು ಪಟ್ಟ ಕಷ್ಟಗಳ ಬಗ್ಗೆ ಮಾತನಾಡಿರುವ ದೀಪಿಕಾ, ''ನಮ್ಮ ತಂದೆ ಬ್ಯಾಡ್‌ಮಿಂಟನ್ ಆಡುವಾಗ ಯಾವುದೇ ಸವಲತ್ತುಗಳು ಇರಲಿಲ್ಲ. ಹಣ ಸಹ ನೀಡಲಾಗುತ್ತಿರಲಿಲ್ಲ. ಕಷ್ಟಪಟ್ಟು ಹಣ ಹೊಂದಿಸಿಕೊಂಡು ಅವರು ಆಟ ಆಡಿ ದೇಶಕ್ಕೆ ಹೆಸರು ತಂದುಕೊಟ್ಟರು'' ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

'ಕಾ ಪ್ರೊಡಕ್ಷನ್ಸ್' ಹೆಸರಿನ ನಿರ್ಮಾಣ ಸಂಸ್ಥೆಯನ್ನು ದೀಪಿಕಾ ಪಡುಕೋಣೆ ಹೊಂದಿದ್ದು ಅದರ ಮೂಲಕ ಈಗಾಗಲೇ ಆಸಿಡ್ ದಾಳಿ ಸಂತ್ರಸ್ತೆಯ ಕತೆಯನ್ನು ಸಿನಿಮಾ ಮಾಡಿದ್ದಾರೆ. ಇದೀಗ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ತಂದೆಯ ಜೀವನವನ್ನು ಸಿನಿಮಾ ಆಗಿಸುವ ಯತ್ನದಲ್ಲಿದ್ದಾರೆ.

ದೀಪಿಕಾ ಪಡುಕೋಣೆಯ ಕುಟುಂಬ ಈಗಲೂ ಬೆಂಗಳೂರಿನಲ್ಲಿಯೇ ವಾಸಿಸುತ್ತದೆ. ಪ್ರಕಾಶ್ ಪಡುಕೋಣೆ, ದೀಪಿಕಾರ ತಾಯಿ ಹಾಗೂ ಸಹೋದರಿ ಬೆಂಗಳೂರಿನ ಇಂದಿರಾ ನಗರದಲ್ಲಿ ವಾಸಿಸುತ್ತಾರೆ.

ಸಿನಿಮಾ ವಿಷಯಕ್ಕೆ ಮರಳುವುದಾದರೆ ದೀಪಿಕಾ ಪಡುಕೋಣೆ ನಟಿಸಿರುವ 'ಗೆಹ್ರಾಹಿಯಾ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಶಾರುಖ್ ಜೊತೆ ನಟಿಸಿರುವ 'ಪಠಾಣ್' ಬಿಡುಗಡೆಗೆ ತಯಾರಾಗಿದೆ. ಹೃತಿಕ್ ಜೊತೆ 'ಫೈಟರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ಜೊತೆ ಹೊಸದೊಂದು ತೆಲುಗು ಸಿನಿಮಾದಲ್ಲಿ ನಟಿಸಲು ಸಹಿ ಹಾಕಿದ್ದಾರೆ. ಜೊತೆಗೆ ಇಂಗ್ಲಿಷ್ ಸಿನಿಮಾದ ರೀಮೇಕ್ 'ದಿ ಇಂಟರ್ನ್' ಸಿನಿಮಾದಲ್ಲಿಯೂ ದೀಪಿಕಾ ನಟಿಸಲಿದ್ದಾರೆ.

More from Filmibeat

English summary
Actress Deepika Padukone working on her father Prakash Padukone's bio pic. She said she is planing the project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X