Don't Miss!
- Education
Chamarajanagar WCD Recruitment 2021: 223 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ - Sports
ಐಪಿಎಲ್ 2021: ಕೊಲ್ಕತ್ತಾ ಮತ್ತು ಪಂಜಾಬ್ ಮುಖಾಮುಖಿಯ ಅಂಕಿಅಂಶ - Automobiles
ಕೇವಲ 2.7 ಸೆಕೆಂಡ್ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ, ಹೊಸ ಫೆರಾರಿ ಕಾರು ಅನಾವರಣ - News
ಪಂಡಿತ್ ರಾಜನ್ ಮಿಶ್ರಾ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ - Lifestyle
ಈ ನೈಸರ್ಗಿಕ ವಿಷಯಗಳಿಂದ ನಿಮ್ಮ ಬ್ಲಾಕ್ ಹೆಡ್ಸ ನ್ನು ತೆಗೆದುಹಾಕಬಹುದು - Finance
ಚಿನ್ನದ ಬೆಲೆ ಇಳಿಕೆ: 3 ದಿನಗಳಲ್ಲಿ 1,000 ರೂಪಾಯಿ ಕುಸಿತ - Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ! - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಶಾಂತ್ ಸಿಂಗ್ ಬಯೋಪಿಕ್ ತಯಾರಕರಿಗೆ ಆಘಾತ: ಸಿನಿಮಾ ಮಾಡದಂತೆ ಹೈಕೋರ್ಟ್ ಆದೇಶ
ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಸಿನಿಮಾ ಮಾಡುವ ಕನಸುಕಂಡಿದ್ದ ನಿರ್ಮಾಪಕರಿಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ದಿವಂಗತ ನಟ ಸುಶಾಂತ್ ಬಗ್ಗೆ ಅವರ ಕುಟುಂಬದವರ ಅನುಮತಿ ಇಲ್ಲದೆ ಸಿನಿಮಾ ಮಾಡದಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ಸುಶಾಂತ್ ಸಿಂಗ್ ತಂದೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಕೋರ್ಟ್ ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿದೆ. ಸುಶಾಂತ್ ಸಿಂಗ್ ಬಗ್ಗೆ ದಿ ಜಸ್ಟೀಸ್, ಸೂಸೈಡ್ ಆರ್ ಮರ್ಡರ್, ಶಶಾಂಕ್ ಹೆಸರಿನಲ್ಲಿ ಸಿನಿಮಾಗಳು ಅನೌನ್ಸ್ ಆಗಿದ್ದವು. ಆದರೀಗ ಚಿತ್ರಕ್ಕೆ ಕಂಟಕ ಎದುರಾಗಿದೆ. ಸಿನಿಮಾ ಮಾತ್ರವಲ್ಲದೆ, ಸುಶಾಂತ್ ಸಿಂಗ್ ಬಗ್ಗೆ ಪ್ರಕಟಣೆ, ವ್ಯಂಗ್ಯ ಚಿತ್ರ, ಪುಸ್ತಕ ಸೇರಿದಂತೆ ಇತ್ಯಾದಿಗಳ ವಿರುದ್ಧ ತಂದೆ ಕೆಕೆ ಸಿಂಗ್ ತಡೆಯಾಜ್ಞೆ ಕೋರಿದ್ದರು.
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?
ಸಿನಿಮಾ ಮಾಡಿ ಬಿಡುಗಡೆ ಮಾಡುವುದರಿಂದ ಈ ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತೆ ಮತ್ತು ಸಾರ್ವಜನಿಕಕ ಗ್ರಹಿಕೆ ಕೂಡ ಬದಲಾಗುತ್ತೆ ಎಂದು ಮನವಿಯಲ್ಲಿ ಸೇರಿಸಲಾಗಿತ್ತು. ಅನೇಕರು ಮಗನ ಸಾವನ್ನು ವಿಭಿನ್ನ ಕತೆ ಮತ್ತು ಸಿದ್ಧಾಂತಗಳ ಮೂಲಕ ಖ್ಯಾತಿಯನ್ನು ಪಡೆಯುವ ಅವಕಾಶ ತೆಗೆದುಕೊಂಡಿದ್ದಾರೆ ಎಂದು ಕೆಕೆ ಸಿಂಗ್ ಹೇಳಿದ್ದಾರೆ.
ಸುಶಾಂತ್ ಸಿಂಗ್ ರಾಜಪೂತ್ ಅವರ ಕುಟುಂಬದ ಪ್ರತಿಷ್ಠಿಗೆ ಧಕ್ಕೆ ತರುವಂತ ಯಾವುದೇ ವಿಚಾರಗಳನ್ನು ಕುಟುಂಬದ ಅನುಮತಿ ಇಲ್ಲದೆ ಪ್ರಕಟಿಸಬಾರದು ಎಂದು ಕೋರ್ಟ್ ಆದೇಶ ನೀಡಿದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಲ್ಲ.
ಕಳೆದ ವರ್ಷ ಜೂನ್ ನಲ್ಲಿ ಸುಶಾಂತ್ ಸಿಂಗ್ ಮುಂಬೈ ಅಪಾರ್ಟ್ ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂದು ವರದಿ ಮಾಡಿದ್ದರು. ಬಳಿಕ ಈ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಿತ್ತು. ಡ್ರಗ್ಸ್, ಹಣಕಾಸು ವ್ಯವಹಾರ ಸೇರಿದಂತೆ ವಿವಿಧ ಕೋನಗಳಲ್ಲಿ ತನಿಖೆ ನಡೆಸಲಾಗಿದೆ. ಆದರೆ ಇನ್ನು ಅಂತಿಮ ವರದಿ ಬಂದಿಲ್ಲ.


Click it and Unblock the Notifications






























