»   » ದೀಪಿಕಾ ಪಡುಕೋಣೆ ಹುಟ್ಟುಹಬ್ಬದಂದೇ ಎಂಗೇಜ್ ಮೆಂಟ್.!

ದೀಪಿಕಾ ಪಡುಕೋಣೆ ಹುಟ್ಟುಹಬ್ಬದಂದೇ ಎಂಗೇಜ್ ಮೆಂಟ್.!

Posted By:
Subscribe to Filmibeat Kannada

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಮದುವೆ ವಿಚಾರ ಸಿನಿಲೋಕದಲ್ಲಿ ಆಗಾಗ ಚರ್ಚೆಯಾಗುತ್ತಲೇ ಇದೆ. ಬಾಲಿವುಡ್ ಖ್ಯಾತ ನಟನ ಜೊತೆ ಪ್ರೀತಿಯಲ್ಲಿರುವ ದೀಪಿಕಾ, ಅವರ ಜೊತೆಯಲ್ಲೇ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿತ್ತು. ನಂತರ ದೀಪಿಕಾ ತಮ್ಮ ಬಾಳ ಸಂಗಾತಿಯನ್ನ ಹುಡುಕಲು ತಂದೆಯವರಿಗೆ ಜವಾಬ್ದಾರಿ ವಹಿಸಿದ್ದಾರೆ ಎಂದು ಹೇಳಲಾಗಿತ್ತು.

ಇದೀಗ, ದೀಪಿಕಾ ಅವರ ಮದುವೆ ಬಗ್ಗೆ ಹಾಟ್ ಸುದ್ದಿಯೊಂದು ಹರಿದಾಡುತ್ತಿದೆ. ಅದೇನಪ್ಪಾ ಅಂದ್ರೆ, ಬಾಲಿವುಡ್ ಪದ್ಮಾವತಿಯ ಬರ್ತಡೇಯ ದಿನ ತಮ್ಮ ಬಾಯ್ ಫ್ರೆಂಡ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರಂತೆ.

ಅನುಷ್ಕಾ-ವಿರಾಟ್ ಜೋಡಿಗೆ ಉಡುಗೊರೆ ಕಳುಹಿಸಿದ ಲವ್ ಬರ್ಡ್ಸ್

Deepika to be engaged with ranveer singh on her birthday

ಹೌದು, ಜನವರಿ 5 ರಂದು ದೀಪಿಕಾ ಅವರ 32ನೇ ಹುಟ್ಟುಹಬ್ಬ. ಅದೇ ದಿನ ತಮ್ಮ ಗೆಳೆಯನ ಜೊತೆ ಉಂಗುರ ಬದಲಿಸಿಕೊಳ್ಳಲು ನಿರ್ಧರಿಸಿದ್ದಾರಂತೆ. ಅರೇ ದೀಪಿಕಾ ಬಾಯ್ ಫ್ರೆಂಡ್ ಯಾರು ಅಂತ ಇನ್ನು ಯೋಚನೆ ಮಾಡ್ತಿದ್ದಾರ? ಬಾಲಿವುಡ್ ನಟ ರಣ್ವೀರ್ ಸಿಂಗ್.

ಈಗಾಗಲೇ ದೀಪಿಕಾ ಮತ್ತು ರಣ್ವೀರ್ ಸಿಂಗ್ ಇಬ್ಬರು ಶ್ರೀಲಂಕಾಗೆ ಹಾರಿದ್ದಾರೆ. ಜಾಹೀರಾತು ಶೂಟಿಂಗ್ ಗಾಗಿ ಶ್ರೀಲಂಕಾಗೆ ಹೋಗಿದ್ದ ಈ ಜೋಡಿ ಹೊಸವರ್ಷವನ್ನ ಅಲ್ಲೇ ಸ್ವಾಗತಿಸಿದ್ದರು. ಈಗ ಹುಟ್ಟುಹಬ್ಬವನ್ನ ಕೂಡ ಒಟ್ಟಿಗೆ ಆಚರಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ.

Deepika to be engaged with ranveer singh on her birthday

ಈಗಾಗಲೇ ದೀಪಿಕಾ ಕುಟುಂಬದವರು ರಣ್ವೀರ್ ಸಿಂಗ್ ಕುಟುಂಬದ ಜೊತೆ ಮಾತುಕತೆ ಕೂಡ ನಡೆಸಿದ್ದಾರಂತೆ. ಆದಷ್ಟೂ ಬೇಗ ಈ ಜೋಡಿಗಳು ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಇವರಿಬ್ಬರ ನಿಶ್ಚಿತಾರ್ಥ ಅಥವಾ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

English summary
Deepika padukone would be engaged on her birthday. and Deepika to celebrate her birthday with alleged boyfriend Ranveer in Sri Lanka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X