»   » ಶ್ರದ್ಧಾ ಕಪೂರ್ ಮಾಡಬೇಕಿದ್ದ ಚಿತ್ರಕ್ಕೆ ದೀಪಿಕಾ ನಾಯಕಿ

ಶ್ರದ್ಧಾ ಕಪೂರ್ ಮಾಡಬೇಕಿದ್ದ ಚಿತ್ರಕ್ಕೆ ದೀಪಿಕಾ ನಾಯಕಿ

Posted By:
Subscribe to Filmibeat Kannada

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಬಯೋಪಿಕ್ ಚಿತ್ರದಲ್ಲಿ ನಟಿ ಶ್ರದ್ಧಾ ಕಪೂರ್ ನಟಿಸಬೇಕಿತ್ತು. ಆದ್ರೀಗ, ಶ್ರದ್ಧಾ ಬದಲು ಈ ಅವಕಾಶ ದೀಪಿಕಾ ಪಾಲಾಗಿದೆ.

ಸೈನಾ ಪಾತ್ರವನ್ನ ಶ್ರದ್ಧಾ ಮಾಡುವುದು ಬಹುತೇಕ ಖಚಿತವಾಗಿತ್ತು. ಅದಕ್ಕಾಗಿ ಶ್ರದ್ಧಾ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಸೈನಾ ಅವರ ಬಾಡಿ ಲಾಂಗ್ವೆಜ್, ಅವರ ಮ್ಯಾನರಿಸಂ ಬಗ್ಗೆ ಅಭ್ಯಾಸ ಮಾಡಿದ್ದರು. ಸ್ವತಃ ಸೈನಾ ಅವರ ಬಳಿ ಶ್ರದ್ಧಾ ಟ್ರೈನಿಂಗ್ ಪಡೆದುಕೊಂಡಿದ್ದರು. ಇದೀಗ, ಶ್ರದ್ಧಾ ಬದಲು ಡಿಪ್ಪಿಯನ್ನ ಕರೆತರಲಾಗಿದೆ ಎಂಬ ಶಾಕಿಂಗ್ ನ್ಯೂಸ್ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಶ್ರದ್ಧಾ ಅಭಿನಯದ ಎರಡು ಸಿನಿಮಾಗಳು ಕಳೆದ ವರ್ಷ ಬಿಡುಗಡೆಯಾಗಿತ್ತು. ಎರಡು ಚಿತ್ರಗಳು ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಕಂಡಿರಲಿಲ್ಲ. ಹೀಗಾಗಿ, ನಿರ್ಮಾಪಕರು ಶ್ರದ್ದಾ ಅವರನ್ನ ನಂಬಿ ಹಣ ಹಾಕಲು ಹಿಂದೇಟು ಹಾಕುತ್ತಿದ್ದಾರಂತೆ. ಅದೇ ಜಾಗಕ್ಕೆ ದೀಪಿಕಾ ಅವರನ್ನ ಕರೆತಂದ್ರೆ ಅದರಿಂದ ಆಗುವ ಲಾಭಗಳನ್ನ ಕೂಡ ನಿರ್ಮಾಪಕರು ಲೆಕ್ಕಾಚಾರ ಹಾಕಿದ್ದಾರೆ.

ಹುಚ್ಚು ಅಭಿಮಾನಿಯ ಪ್ರೀತಿಯಲ್ಲಿ ಬಿದ್ದ ದೀಪಿಕಾ ಪಡುಕೋಣೆ

Deepika to replace Shraddha Kapoor in Saina Nehwal's biopic

ಹೇಳಿ ಕೇಳಿ, ದೀಪಿಕಾ ಭಾರತದ ಮಾಜಿ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಅವರ ಮಗಳು. ದೀಪಿಕಾ ಚೆನ್ನಾಗಿ ಶಟಲ್ ಗೇಮ್ ಕೂಡ ಆಡಬಲ್ಲರು. ಜೊತೆಗೆ ದೀಪಿಕಾಗೆ ಸ್ಟಾರ್ ಪಟ್ಟ ಬೇರೆ ಇದೆ. ಈ ಎಲ್ಲ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಈಗ ನಾಯಕಿಯನ್ನ ಬದಲಾಯಿಸಲು ಚಿಂತಿಸಿದ್ದಾರಂತೆ.

Deepika to replace Shraddha Kapoor in Saina Nehwal's biopic

ಸದ್ಯ, ದೀಪಿಕಾ ಪಡುಕೋಣೆ ಪದ್ಮಾವತ್ ಚಿತ್ರದ ಬಿಡಗಡೆಯ ನಿರೀಕ್ಷೆಯಲ್ಲಿದ್ದಾರೆ. ಅದಾದ ನಂತರ ವಿಶಾಲ್ ಭಾರಾದ್ವಜ್ ಸಿನಿಮಾದಲ್ಲಿ ನಟಿಸಲಿದ್ದಾರೆ. ನಂತರ ಸೈನಾ ನೆಹ್ವಾಲ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಮೊಲ್ ಗುಪ್ತೆ ಈ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ಭೂಷಣ್ ಕುಮಾರ್ ಬಂಡವಾಳ ಹಾಕಲಿದ್ದಾರೆ.

English summary
While Shraddha Kapoor was believed to have bagged the lead role in Saina Nehwal's biopic, reports suggest that she might be replaced with Deepika Padukone as the producers look to bring in more star power.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X