»   » ದೀಪಿಕಾ ಪಡುಕೋಣೆಯ ಮಾಜಿ ಪ್ರಿಯಕರ ಬಾಲಿವುಡ್ ಗೆ ಎಂಟ್ರಿ.!

ದೀಪಿಕಾ ಪಡುಕೋಣೆಯ ಮಾಜಿ ಪ್ರಿಯಕರ ಬಾಲಿವುಡ್ ಗೆ ಎಂಟ್ರಿ.!

Posted By:
Subscribe to Filmibeat Kannada

ಬಾಲಿವುಡ್ ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ 'ಪದ್ಮಾವತಿ' ಚಿತ್ರದಲ್ಲಿ ಬಿ.ಜಿ ಇದ್ದಾರೆ. ಇದೀಗ, ದೀಪಿಕಾ ಪಡುಕೋಣೆ ಅವರ ಮಾಜಿ ಪ್ರಿಯಕರ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ದೀಪಿಕಾ ಅವರ ಮಾಜಿ ಪ್ರಿಯಕರ ಎಂದಾಕ್ಷಣ ಎಲ್ಲರಿಗೂ ರಣ್ವೀರ್ ಸಿಂಗ್ ಮತ್ತು ರಣ್ಬೀರ್ ಕಪೂರ್ ನೆನಪಾಗ್ತಾರೆ. ಆದ್ರೆ, ಇವರಿಬ್ಬರ ಮಧ್ಯೆ ಮತ್ತೊಬ್ಬ ಬಾಯ್ ಫ್ರೆಂಡ್ ದೀಪಿಕಾಗೆ ಇದ್ದರು. ಆ ಕಲಾವಿದ ಈಗ ಬಿಗ್ ಇಂಡಸ್ಟ್ರಿಗೆ ಪರಿಚಯವಾಗ್ತಿದ್ದಾರೆ.

ಕನ್ನಡ ಚಿತ್ರವನ್ನು ಮರೆತ ದೀಪಿಕಾಗೆ ಸರಿಯಾಗಿ ಬುದ್ದಿ ಕಲಿಸಿದ ಸಿನಿಪ್ರಿಯರು!

Deepika's ex boyfriend Nihaar Pandya to debut Bollywood

ಹೌದು, ದೀಪಿಕಾ ಪಡುಕೋಣೆಯ ಮಾಜಿ ಪ್ರಿಯಕರನಾಗಿದ್ದ ನಿಹಾರ್ ಪಾಂಡ್ಯ ಈಗ ಹಿಂದಿ ಸಿನಿಲೋಕಕ್ಕೆ ಎಂಟ್ರಿ ಕೊಡ್ತಿದ್ದು, ಕಂಗನಾ ರನೌತ್ ಅಭಿನಯಿಸುತ್ತಿರುವ 'ಮಣಿಕರ್ಣಿಕಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

'ಮಣಿಕರ್ಣಿಕಾ' ಚಿತ್ರ ಬ್ರಿಟಿಷರ ವಿರುದ್ಧ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರ ಜೀವನಾಧರಿತ ಚಿತ್ರವಾಗಿದ್ದು, ಈ ಚಿತ್ರದ ದ್ವಿತೀಯಾರ್ಧದಲ್ಲಿ ನಿಹಾರ್ ಪಾಂಡ್ಯ ಅವರ ಪಾತ್ರ ಮೂಡಿಬರಲಿದೆ.

ಬಾಲಿವುಡ್ ಚಿತ್ರಕ್ಕೆ ಕೊಡುವ ಗೌರವವನ್ನ ಕನ್ನಡ ಚಿತ್ರಕ್ಕೆ ನೀಡದ ದೀಪಿಕಾ.!

Deepika's ex boyfriend Nihaar Pandya to debut Bollywood

ಈ ಚಿತ್ರಕ್ಕಾಗಿ ನಿಹಾರ್ ಪಾಂಡ್ಯ ಸಖತ್ ತಯಾರಿ ಮಾಡಿಕೊಳ್ಳುತ್ತಿದ್ದು, ಈ ಚಿತ್ರವನ್ನ ಕೃಷ್ಣ ಜಗರ್ಲಾಡಿ ನಿರ್ದೇಶನ ಮಾಡುತ್ತಿದ್ದಾರೆ.

English summary
Deepika's ex-boyfriend Nihaar Pandya to debut with Kangana's Manikarnika. 'ಮಣಿಕರ್ಣಿಕಾ' ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಅವರ ಮಾಜಿ ಪ್ರಿಯಕರ ಬಾಲಿವುಡ್ ಗೆ ಪರಿಚಯವಾಗ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X