ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ವಂಚನೆ; ಮಹಿಳೆ ಸೇರಿ ಬೆಂಗಳೂರಿನಲ್ಲಿ ಇಬ್ಬರ ಬಂಧನ
ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ ಲಕ್ಷ ಲಕ್ಷ ಹಣ ಲಪಟಾಯಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 'ಬಂಟಿ ಔರ್ ಬಬ್ಲಿ' ಸಿನಿಮಾ ನೋಡಿ ಸ್ಫೂರ್ತಿ ಪಡೆದು ತರುಣ್ ಶೇಖರ್ ಶರ್ಮಾ ಹಾಗೂ ಆಶಾ ಸಿಂಗ್ ಅಲಿಯಾಸ್ ಭಾವನಾ
ನಕಲಿ ಟಿವಿ ಸೀರಿಯಲ್ ನಿರ್ಮಾಪಕರು ಮತ್ತು ನಿರ್ದೇಶಕರ ಸೋಗಿನಲ್ಲಿ ನಟಿಯಾಗಲು ಬಯಸಿದ್ದ ಯುವತಿಯೊಬ್ಬಳಿಗೆ ವಂಚಿಸಿದ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೇಶಾದ್ಯಂತ ಇದೇ ರೀತಿಯ ವಂಚನೆಗಳಿಗೆ ಸಂಬಂಧಿಸಿದಂತೆ ಇವರ ವಿರುದ್ಧ ಇದುವರೆಗೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ಲಕ್ನೋ ಮೂಲದ 32 ವರ್ಷದ ತರುಣ್ ಶೇಖರ್ ಶರ್ಮಾ ಹಾಗೂ ದೆಹಲಿ ಮೂಲದ 29 ವರ್ಷದ ಆಶಾ ಸಿಂಗ್ ಅಲಿಯಾಸ್ ಭಾವನಾ ಬಂಧಿತರು. ಈ ಹಿಂದೆ ಇದೇ ರೀತಿ ಅವಕಾಶ ಕೊಡಿಸುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ನೀಡಿ ನಂಬಿ ಬಂದವರಿಂದ ಹಣ ಪಡೆದು ಮೋಸ ಮಾಡಿರುವ ಆರೋಪ ಇಬ್ಬರ ಮೇಲಿದೆ. "ಟಿವಿ ಧಾರಾವಾಹಿ ಮತ್ತು OTT ಶೋಗಳಲ್ಲಿ ನಟಿಸುವ ಅವಕಾಶ ಕೊಡಿಸುವ ನೆಪದಲ್ಲಿ ಜನರನ್ನು ಆಕರ್ಷಿಸುತ್ತಿದ್ದರು. ಇತ್ತೀಚಿನ ಪ್ರಕರಣದಲ್ಲಿ, ದೂರುದಾರರಿಗೆ 24 ಲಕ್ಷ ರೂ ವಂಚಿಸಲಾಗಿದೆ" ಎಂದು ದೆಹಲಿ ಉಪ ಪೊಲೀಸ್ ಆಯುಕ್ತ (ನೈಋತ್ಯ) ಅಮಿತ್ ಗೋಯಲ್ ಹೇಳಿದ್ದಾರೆ.
ತಮ್ಮನ್ನು ತಾವು ಸಿನಿಮಾ ನಿರ್ಮಾಪಕರು ಎಂದು ಬಿಂಬಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದರು. ಬಣ್ಣದಲೋಕದಲ್ಲಿ ಮಿಂಚಬೇಕು ಎಂಬ ಕನಸು ಕಾಣುವ ಯುವತಿಯರು ಆ ಪೋಸ್ಟ್ ನೋಡಿ ಅವರನ್ನು ಸಂಪರ್ಕಿಸುತ್ತಿದ್ದರು. ಅದೇ ರೀತಿ ದೂರದಾರರಿಂದ ಮೆಂಬರ್‌ಶಿಪ್ ಶುಲ್ಕ ಅದು ಇದು ಎಂದು ಅವರಿಂದ ಹಣ ಕೇಳಿ ಪಡೆದಿದ್ದಾರೆ. ₹24 ಲಕ್ಷ ರೂ. ಹಣ ವರ್ಗಾಯಿಸಿದ ನಂತರ ಫೋನ್ ಬ್ಲಾಕ್ ಮಾಡಿಕೊಂಡಿದ್ದಾರೆ.
ತನಿಖೆಯ ಸಮಯದಲ್ಲಿ, ಪೊಲೀಸರು ಹಣ ವರ್ಗಾವಣೆಯ ಜಾಡು ಹಿಡಿದು ಆರೋಪಿಗಳನ್ನು ಬೆಂಗಳೂರಿನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತರಿಂದ ಏಳು ಮೊಬೈಲ್ ಫೋನ್‌ಗಳು, 10 ಸಿಮ್ ಕಾರ್ಡ್‌ಗಳು, 15 ಬ್ಯಾಂಕ್ ಚೆಕ್‌ಬುಕ್‌ಗಳು ಮತ್ತು ಪಾಸ್‌ಬುಕ್‌ಗಳು, ಎಂಟು ಎಟಿಎಂ ಕಾರ್ಡ್‌ಗಳು ಮತ್ತು ಒಂದು ಜೊತೆ ಚಿನ್ನದ ಕಿವಿಯೋಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ನಡೆದ ಹಲವು ಇದೇ ರೀತಿಯ ವಂಚನೆಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ, ಅಷ್ಟೇ ಅಲ್ಲ ಜಮ್ಮು ಮತ್ತು ಕಾಶ್ಮೀರದಲ್ಲಿನ ಒಂದು ಪ್ರಕರಣದಲ್ಲಿ ಕೂಡ ಈ ಆರೋಪಿಗಳು ಬೇಕಾಗಿದ್ದಾರೆ ಎಂದು ಗೊತ್ತಾಗಿದೆ. ಪೊಲೀಸರ ತಣ್ತಪ್ಪಿಸಲು ತಪ್ಪಿಸಲು ಆಗಾಗ್ಗೆ ತಾವು ಇರುತ್ತಿದ್ದ ಸ್ಥಳಗಳನ್ನು ಬದಲಾಯಿಸಿ ಬೇರೆ ಬೇರೆ ನಗರಗಳಿಂದ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಬಂಧಿತರು ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಂಡು ವಿಲಾಸಿ ಜೀವನ ನಡೆಸುತ್ತಿದ್ದರು. ಸುಮಾರು 15 ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ವಿವಿಧ ರಾಜ್ಯಗಳಿಂದ ಪಡೆದ ಬೇರೆಬೇರೆ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದರು. ಈ ವಂಚಕರು ಆನ್‌ಲೈನ್ ವೀಡಿಯೊಗಳ ಮೂಲಕ ಜನರನ್ನು ವಂಚಿಸಲು ತರಬೇತಿ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಒಟ್ಟಾರೆ ಜನರಿಗೆ ಜಾಗೃತಿ ಮೂಡಿಸಿದರೂ ಹೀಗೆ ಪದೇ ಪದೆ ನಂಬಿ ಮೋಸ ಹೋಗುತ್ತಾರೆ.


Click it and Unblock the Notifications











