twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಬಯೋಪಿಕ್ ತಯಾರಕರಿಗೆ ಆಘಾತ: ಸಿನಿಮಾ ಮಾಡದಂತೆ ಹೈಕೋರ್ಟ್ ಆದೇಶ

    |

    ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಸಿನಿಮಾ ಮಾಡುವ ಕನಸುಕಂಡಿದ್ದ ನಿರ್ಮಾಪಕರಿಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ದಿವಂಗತ ನಟ ಸುಶಾಂತ್ ಬಗ್ಗೆ ಅವರ ಕುಟುಂಬದವರ ಅನುಮತಿ ಇಲ್ಲದೆ ಸಿನಿಮಾ ಮಾಡದಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.

    ಸುಶಾಂತ್ ಸಿಂಗ್ ತಂದೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಕೋರ್ಟ್ ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿದೆ. ಸುಶಾಂತ್ ಸಿಂಗ್ ಬಗ್ಗೆ ದಿ ಜಸ್ಟೀಸ್, ಸೂಸೈಡ್ ಆರ್ ಮರ್ಡರ್, ಶಶಾಂಕ್ ಹೆಸರಿನಲ್ಲಿ ಸಿನಿಮಾಗಳು ಅನೌನ್ಸ್ ಆಗಿದ್ದವು. ಆದರೀಗ ಚಿತ್ರಕ್ಕೆ ಕಂಟಕ ಎದುರಾಗಿದೆ. ಸಿನಿಮಾ ಮಾತ್ರವಲ್ಲದೆ, ಸುಶಾಂತ್ ಸಿಂಗ್ ಬಗ್ಗೆ ಪ್ರಕಟಣೆ, ವ್ಯಂಗ್ಯ ಚಿತ್ರ, ಪುಸ್ತಕ ಸೇರಿದಂತೆ ಇತ್ಯಾದಿಗಳ ವಿರುದ್ಧ ತಂದೆ ಕೆಕೆ ಸಿಂಗ್ ತಡೆಯಾಜ್ಞೆ ಕೋರಿದ್ದರು.

    ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?

    ಸಿನಿಮಾ ಮಾಡಿ ಬಿಡುಗಡೆ ಮಾಡುವುದರಿಂದ ಈ ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತೆ ಮತ್ತು ಸಾರ್ವಜನಿಕಕ ಗ್ರಹಿಕೆ ಕೂಡ ಬದಲಾಗುತ್ತೆ ಎಂದು ಮನವಿಯಲ್ಲಿ ಸೇರಿಸಲಾಗಿತ್ತು. ಅನೇಕರು ಮಗನ ಸಾವನ್ನು ವಿಭಿನ್ನ ಕತೆ ಮತ್ತು ಸಿದ್ಧಾಂತಗಳ ಮೂಲಕ ಖ್ಯಾತಿಯನ್ನು ಪಡೆಯುವ ಅವಕಾಶ ತೆಗೆದುಕೊಂಡಿದ್ದಾರೆ ಎಂದು ಕೆಕೆ ಸಿಂಗ್ ಹೇಳಿದ್ದಾರೆ.

    Delhi High court issues notice to makers of film on Sushant singh

    ಸುಶಾಂತ್ ಸಿಂಗ್ ರಾಜಪೂತ್ ಅವರ ಕುಟುಂಬದ ಪ್ರತಿಷ್ಠಿಗೆ ಧಕ್ಕೆ ತರುವಂತ ಯಾವುದೇ ವಿಚಾರಗಳನ್ನು ಕುಟುಂಬದ ಅನುಮತಿ ಇಲ್ಲದೆ ಪ್ರಕಟಿಸಬಾರದು ಎಂದು ಕೋರ್ಟ್ ಆದೇಶ ನೀಡಿದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಲ್ಲ.

    Recommended Video

    Radhika Kumaraswamy ಮಗಳ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು? | Filmibeat Kannada

    ಕಳೆದ ವರ್ಷ ಜೂನ್ ನಲ್ಲಿ ಸುಶಾಂತ್ ಸಿಂಗ್ ಮುಂಬೈ ಅಪಾರ್ಟ್ ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂದು ವರದಿ ಮಾಡಿದ್ದರು. ಬಳಿಕ ಈ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಿತ್ತು. ಡ್ರಗ್ಸ್, ಹಣಕಾಸು ವ್ಯವಹಾರ ಸೇರಿದಂತೆ ವಿವಿಧ ಕೋನಗಳಲ್ಲಿ ತನಿಖೆ ನಡೆಸಲಾಗಿದೆ. ಆದರೆ ಇನ್ನು ಅಂತಿಮ ವರದಿ ಬಂದಿಲ್ಲ.

    English summary
    Delhi High court issues notice to makers of film on Sushant singh. KK Singh moves delhi high court against biopic.
    Tuesday, April 20, 2021, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X