ಅಯ್ಯೋ ನಾನು ಸನ್ನಿ ಲಿಯೋನ್ ಅಲ್ಲ, ಯಾಕೆ ಹೀಗೆ ಪೀಡಿಸುತ್ತಿದ್ದೀರಾ?

"ಅಯ್ಯೋ ನಾನು ಸನ್ನಿ ಲಿಯೋನ್ ಅಲ್ಲ. ನನ್ನನು ಯಾಕೆ ಹೀಗೆ ಕಾಡುತ್ತಿದ್ದೀರಿ"? ಎಂದು ಯುವಕನೊಬ್ಬ ಅಳಲು ತೋಡಿಕೊಳ್ಳುತ್ತಿದ್ದಾರೆ. ಬಾಲಿವುಡ್ ನ ನಟಿ, ಮಾಜಿ ನೀಲಿ ರಾಣಿಯ ಅಭಿಮಾನಿಗಳ ಕಾಟಕ್ಕೆ ದೇಹಲಿ ಮೂಲದ ಯುವಕನೊಬ್ಬ ನೊಂದುಹೋಗಿದ್ದಾನೆ.

ಅಷ್ಟಕ್ಕೂ ಈ ಯುವಕನ ಹೀಗೆ ಅಲವತ್ತುಕೊಳ್ಳುತ್ತಿರುವ ಕಾರಣ, ಇತ್ತೀಚಿಗೆ ಬಾಲಿವುಡ್ ನಲ್ಲಿ ರಿಲೀಸ್ ಆದ 'ಅರ್ಜುನ್ ಪಟಿಯಾಲ' ಸಿನಿಮಾದ ಎಡವಟ್ಟು. ಹೌದು, ದಿಲ್ಜಿತ್ ದೋಸಾಂಜ್, ವರುಣ್ ಶರ್ಮಾ, ಕೃತಿ ಸನನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಅರ್ಜುನ್ ಪಟಿಯಾಲ' ಚಿತ್ರದಲ್ಲಿ ಸನ್ನಿಲಿಯೋನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ದೃಶ್ಯವೊಂದರಲ್ಲಿ ಸನ್ನಿಲಿಯೋನ್ ಫೋನ್ ನಂಬರ್ ಅನ್ನು ದಿಲ್ಜಿತ್ ಗೆ ನೀಡುತ್ತಾರೆ.

ಸನ್ನಿ ನೀಡಿರುವ ನಂಬರ್ ಅವರದ್ದೆ ಎಂದು ಅಭಿಮಾನಿಗಳು ಮುಗಿ ಬಿದ್ದು ಫೋನ್ ಮಾಡುತ್ತಿದ್ದಾರೆ. ಆದ್ರೆ ಆ ಫೋನ್ ನಂಬರ್ ಸನ್ನಿಲಿಯೋನ್ ಅವರದ್ದು ಅಲ್ಲ. ಬದಲಿಗೆ ದೆಹಲಿ ಮೂಲಕ ಪುನೀತ್ ಅಗರವಾಲ್ ಎನ್ನುವ ಯುವಕನದ್ದು. ಸನ್ನಿ ಲಿಯೋನ್ ಅಭಿಮಾನಿಗಳು ಪುನೀತ್ ಗೆ ಫೋನ್ ಮಾಡಿ ಕಾಟ ಕೊಡುತ್ತಿದ್ದಾರೆ.

Delhi Based A Man Complained To Police He Has Been Receiving Calls From Sunny Leone Fans

ಈ ಬಗ್ಗೆ ಹೇಳಿಕೊಂಡಿರುವ ಪುನೀತ್, ಸನ್ನಿ ಲಿಯೋನ್ ಅಭಿಮಾನಿಗಳು, ವಿದೇಶದಿಂದನು ಕರೆ ಮಾಡಿ ಮಾತನಾಡುತ್ತಿದ್ದಾರೆ. ಸನ್ನಿ ಲಿಯೋನ್ ಅಲ್ಲ ಎಂದು ಹೇಳಿದ್ರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರಂತೆ. ಅಲ್ಲದೆ ಅನೇಕರು ಫೋನ್ ಮಾಡಿ ಭೇಟಿಯಾಗುವಂತೆ ಹೇಳುತ್ತಿದ್ದಾರೆ. "ನಾನು ಸನ್ನಿ ಲಿಯೋನ್ ಅಲ್ಲ ನನ್ನನ್ನು ಬಿಟ್ಟುಬಿಡಿ" ಎಂದು ಹೇಳಿದ್ರು ಪುನೀತ್ ಮಾತನ್ನು ಯಾರು ಕೇಳುತ್ತಿಲ್ಲವಂತೆ.

ದಿನಕ್ಕೆ ಏನಿಲ್ಲವೆಂದರು 150 ರಿಂದ 200 ಫೋನ್ ಕರೆಗಳು ಬರುತ್ತಿವೆಯಂತೆ. ಇದರಿಂದ ಬೇಸತ್ತ ಪುನೀತ್ ಈಗ ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ. ಅನುಮತಿ ಇಲ್ಲದ ಹೇಗೆ ನನ್ನ ಫೋನ್ ನಂಬರ್ ಬಳಸಿಕಂಡಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಅಭಿಮಾನಿಗಳ ಕಟ ತಪ್ಪಿಸಿಕೊಳ್ಳುಲು ಪುನೀತ್ ಈಗ ಪೊಲೀಸ್ ರ ಮೊರೆ ಹೋಗಿದ್ದಾರೆ.

More from Filmibeat

English summary
Delhi based a man complained to police he has been receiving calls from bollywood Actress sunny leone fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X