twitter
    For Quick Alerts
    ALLOW NOTIFICATIONS  
    For Daily Alerts

    ಕಂಗನಾ ರನೌತ್ ವಿರುದ್ಧ ಸಿಡಿದೆದ್ದ ಸಿಖ್ ಸಮುದಾಯ, ದೂರು ದಾಖಲು

    |

    ಬಾಲಿವುಡ್ ನಟಿ ಕಂಗನಾ ರನೌತ್ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಾರೆ. ಸಿನಿಮಾ ವಿಚಾರಕ್ಕೆ ಹೆಚ್ಚು ಸುದ್ದಿಯಾಗದ ಕಂಗನಾ ಸಾಕಷ್ಟು ಕಾಂಟ್ರವರ್ಸಿ ವಿಚಾರವಾಗಿಯೇ ಸುದ್ದಿಯಾಗುತ್ತಿದ್ದಾರೆ. ಇದೀಗ ಕಂಗನಾಗೆ ಸಂಕಷ್ಟ ಎದುರಾಗಿದ್ದು ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿದೆ.

    ಬಾಲಿವುಡ್ ನಟಿ ಕಂಗನಾ ರನೌತ್ ಸಾಮಾಜಿಕ ಜಾಲತಾಣದಲ್ಲಿ ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆಂದು ಆರೋಪಿಸಿ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿ ಡಿಎಸ್‌ಜಿಎಂಸಿ ದೂರು ಸಲ್ಲಿಸಿದೆ. ಹಾಗೂ ಕಂಗನಾ ರನೌತ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿಕೊಂಡಿದೆ.

    ಈ ಹಿಂದೆ ಕಂಗನಾ "1984ರಲ್ಲಿ ಹಾಗೂ ಅದಕ್ಕೂ ಮುಂಚೆ ಸಾಮೂಹಿಕ ಹತ್ಯೆ ಮತ್ತು ನರಮೇಧದ ಬಗ್ಗೆ ಮಾತನಾಡಿರುವ ಕಂಗನಾ, ಇವೆಲ್ಲವೂ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ವ್ಯಾವಹಾರಿಕ ಮತ್ತು ಯೋಜಿತ ನಡೆಯಾಗಿದೆ. ಸಿಖ್ ಸಮುದಾಯದವರು ಇಂದಿರಾ ಗಾಂಧಿ ಅವರ ಷೂ ಕೆಳಗೆ ಸಲುಗಿ ಹೋಗಿದ್ದರು ಎಂದು ಅವಹೇಳನಕಾರಿ ಭಾಷೆ ಬಳಸಿದ್ದಾರೆ ಕಂಗನಾ" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ

    Delhi sikh body files complaint against Kangana Ranaut

    ಶಿರೋಮಣಿ ಅಕಾಲಿದಳದ ನಾಯಕ ಹಾಗೂ ಡಿಎಸ್‌ಜಿಎಂಸಿ ಅಧ್ಯಕ್ಷ ಮನ್‌ಜಿಂದರ್ ಸಿಂಗ್ ಸಿರ್ಸಾ ನೇತ್ರತ್ವದ ನಿಯೋಗವು ಕಂಗನಾ ರನೌತ್ ವಿರುದ್ಧ ದೂರು ಸಲ್ಲಿದೆ. ಹಾಗೂ ಕಂಗನಾ ಅವರು ರೈತರ ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಖಲಿಸ್ತಾನಿ ಆಂದೋಲನಕ್ಕೆ ಹೋಲಿಸಿದ್ದಾರೆ. ಸಿಖ್ ಸಮುದಾಯವನ್ನ ಖಲಿಸ್ತಾನಿ ಉಗ್ರರು ಎಂದು ಬಿಂಬಿಸಿದ್ದಾರೆ ಎಂದು ತಿಳಿದು ಬಂದಿದೆ.

    ಈ ಹಿಂದೆ ಕೂಡ ಕಂಗನಾ ಇದೇ ರೀತಿಯಾಗಿ ಮಾತಿನ ಚಾಟಿ ಬೀಸಿದ್ದರು. "ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ತಂದುಕೊಟ್ಟವರು ಹುತಾತ್ಮರಾಗಿದ್ದರು. ಬ್ರಿಟೀಷರ ವಿರುದ್ಧ ಹೋರಾಡಿದವರ ಪ್ರಾಣ ತೆಗೆದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಪ್ರಾಣವನ್ನೇ ಬಲಿ ಕೊಟ್ಟ ನಾಯಕರು, ಹಾಗೂ ಅದೆಷ್ಟೋ ಅಮಾಯಕ ಸಾರ್ವಜನಿಕರನ್ನು ಕೊಂದ ಬ್ರಿಟಿಷರ ವಿರುದ್ಧ ಯಾವುದೇ ಕೇಸ್ ದಾಖಲಿಸದೇ, ಎಲ್ಲಾ ರೀತಿಯ ಸಾಧ್ಯತೆಗಳು ಇದ್ದರೂ ಅವರನ್ನು ಸುಮ್ಮನೆ ಯಾಕೆ ಬಿಡಲಾಗಿತ್ತು" ಎಂದು ಪ್ರಶ್ನೆ ಮಾಡಿದ್ದರು.

    ಹಾಗೆ ಈ ಹಿಂದೆ ಕಂಗನಾ ಅವರು 1947ರಲ್ಲಿ ನಮಗೆ ಸಿಕ್ಕಿರೋದು ಭಿಕ್ಷೆ ಎಂಬ ಹೇಳಿಕೆಯನ್ನು ಖಾಸಗೀ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು.ಈ ಸಂದರ್ಭರ್ದಲ್ಲಿ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಕಂಗನಾ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ಮೇಲೆ ದೇಶ ದ್ರೋಹದ ಕೇಸ್ ದಾಖಲಿಸುವಂತೆ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷೆ ಪ್ರೀತಿ ಮೆನನ್ ಮುಂಬೈ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು.

    ಹಾಗೇ ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಆ ಸಂದರ್ಭದಲ್ಲಿ ಟ್ವೀಟ್ ಮಾಡಿ ಕಂಗನಾ ನೀಡಿರುವ ಈ ಹೇಳಿಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ. ಅವರ ಈ ಹೇಳಿಕೆಯನ್ನು ದೇಶದ್ರೋಹ ಎನ್ನಬೇಕಾ, ಹುಚ್ಚುತನ ಎನ್ನಬೇಕಾ ಎಂದು ಆಕ್ರೋಶ ವ್ಯಕ್ತ ಪಡಿಸಿದ್ರು. ಇಷ್ಟೆಲ್ಲಾ ವಿರೋಧದ ನಡುವೆಯೂ ಈಗ ಮತ್ತೆ "ನಾನು ಈಗಲೂ ಹೇಳುತ್ತೇನೆ 1947ರಲ್ಲಿ ನಮಗೆ ಸಿಕ್ಕಿರೋದು ಭಿಕ್ಷೆಯೇ. ನೀವು ಹೇಳಿದಂತೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತಿರೋದು ನಾನಲ್ಲ. ನಿಜವಾಗಿಯೂ ದೇಶಕ್ಕಾಗಿ ಹೋರಾಟ ಮಾಡಿದ ಭಗತ್ ಸಿಂಗ್ , ಸುಭಾಷ್ ಚಂದ್ರ ಬೋಸ್ ಪ್ರಾಣ ತೆತ್ತರು. ಅವರಿಗೆ ಯಾವ ಕ್ರೆಡಿಟ್ ಕೂಡ ಸಿಗಲಿಲ್ಲಾ" ಎಂದಿದ್ದರು. ಹೀಗೆ ಸಾಲು ಸಾಲಾಗಿ ಕಂಗನಾ ಸ್ಟೇಟ್‌ಮೆಂಟ್‌ಗಳು ಸಾಕಷ್ಟು ಸುದ್ದಿ ಮಾಡುತ್ತಿದ್ದು ಹಲವರ ಆಕ್ರೋಶಕ್ಕೂ ಇದು ಕಾರಣವಾಗುತ್ತಿದೆ. ಯಾರು ಎಷ್ಟೇ ಕಂಗನಾ ಸ್ಟೇಟ್‌ಮೆಂಟ್‌ಗಳನ್ನು ವಿರೋಧಿಸಿದರು ಕಂಗನಾ ಮಾತ್ರ ಯಾವುದಕ್ಕೂ ತಲೆಕೆಡಿಸಿ ಕೊಂಡಂತಿಲ್ಲ.

    English summary
    The committee said that Ranaut had intentionally and deliberately portrayed the farmers protest as Khalistani movement.
    Monday, November 22, 2021, 21:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X