48ನೇ ವಯಸ್ಸಿನಲ್ಲಿ ಮೂರನೇ ಮದ್ವೆಗೆ ರೆಡಿಯಾದ ಖ್ಯಾತ ನಟಿ..!

ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಕೆಲವು ಜೋಡಿಯನ್ನು ನೋಡಿದ ಕೂಡಲೇ ಇಂತಹ ಜೋಡಿ ನಮ್ಮದಾಗಿರ ಬೇಕು ಎನ್ನುವ ಭಾವನೆಯು ಕೆಲವರಲ್ಲಿ ಮೂಡುತ್ತೆ. ಆದರೆ ಎಲ್ಲರಿಗೂ ಇಂತಹ ಭಾಗ್ಯ ಸಿಗುವುದಿಲ್ಲ. ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿ ಮಾಡಿದರು, ಗೌರವಿಸಿದರೂ ಕೂಡ ಮದುವೆಯ ನಂತರ ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ.

ಇದಕ್ಕೆ ಕಾರಣ ಪ್ರತಿಯೊಬ್ಬರ ಮನಸಿನಲ್ಲಿಯೂ ವೈವಾಹಿಕ ಜೀವನದ ಬಗ್ಗೆ ವಿಭಿನ್ನವಾದ ಸಿದ್ದ ಮಾದರಿಯ ಟೆಂಪ್ಲೇಟ್ ಕೂತಿರುವುದು.ಹೀಗಾಗಿ ವೈವಾಹಿಕ ಸಂಬಂಧಗಳ ತಂತಿಗಳು ಬಹಳ ಸೂಕ್ಷ್ಮ, ನಿರ್ವಹಿಸುವುದು ತುಂಬಾ ಕಷ್ಟ ಎಂದುಕೊಂಡು ಅನೇಕರು ಸಂಬಂಧಗಳನ್ನು ಕಡೆದುಕೊಳ್ಳುತ್ತಾರೆ. ವಿಚ್ಛೇದನ ಪಡೆದು ಅವರ ಅವರ ಬದುಕು ಬದುಕಲು ಶುರು ಮಾಡುತ್ತಾರೆ. ಉದಾಹರಣೆಗೆ ದೀಪ್ಶಿಖಾ { ದೀಪ್‌ಶಿಖಾ } ನಾಗ್ಪಾಲ್.

Deepshikha Nagpal Says There s No Shame in Marrying Three Times After Two Failed Marriages

ಹೌದು, ದೀಪ್ಶಿಖಾ ನಾಗ್ಪಾಲ್ ಒಂದು ಕಾಲದ ಬಾಲಿವುಡ್ ಚೆಲುವೆ. ಶಾರುಖ್ ಖಾನ್ ಅಭಿನಯದ ಕೊಯ್ಲಾ.. ಬಾದ್‌ಶಾ ಮತ್ತು ಸಂಜಯ್ ಕಪೂರ್ ಅಭಿನಯದ ಸಿರ್ಫ್ ತುಮ್ ಚಿತ್ರಗಳಲ್ಲಿ ಗಮನ ಸೆಳೆದಿದ್ದವರು ಇವರು. ಇಷ್ಟೇ ಅಲ್ಲ ಕಿರುತೆರೆಯ ಪ್ರೇಕ್ಷಕರಿಗೆ ಕೂಡ ದೀಪ್ಶಿಖಾ ತುಂಬಾನೇ ಚಿರಪರಿಚಿತ.

ಇಂಥಾ ದೀಪ್ಶಿಖಾ ನಾಗ್ಪಾಲ್ 1997ರ ಆಸು ಪಾಸು ಜೀತ್ ಉಪೇಂದ್ರ ಅವರನ್ನು ಮದುವೆಯಾಗಿದ್ದರು. ಆದರೆ 2007ರಲ್ಲಿ ಇವರ ದಾಂಪತ್ಯ ಮುರಿದು ಬಿತ್ತು. ಇಬ್ಬರ ಪ್ರೇಮ ಸಂಕೇತವಾಗಿ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

ಜೀತ್ ಉಪೇಂದ್ರ ಅವರಿಂದ ದೂರವಾದ ನಂತರ ದೀಪ್ಶಿಖಾ ನಾಗ್ಪಾಲ್ 2012ರಲ್ಲಿ ಕೈಶವ್ ಅರೋರಾ ಅವರನ್ನು ಮದುವೆಯಾದರು. ಇಂಧೋರ್ ಮೂಲದ ಉದ್ಯಮಿಯಾದ ಕೈಶವ್ ಅರೋರಾ ಇದೇ ದೀಪ್ಶಿಖಾ ನಾಗ್ಪಾಲ್ ನಿರ್ದೇಶನದ ಚೊಚ್ಚಲ ಚಿತ್ರ 'ಯೇ ದೂರಿಯಾ' ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದ ಸಂದರ್ಭದಲ್ಲಿಯೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ ಈ ಪ್ರೀತಿ ನಾಲ್ಕು ವರ್ಷ ಕೂಡ ಉಳಿಯಲಿಲ್ಲ. 2016ರಲ್ಲಿ ಕೈಶವ್ ಅರೋರಾ ಅವರಿಂದ ಕೂಡ ದೀಪ್ಶಿಖಾ ನಾಗ್ಪಾಲ್ ದೂರವಾದರು.

ಸದ್ಯ ದೀಪ್ಶಿಖಾ ಏಕಾಂಗಿಯಾಗಿ ಬದುಕುತ್ತಿದ್ದಾರೆ. ಇವರಿಗೆ ಈಗ 48ರ ಹರೆಯ. ಇದರ ನಡುವೆ ನನಗೆ ಮತ್ತೊಂದು ಅಲ್ಲ ನಾಲ್ಕನೇ ಬಾರಿ ಮದುವೆಯಾಗಲು ಕೂಡ ನಾಚಿಕೆಯಾಗಲ್ಲ ಎನ್ನುವ ಮೂಲಕ ಸುದ್ದಿಯಲ್ಲಿದ್ದಾರೆ.

ಹೌದು, ಇನ್‌ಸ್ಟಂಟ್ ಬಾಲಿವುಡ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬದುಕಿನ ಹಳೆಯ ದಿನಗಳನ್ನು ಮೆಲುಕು ಹಾಕಿರುವ ದೀಪ್ಶಿಖಾ ನಾಗ್ಪಾಲ್ ಎರಡು ಬಾರಿ ನನಗೆ ಸಂಸಾರದ ಸುಖ ಸಿಗಲಿಲ್ಲ. ದಾಂಪತ್ಯ ಉಳಿಸಿಕೊಳ್ಳಲು ಕೂಡ ಆಗಲಿಲ್ಲ. ಬಹುಶಃ ನಾನು ಒಪ್ಪಿಕೊಂಡು ಮದುವೆಯಾದ ನನ್ನ ಮಾಜಿ ಸಂಗಾತಿಗಳು ನನಗೆ ಸೂಕ್ತವಲ್ಲದಿರಬಹುದು ಅಥವಾ ನಾನು ಅವರಿಗೆ ಹೊಂದಿಕೆಯಾಗದಿರಬಹುದು, ನನ್ನ ಮದುವೆ ಮುರಿದು ಬೀಳಲು ಇದೇ ಕಾರಣ ಇರಬಹುದು ಎಂದು ಹೇಳಿದ್ದಾರೆ.

ಮುಂದುವರೆದು ನಾನು ಯಾವಾಗಲೂ ತಪ್ಪು ಕಾರಣಕ್ಕೆ ಮದುವೆಯಾದೆ, ಮದುವೆಯಾಗುವಾಗ ಆಯ್ಕೆಗಳು ಸರಿ ಇರಬೇಕು, ನಿರ್ಧಾರ ಸರಿಯಾಗಿರಬೇಕು ಎಂದಿರುವ ದೀಪ್ಶಿಖಾ ಹೀಗಾಗಿ ನಾನು ಎಲ್ಲದಕ್ಕೂ ಆ ವ್ಯಕ್ತಿಗಳನ್ನು ದೂಷಿಸುವುದಿಲ್ಲ ಎಂದು ಹೇಳಿದ್ದಾರೆ.

ನಾನು ತುಂಬಾನೇ ರೊಮ್ಯಾಂಟಿಕ್, ನನಗೆ ಪ್ರೀತಿ ಮತ್ತು ಪ್ರಣಯದಲ್ಲಿ ನಂಬಿಕೆ ಇದೆ. ಮದುವೆಯಲ್ಲಿ ನಂಬಿಕೆ ಇದೆ. ಎರಡು ಬಾರಿ ದಾಂಪತ್ಯ ಜೀವನ ಮುಗಿದರು ಕೂಡ ನಾನು ಇನ್ನು ಬದುಕುತ್ತಿದ್ದೇನೆ ಎಂದಿರುವ ದೀಪ್ಶಿಖಾ ಮೂರು ಬಾರಿ ಅಥವಾ ನಾಲ್ಕು ಬಾರಿ ಮದುವೆಯಾಗಲು ನನಗೆ ಯಾವ ನಾಚಿಕೆ ಇಲ್ಲ ಎಂದು ಹೇಳಿದ್ದಾರೆ. ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿಯ ಪ್ರವೇಶವಾಗುತ್ತೆ ಎನ್ನುವ ಮಾತನ್ನು ನಾನು ಈಗ ನಂಬುತ್ತಿದ್ದೇನೆ ನೋಡೋಣ ಮುಂದೆ ಮತ್ತೆ ಮದುವೆಯಾಗಬಹುದು ಎಂದು ಹೇಳಿದ್ದಾರೆ.

ಪ್ರತಿಯೊಬ್ಬರಿಗೆ ಕೂಡ ಬದುಕುವ ಹಕ್ಕಿದೆ, ಒಂದು ತಪ್ಪಿಗೆ ಜೀವನದೂದ್ದಕ್ಕೂ ಶಿಕ್ಷೆ ಯಾಕೆ ಅನುಭವಿಸಬೇಕು ಎಂದು ಕೇಳಿರುವ ದೀಪ್ಶಿಖಾ ಜನ ನಮ್ಮ ತಪ್ಪು ಮಾತನಾಡುತ್ತಾರೆ ಎನ್ನುವುದು ನನಗೆ ಗೊತ್ತು, ಹಾಗಂಥ.. ನೋಡಿದವರು ಏನಂತಾರೆ ಎನ್ನುವ ಭಯದಲ್ಲಿ ನಾವು ಬದುಕಬಾರದು ಎಂದು ಹೇಳಿದ್ದಾರೆ.

ನನ್ನ ತಂದೆ ತಾಯಿಯ ನಡುವೆ ಕೂಡ ಜಗಳವಾಗುತ್ತಿತ್ತು ಆದರೆ ಆ ಜಗಳದಲ್ಲಿ ಕೂಡ ಅವರಲ್ಲಿ ಪ್ರೀತಿ ಇರುತ್ತಿತ್ತು, ಎಷ್ಟೇ ಜಗಳವಾದರು ಕೂಡ ಅವರು ವಿಚ್ಛೇದನ ಪಡೆಯಲಿಲ್ಲ ಆದರೆ ಈಗ ಕಾಲ ಬದಲಾಗಿದೆ. ಮನಸ್ಥಿತಿಗಳು ಕೂಡ ಬದಲಾಗಿವೆ ಎಂದು ಹೇಳಿರುವ ದೀಪ್ಶಿಖಾ ನಾಗ್ಪಾಲ್ ಈ ಬಾರಿ ನಾನು ಮಾಡಿದ ತಪ್ಪುಗಳನ್ನೇ ಮತ್ತೆ ಮಾಡುವುದಿಲ್ಲ, ತಪ್ಪು ಆಯ್ಕೆಯನ್ನು ಮಾಡುವುದಿಲ್ಲ ಎಂದು ಕೂಡ ಹೇಳಿದ್ದಾರೆ.

More from Filmibeat

English summary
Actress Deepshikha Nagpal opens up about love, divorce, and why she doesn't regret marrying three times.
Read more about: marriage divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X