For Quick Alerts
  ALLOW NOTIFICATIONS  
  For Daily Alerts

  20 ಲಕ್ಷ ದಂಡ ವಿಧಿಸಿದ ನ್ಯಾಯಾಲಯ: ಜೂಹಿ ಚಾವ್ಲಾಗೆ ತೀವ್ರ ಮುಖಭಂಗ

  |

  5ಜಿ ನೆಟ್‌ವರ್ಕ್‌ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ನಟಿ ಜೂಹಿ ಚಾವ್ಲಾಗೆ ಭಾರಿ ಮುಖಭಂಗವಾಗಿದೆ. ಜೂಹಿ ಅರ್ಜಿಯನ್ನು ತಳ್ಳಿಹಾಕಿರುವ ನ್ಯಾಯಾಲವು ಪ್ರತಿಯಾಗಿ ಜೂಹಿ ಚಾವ್ಲಾಗೆ 20 ಲಕ್ಷ ಜುಲ್ಮಾನೆ ವಿಧಿಸಿದೆ.

  5ಜಿ ನೆಟ್‌ವರ್ಕ್‌ನಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಪ್ರಾಣಿ ಪಕ್ಷಿಗಳಿಗೆ ಹಾನಿಯಾಗುತ್ತದೆ. ಹಾಗಾಗಿ 5ಜಿ ನೆಟ್‌ವರ್ಕ್‌ ಅನ್ನು ಭಾರತದಲ್ಲಿ ಬಳಸದಂತೆ ನಿಷೇಧಿಸಬೇಕು ಎಂದು ನಟಿ ಜೂಹಿ ಚಾವ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

  ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಜೂಹಿ ಚಾವ್ಲಾ ಅರ್ಜಿ ಸಲ್ಲಿಸಿರುವುದು ಕೇವಲ ಪ್ರಚಾರ ಪಡೆಯಲು ಎಂದಿದ್ದಲ್ಲದೆ, ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕೆ ಹಾಗೂ ನ್ಯಾಯ ವ್ಯವಸ್ಥೆಯನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದಕ್ಕೆ 20 ಲಕ್ಷ ರೂಪಾಯಿ ದಂಡ ವಿಧಿಸಿದೆ.

  ವಿಚಾರಣೆಯ ಆನ್‌ಲೈನ್ ಲಿಂಕ್‌ ಶೇರ್ ಮಾಡಿದ್ದ ಜೂಹಿ

  ವಿಚಾರಣೆಯ ಆನ್‌ಲೈನ್ ಲಿಂಕ್‌ ಶೇರ್ ಮಾಡಿದ್ದ ಜೂಹಿ

  ಅರ್ಜಿಗೆ ಸಂಬಂಧಿಸಿದಂತೆ ಆನ್‌ಲೈನ್ ವಿಚಾರಣೆ ನಡೆದಿತ್ತು. ಆ ವಿಚಾರಣೆಯ ಲಿಂಕ್‌ ಅನ್ನು ಜೂಹಿ ಚಾವ್ಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಲಿಂಕ್‌ ಬಳಸಿ ಮೀಟಿಂಗ್‌ಗೆ ಬಂದ ಕೆಲವು ಜೂಹಿ ಚಾವ್ಲಾ ಅಭಿಮಾನಿಗಳು, ಜೂಹಿ ಚಾವ್ಲಾ ಸಿನಿಮಾದ ಹಾಡುಗಳನ್ನು ಹೇಳಿದ್ದರು. ಇದರಿಂದ ನ್ಯಾಯಮೂರ್ತಿಗಳು ತೀವ್ರ ಕುಪಿತಗೊಂಡಿದ್ದರು.

  ದೆಹಲಿ ಪೊಲೀಸರಿಗೆ ಸೂಚಿಸಿರುವ ನ್ಯಾಯಮೂರ್ತಿ

  ದೆಹಲಿ ಪೊಲೀಸರಿಗೆ ಸೂಚಿಸಿರುವ ನ್ಯಾಯಮೂರ್ತಿ

  ಆದೇಶದಲ್ಲಿ ಇದನ್ನೂ ದಾಖಲಿಸಿರುವ ನ್ಯಾಯಮೂರ್ತಿಗಳು 'ಆನ್‌ಲೈನ್‌ ವಿಚಾರಣೆ ಮಧ್ಯೆ ಬಂದು ಹಾಡು ಹಾಡಿದ ಆ ಹಾಡುಗಾರರು ಯಾರೆಂದು ಪತ್ತೆ ಮಾಡಿ' ಎಂದು ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ. ಆನ್‌ಲೈನ್ ವಿಚಾರಣೆ ನಡೆಯುವಾಗ ಜೂಹಿ ಅಭಿಮಾನಿಗಳು ಮಾಡಿದ ಕುಚೋದ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಜಾಗೃತಿ ಮೂಡಿಸುವ ಪ್ರಯತ್ನ ಎಂದಿದ್ದ ಜೂಹಿ

  ಜಾಗೃತಿ ಮೂಡಿಸುವ ಪ್ರಯತ್ನ ಎಂದಿದ್ದ ಜೂಹಿ

  5ಜಿ ವಿರುದ್ಧ ಹೋರಾಟ ಮಾಡಲು ಹೊರಟಿದ್ದ ಜೂಹಿ ಚಾವ್ಲಾ, ''ಇಂದು ಎಚ್ಚೆತ್ತುಕೊಂಡಿದ್ದಲ್ಲ. ಕಳೆದ 10 ವರ್ಷಗಳಿಂದ ವಿಕಿರಣ, ಸುರಕ್ಷಿತ ಸೆಲ್ ಫೋನ್ ಬಳಕೆ, ಸೆಲ್ ಫೋನ್ ಟವರ್ ರೇಡಿಯೇಶನ್ ಬಗ್ಗೆ ಮಾತನಾಡುತ್ತಿದ್ದೇನೆ ಮತ್ತು ಸಾಧ್ಯವಾದಷ್ಟು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇನೆ' ಎಂದಿದ್ದರು. ಆದರೆ ಅವರ ಹೋರಾಟ ಆರಂಭದಲ್ಲಿಯೇ ಧಾರುಣವಾಗಿ ಮುಗ್ಗರಿಸಿದೆ.

  ಇಂಥ ಪರಿಸ್ಥಿತಿ ಯಾವ ಕಲಾವಿದರಿಗೂ ಬರಬಾರದು | Senior Actress B Jayamma | Filmibeat Kannada
  ಕಬಿನಿ, ನಾಗರಹೊಳೆ ಸುತ್ತಾಡಿದ ಜೂಹಿ ಚಾವ್ಲಾ

  ಕಬಿನಿ, ನಾಗರಹೊಳೆ ಸುತ್ತಾಡಿದ ಜೂಹಿ ಚಾವ್ಲಾ

  ಕನ್ನಡದ ಪ್ರೇಮಲೋಕ, ಕಿಂದರ ಜೋಗಿ, ಶಾಂತಿ-ಕ್ರಾಂತಿ ಸಿನಿಮಾಗಳಲ್ಲಿ ನಟಿಸಿರುವ ಜೂಹಿ ಚಾವ್ಲಾ ಬಾಲಿವುಡ್‌ನ ಹೆಸರಾಂತ ಹಿರಿಯ ನಟಿ. ಐಪಿಎಲ್‌ನ ಕೆಕೆಆರ್‌ ತಂಡದ ಸಹ ಒಡತಿ ಆಗಿರುವ ಜೂಹಿ ಇತ್ತೀಚೆಗೆ ಪರಿಸರ ಸಂಬಂಧಿ ಹೋರಾಟಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೆ ಕರ್ನಾಟಕದ ಕಬಿನಿ, ನಾಗರಹೊಳೆ ಕಾಡಿಗೆ ಬಂದು ಸುತ್ತಾಡಿದ್ದರು ಜೂಹಿ.

  English summary
  Delhi High Court dismissed actress Juhi Chawla's 5G lawsuit, Rs 20 lakhs fine imposed. Court said its just publicity stunt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X