twitter
    For Quick Alerts
    ALLOW NOTIFICATIONS  
    For Daily Alerts

    8 ತಿಂಗಳ ಮಗಳ ಅಂತ್ಯಸಂಸ್ಕಾರ ಮುಗಿಸಿ ನೇರ ಶೂಟಿಂಗ್‌ಗೆ ಹೋಗಿದ್ದರು ಸರೋಜ್ ಖಾನ್

    |

    ಕೆಲವು ಸಂಗತಿಗಳು ಹೀಗೆಯೇ... ಎಷ್ಟೋ ಮಂದಿ ತಮ್ಮ ವೈಯಕ್ತಿಕ ಜೀವನದ ಕಹಿಯನ್ನು ಮರೆತು ವೃತ್ತಿ ಬದ್ಧತೆ ಮೆರೆಯುತ್ತಾರೆ. ಅನೇಕ ಬಾರಿ ಅವರ ತ್ಯಾಗ, ನೋವು, ಶ್ರಮ ಹೊರ ಜಗತ್ತಿಗೆ ತಿಳಿದೇ ಇರುವುದಿಲ್ಲ.

    Recommended Video

    ತೆಲುಗು ಟಿವಿ ಲೋಕದಲ್ಲಿ ದಾಖಲೆ ಬರೆದಿದ್ಯಂತೆ KGF | TRP | KGF1 | Filmibeat Kannada

    ಅಂತಹದ್ದೊಂದು ದುರಂತ ಘಟನೆ, ಇತ್ತೀಚೆಗೆ ನಿಧನರಾದ ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಬದುಕಿನಲ್ಲಿಯೂ ನಡೆದಿತ್ತು. 'ಮಾಸ್ಟರ್‌ ಜಿ' ಎಂದು ಬಾಲಿವುಡ್‌ನಲ್ಲಿ ಎಲ್ಲರಿಂದ ಗೌರವದಿಂದ ಕರೆಯಿಸಿಕೊಳ್ಳುತ್ತಿದ್ದ ಸರೋಜ್ ಖಾನ್, ಅದ್ಭುತ ನೃತ್ಯಪಟು. ಅವರ ಜತೆ ಕೆಲಸ ಮಾಡಲು ಒಂದು ಕಾಲದಲ್ಲಿ ನಟಿಯರು ಮುಗಿಬೀಳುತ್ತಿದ್ದರು. ಏಕೆಂದರೆ ಅವರು ಸಂಯೋಜಿಸಿದ ನೃತ್ಯವೆಂದರೆ ಹಿಟ್ ಆಗುವುದು ಖಚಿತ ಎಂಬಂತೆ ಇತ್ತು. ಅವರ ನೃತ್ಯ ಸಂಯೋಜನೆಯಲ್ಲಿ ಹೆಜ್ಜೆ ಹಾಕಿದ ನಟಿಯರು ಆ ನೃತ್ಯಕ್ಕಾಗಿ ಹೆಸರು ಗಳಿಸುತ್ತಿದ್ದರು.

    ಆದರೆ ತಮ್ಮ ಬದುಕಿನ ಬಹಳ ಕೆಟ್ಟ ಗಳಿಗೆಯಲ್ಲಿಯೂ ಸರೋಜ್ ಖಾನ್ ಸಂಯೋಜಿಸಿದ್ದ ನೃತ್ಯವೊಂದು ಭರ್ಜರಿ ಹಿಟ್ ಆಗಿತ್ತು ಎನ್ನುವುದು ಮನಕಲಕುತ್ತದೆ. ಮುಂದೆ ಓದಿ...

    ಸೆಟ್‌ನಲ್ಲಿ ಶಾರುಖ್ ಖಾನ್ ಕೆನ್ನೆಗೆ ಬಾರಿಸಿದ್ದರು ಈ ಮಹಿಳೆಸೆಟ್‌ನಲ್ಲಿ ಶಾರುಖ್ ಖಾನ್ ಕೆನ್ನೆಗೆ ಬಾರಿಸಿದ್ದರು ಈ ಮಹಿಳೆ

    ಮಗಳನ್ನು ಕಳೆದುಕೊಂಡಿದ್ದರು

    ಮಗಳನ್ನು ಕಳೆದುಕೊಂಡಿದ್ದರು

    ಮಗುವಾದ ಬಳಿಕವೂ ಸರೋಜ್ ಖಾನ್ ತಮ್ಮ ವೃತ್ತಿಯನ್ನು ತ್ಯಜಿಸಿರಲಿಲ್ಲ. ಎಂಟು ತಿಂಗಳು ಐದು ದಿನವಷ್ಟೇ ತುಂಬಿದ ಅವರ ಪುಟಾಣಿ ಮಗಳು ಇದ್ದಕ್ಕಿದ್ದಂತೆ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಹೆತ್ತ ತಾಯಿ ತನ್ನ ಮಗು ಕಣ್ಣೆದುರೇ ಸತ್ತಾಗ ಆಗುವ ನೋವು ಹೇಗಿರಬಹುದು? ಅಂದು ಸರೋಜ್ ಖಾನ್ ಅತೀವ ವೇದನೆ ಪಟ್ಟಿದ್ದರು.

    ಕರ್ತವ್ಯ ಪ್ರಜ್ಞೆ

    ಕರ್ತವ್ಯ ಪ್ರಜ್ಞೆ

    ಆದರೆ ಸರೋಜ್ ಖಾನ್ ಅಂದು ಜವಾಬ್ದಾರಿಯನ್ನೂ ಹೊತ್ತಿದ್ದರು. ತಮಗಾಗಿ ವಹಿಸಿದ್ದ ಕೆಲಸವನ್ನು ಮಾಡಲೇಬೇಕಿತ್ತು. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಶೂಟಿಂಗ್‌ಗೆ ಸಿದ್ಧತೆ ನಡೆಸಲಾಗುತ್ತದೆ. ಅದರಲ್ಲಿಯೂ ಹಾಡುಗಳಿಗೆ ಸಿನಿಮಾ ರಂಗ ಅಧಿಕ ಹಣ ವ್ಯಯಿಸುತ್ತದೆ. ಮಗಳು ಸತ್ತ ನೋವು ಒಂದೆಡೆಯಾದರೆ, ಕರ್ತವ್ಯ ಪ್ರಜ್ಞೆ ಅವರನ್ನು ಎಚ್ಚರಿಸುತ್ತಿತ್ತು.

    'ಅಂಥ ದುಡುಕಿನ ನಿರ್ಧಾರ ಯಾಕೆ ತೆಗೆದು ಕೊಂಡಿರಿ ಸುಶಾಂತ್' ಎಂದು ಸರೋಜ್ ಖಾನ್ ಕೊನೆಯದಾಗಿ ಕೇಳಿದ್ದರು'ಅಂಥ ದುಡುಕಿನ ನಿರ್ಧಾರ ಯಾಕೆ ತೆಗೆದು ಕೊಂಡಿರಿ ಸುಶಾಂತ್' ಎಂದು ಸರೋಜ್ ಖಾನ್ ಕೊನೆಯದಾಗಿ ಕೇಳಿದ್ದರು

    ಟ್ರೈನ್ ಹತ್ತಿದರು

    ಟ್ರೈನ್ ಹತ್ತಿದರು

    ಆ ದಿನ ಸಂಜೆ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸುವುದಾಗಿ ಸರೋಜ್ ಖಾನ್ ತಿಳಿಸಿದ್ದರು. ಅವರು ಅಲ್ಲಿಗೆ ಹೋಗದೆ ಇದ್ದರೆ ನಿರ್ಮಾಪಕರಿಗೆ ಲಕ್ಷಾಂತರ ರೂ ನಷ್ಟವಾಗುತ್ತಿತ್ತು. ಮಗುವನ್ನು ಕಳೆದುಕೊಂಡ ಆಘಾತದಲ್ಲಿಯೇ ಅಂತ್ಯ ಸಂಸ್ಕಾರ ಮುಗಿಸಿದ್ದ ಅವರು ಸಂಜೆ ಐದು ಗಂಟೆಗೆ ಚಿತ್ರೀಕರಣದ ಸ್ಥಳಕ್ಕೆ ಹೋಗಬೇಕಾದ ಟ್ರೈನ್ ಹತ್ತಿದ್ದರು.

    ಧಮ್ ಮಾರೋ ಧಮ್

    ಧಮ್ ಮಾರೋ ಧಮ್

    ಹೀಗೆ ಆ ನೋವಿನಲ್ಲಿಯೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಅವರು ಸಂಯೋಜಿಸಿದ ನೃತ್ಯ ಯಾವುದು ಗೊತ್ತೇ? ಇಂದಿಗೂ ಯುವಜನರು ಹುಚ್ಚೆದ್ದು ಕುಣಿಯುವ, ಆ ಕಾಲಘಟ್ಟದಲ್ಲಿ ಸಂಚಲನ ಮೂಡಿಸಿದ್ದ 'ಹರೇ ಕೃಷ್ಣ ಹರೇ ರಾಮ್‌'ನ 'ಧಮ್ ಮಾರೋ ಧಮ್' ಹಾಡು.

    ನಿರಾಶ್ರಿತರಾಗಿ ಬಂದವರು

    ನಿರಾಶ್ರಿತರಾಗಿ ಬಂದವರು

    'ನಾನು ಬಹಳ ಬಡ ಕುಟುಂಬದಿಂದ ಬಂದವಳು. ನನ್ನ ಪೋಷಕರು ಈಗಿನ ಪಾಕಿಸ್ತಾನ ಮೂಲದವರು. ಭಾರತ-ಪಾಕಿಸ್ತಾನ ವಿಭಜನೆಯಾದ ಬಳಿಕ ಅವರು ಇಲ್ಲಿಗೆ ನಿರಾಶ್ರಿತರಾಗಿ ಬಂದಿದ್ದರು. ಏಕೆಂದರೆ ಅವರಿಗೆ ಅಲ್ಲಿಯೂ ಏನೂ ಇರಲಿಲ್ಲ. ಅವರು ಬಾಂಬೆಗೆ ಬಂದ ಒಂದು ವರ್ಷದಲ್ಲಿ ನಾನು ಹುಟ್ಟಿದ್ದೆ. ಜೀವನ ನಡೆಸುವುದು ದುರ್ಬರವಾಗಿದ್ದ ಕಾಲ. ಮೂರು ವರ್ಷದವಳಾಗಿದ್ದಾಗಲೇ ನನ್ನ ನೆರಳು ನೋಡಿಕೊಂಡು ನರ್ತಿಸಲು ಆರಂಭಿಸಿದ್ದೆ. ನನ್ನ ಮನೆಯಲ್ಲಿ ಯಾರೊಬ್ಬರಿಗೂ ನೃತ್ಯ ಗೊತ್ತಿರಲಿಲ್ಲ. ಸಂಗೀತ, ಛಾಯಾಗ್ರಾಹಣದ ಅರಿವೇ ಇರಲಿಲ್ಲ ಎಂದಿದ್ದರು.

    ದಾರಿ ತೋರಿಸಿದ ವೈದ್ಯರು

    ದಾರಿ ತೋರಿಸಿದ ವೈದ್ಯರು

    ನನ್ನ ಅಮ್ಮ ನನಗೆ ಹುಚ್ಚು ಹಿಡಿದಿದೆ ಎಂದುಕೊಂಡು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು. ನನ್ನ ಅದೃಷ್ಟವೆಂದರೆ ಆ ವೈದ್ಯರು ಸಿನಿಮಾ ರಂಗದ ನಂಟು ಹೊಂದಿದ್ದರು. ಆ ವೈದ್ಯರು ಅಮ್ಮನಿಗೆ 'ಆಕೆ ನರ್ತಿಸಲು ಬಯಸುತ್ತಿದ್ದಾಳೆ. ನೀವೇಕೆ ತಡೆಯುತ್ತೀರಿ? ಎಂದು ಪ್ರಶ್ನಿಸಿದರು. ಅದೇ ಚಿತ್ರರಂಗ ಪ್ರವೇಶಿಸಲು ದಾರಿಯಾಯಿತು ಎಂದು ಸರೋಜ್ ತಿಳಿಸಿದ್ದರು.

    ಬಾಲಿವುಡ್‌ನ ಹಿರಿಯ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನಬಾಲಿವುಡ್‌ನ ಹಿರಿಯ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

    English summary
    Demised veteran choreographer Saroj Khan lost her eight month old daughter, buried her and went for Dum Maaro Dum Song shooting.
    Monday, July 6, 2020, 17:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X