ಸಂಸ್ಕೃತ ಶ್ಲೋಕ ಹೊಂದಿದ್ದ ದೀಪಿಕಾ ಮದುವೆ ಲೆಹಂಗಾದ ಬೆಲೆ ಗೊತ್ತಾದರೆ, ಕಣ್ಣರಳಿಸುತ್ತೀರಾ.!
Recommended Video

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್ವೀರ್ ಸಿಂಗ್ ಹೊಸ ಜೀವನ ಆರಂಭಿಸಿದ್ದಾರೆ. ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಮತ್ತು 15 ರಂದು ದೀಪಿಕಾ-ರಣ್ವೀರ್ ವಿವಾಹ ಮಹೋತ್ಸವ ನಡೆಯಿತು.
ಕೊಂಕಣಿ-ಬ್ರಾಹ್ಮಣ ಮತ್ತು ಸಿಂಧಿ ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಕಾಲಿಟ್ಟರು. ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಈ ಮದುವೆಗೆ ಸಾಕ್ಷಿ ಆದರು.
ಸಿಂಧಿ ಸಂಪ್ರದಾಯದಂತೆ ನಡೆದ ವಿವಾಹದಲ್ಲಿ ವಧು ದೀಪಿಕಾ ಪಡುಕೋಣೆ ಕೆಂಪು ಬಣ್ಣದ ಲೆಹಂಗಾ ಧರಿಸಿದ್ದರು. ಸಬ್ಯಸಾಚಿ ಮುಖರ್ಜಿ ಡಿಸೈನ್ ಮಾಡಿರುವ ಸಂಸ್ಕೃತ ಶ್ಲೋಕ ಹೊಂದಿರುವ ಲೆಹಂಗಾದ ಬೆಲೆ ಕೇಳಿದರೆ ನೀವು ಕಣ್ಣರಳಿಸುವುದು ಖಚಿತ. ಮುಂದೆ ಓದಿರಿ...

ಬೆಲೆ ಎಷ್ಟು ಗೊತ್ತಾ.?
ಸಿಂಧಿ ಸಂಪ್ರದಾಯದಂತೆ ನಡೆದ ಆನಂದ್ ಕರಜ್ ಶಾಸ್ತ್ರಕ್ಕಾಗಿ ವಧು ದೀಪಿಕಾ ಪಡುಕೋಣೆ ಕೆಂಪು ಬಣ್ಣದ ಲೆಹಂಗಾ ಧರಿಸಿದ್ದರು. ಖ್ಯಾತ ಡಿಸೈನರ್ ಸಭ್ಯಸಾಚಿ ಮುಖರ್ಜಿ ಡಿಸೈನ್ ಮಾಡಿರುವ ಈ ಲೆಹಂಗಾದ ಬೆಲೆ 8.95 ಲಕ್ಷ ರೂಪಾಯಿ.!

ಸದಾ ಸೌಭಾಗ್ಯವತಿ ಭವ
ಕೆಂಪು ಬಣ್ಣದ ಲೆಹಂಗಾ ಮೇಲೆ ಗೋಲ್ಡನ್ ಎಂಬ್ರಾಯಿಡರಿ ಮಾಡಲಾಗಿದೆ. ದುಪ್ಪಟದ ತುದಿಯಲ್ಲಿ ಸಂಸ್ಕೃತ ಶ್ಲೋಕ 'ಸದಾ ಸೌಭಾಗ್ಯವತಿ ಭವ' ಎಂದೂ ಚಿನ್ನದ ಎಳೆಗಳಿಂದ ಬರೆಯಲಾಗಿದೆ.

ಕೊಂಕಣಿ ಸ್ಟೈಲ್ ನಲ್ಲಿ ದೀಪಿಕಾ ಕಂಗೊಳಿಸಿದ್ದು ಹೀಗೆ...
ಕೊಂಕಣಿ-ಬ್ರಾಹ್ಮಣ ಸಂಪ್ರದಾಯದಂತೆ ನಡೆದ ವಿವಾಹದಲ್ಲಿ ನಟಿ ದೀಪಿಕಾ ಪಡುಕೋಣೆ ಕೆಂಪು ಮತ್ತು ಗೋಲ್ಡನ್ ಬಣ್ಣ ಮಿಶ್ರಿತ ರೇಶ್ಮೆ ಸೀರೆ ತೊಟ್ಟಿದ್ದರು.

ರಿಸೆಪ್ಷನ್ ಯಾವಾಗ.?
ಸದ್ಯ ಮದುವೆ ನಂತರದ ಶಾಸ್ತ್ರದಲ್ಲಿ ವಧು ದೀಪಿಕಾ ಪಡುಕೋಣೆ ಮತ್ತು ವರ ರಣ್ವೀರ್ ಸಿಂಗ್ ತೊಡಗಿದ್ದು, ನವೆಂಬರ್ 21 ರಂದು ಬೆಂಗಳೂರಿನಲ್ಲಿ ಮತ್ತು ನವೆಂಬರ್ 28 ರಂದು ಮುಂಬೈನ ಪ್ರತಿಷ್ಟಿತ ಹೋಟೆಲ್ ನಲ್ಲಿ ಆರತಕ್ಷತೆ ನಡೆಯಲಿದೆ.


Click it and Unblock the Notifications











