For Quick Alerts
  ALLOW NOTIFICATIONS  
  For Daily Alerts

  ತೆರಿಗೆ ಪಾವತಿ ವಿಳಂಬ: ಶಿಲ್ಪಾ ಶೆಟ್ಟಿಗೆ ನ್ಯಾಯಾಲಯ ಸಮನ್ಸ್

  |

  ಇತ್ತೀಚೆಗೆ ನಟನೆಗಿಂತಲೂ ಹೆಚ್ಚಾಗಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಶಿಲ್ಪಾ ಶೆಟ್ಟಿ ಹೆಸರು ಆಗಾಗ್ಗೆ ಯಾವುದಾದರೊಂದು ವಿವಾದದ ಕಾರಣಕ್ಕೆ ಕೇಳಿಬರುತ್ತಲೇ ಇರುತ್ತದೆ.

  ಕೆಲವು ದಿನಗಳ ಹಿಂದಷ್ಟೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಗೆ ಸೇರಿದ ಸಂಸ್ಥೆ ತಮಗೆ ಚಿನ್ನದ ವಿಷಯದಲ್ಲಿ ವಂಚನೆ ಮಾಡಿದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈಗ ಇಂಥಹುದೇ ಒಂದು ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೆಸರು ಕೇಳಿಬರುತ್ತಿದೆ.

  ಮೂಲದಲ್ಲಿಯೇ ಕಡಿತವಾಗುವ ತೆರಿಗೆಯ ಹಣವನ್ನು ಹಿಂದಿರುಗಿಸುವಲ್ಲಿ ವಿಳಂಬ ಮಾಡಿರುವ ಕಾರಣ ಬಲ್ಲಾರ್ಡ್ ಪಿಯರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಗೆ ಸಮನ್ಸ್ ಜಾರಿ ಮಾಡಿದೆ.

  ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚನೆ

  ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚನೆ

  ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಅಥವಾ ಅಕ್ಟೋಬರ್ 20 ರಂದು ಜಾಮೀನಿಗೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಅಕ್ಟೋಬರ್ 19 ರಂದು ಪ್ರಕರಣದ ವಿಚಾರಣೆ ಇದೆ.

  ಲಕ್ಷಾಂತರ ಹಣ ಬಾಕಿ ಇದೆ

  ಲಕ್ಷಾಂತರ ಹಣ ಬಾಕಿ ಇದೆ

  2015-16 ರಲ್ಲಿ 88.80 ಲಕ್ಷ, 2017 ರಲ್ಲಿ 58.80 ಲಕ್ಷ ಹಣವನ್ನು ಸರ್ಕಾರಿ ಖಜಾನೆಗೆ ಪಾವತಿಸುವುದು ಬಾಕಿ ಉಳಿಸಿಕೊಂಡಿದೆಯಂತೆ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಒಡೆತನದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ.

  ನಿಗದಿತ ಸಮಯದ ಒಳಗೆ ಸರ್ಕಾರಕ್ಕೆ ಕಟ್ಟಬೇಕು

  ನಿಗದಿತ ಸಮಯದ ಒಳಗೆ ಸರ್ಕಾರಕ್ಕೆ ಕಟ್ಟಬೇಕು

  ಮೂಲದಲ್ಲಿ ತೆರಿಗೆ ಕಡಿತವಾದ ಹಣವನ್ನು ನಿಗದಿತ ಸಮಯದ ಒಳಗಾಗಿ ಸರ್ಕಾರಕ್ಕೆ ಸಲ್ಲಿಸುವ ಬದಲು ಸಂಸ್ಥೆಯು ಹಣವನ್ನು ತನ್ನ ಬಳಿಯೇ ಇಟ್ಟುಕೊಂಡಿದೆ. ಆದಾಯ ತೆರಿಗೆ ಕಾನೂನಿನ ಪ್ರಕಾರ ಇದು ಅಪರಾಧವಾಗಿದೆ ಎಂದು ವಕೀಲರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

  ಜೈಲಲ್ಲೇ Sanjana ಆಸೆಯನ್ನು ಈಡೇರಿಸ್ತಾರ ಪೊಲೀಸರು | Sanjana 31st Birthday | Filmibeat Kannada
  ನನ್ನ ಗಮನಕ್ಕೆ ಬಂದಿಲ್ಲ: ಶಿಲ್ಪಾ ಶೆಟ್ಟಿ

  ನನ್ನ ಗಮನಕ್ಕೆ ಬಂದಿಲ್ಲ: ಶಿಲ್ಪಾ ಶೆಟ್ಟಿ

  ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮತ್ತು ಒಬ್ಬ ಮುಖ್ಯ ಹಣಕಾಸು ಅಧಿಕಾರಿಗೆ ಸಮನ್ಸ್ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಲ್ಪಾ ಶೆಟ್ಟಿ, ಎಲ್ಲ ಕೆಲಸವನ್ನು ವ್ಯವಸ್ಥಾಪಕರು, ಹಣಕಾಸು ಅಧಿಕಾರಿಗಳೇ ನಿರ್ವಹಿಸುವ ಕಾರಣ ಇದು ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

  English summary
  Shilpa Shetty and Raj Kundra's company delayed in payment of TDS amount so court summoned both of them to appear in front of the court.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X